Udayavni Special

‘ಬಿಜೆಪಿ ಸರಕಾರ ಕೋಮುವಾದ ಬಿತ್ತುತ್ತಿದೆ ‘

Team Udayavani, Dec 3, 2018, 11:42 AM IST

jananudi-3-12.jpg

ಮಂಗಳೂರು : ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸುವುದರ ಜತೆಗೆ ಕೋಮುವಾದ ಬಿತ್ತುತ್ತಿದೆ ಎಂದು ದಿನೇಶ್‌ ಅಮೀನ್‌ ಮಟ್ಟು ಅವರು ಹೇಳಿದರು. ಅಭಿಮತ ಆಶ್ರಯದಲ್ಲಿ ನಂತೂರಿನ ಶಾಂತಿ ಕಿರಣದಲ್ಲಿ ರವಿವಾರ‌ ನಡೆದ ‘ಜನ ನುಡಿ 2018’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಸಂಸತ್‌ ಚುನಾವಣೆಯಲ್ಲಿ ಬಿಜೆಪಿ ಶೇ.31ರಷ್ಟು ಮತ ಪಡೆದರೆ, ಅದರ ವಿರುದ್ಧ ಶೇ.69ರಷ್ಟು ಮತ ಬಿದ್ದಿವೆ. ಆದರೆ ಅವೆಲ್ಲ ಹಂಚಿಹೋಗಿರುವುದರಿಂದ ಬಿಜೆಪಿ ಗೆಲುವು ಸಾಧಿಸಿದೆ. ಈಗ ನಾವು ಶೇ.69ರಷ್ಟು ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು ಎಂದರು.

ಮಹಾತ್ಮಾ ಗಾಂಧೀಜಿ ಹತ್ಯೆಯ ತನಿಖೆಯ ಬಳಿಕ ಅತ್ಯಂತ ಬದ್ಧತೆಯಿಂದ ನಡೆದ ತನಿಖೆ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯದ್ದು. ಗೌರಿ ಹತ್ಯೆಯ ಸೂತ್ರಧಾರರ ಕುರಿತು ತನಿಖಾ ಸಂಸ್ಥೆ ಬೊಟ್ಟು ಮಾಡುತ್ತಿದೆ. ಕೋಮುವಾದಿಗಳು ಸೈದ್ಧಾಂತಿಕವಾಗಿ ಎದುರಿಸಲಾಗದೆ ಗೌರಿ ಲಂಕೇಶ್‌, ಪನ್ಸಾರೆ, ಕಲ್ಬುರ್ಗಿ ಹತ್ಯೆ ಮಾಡಿದ್ದಾರೆ. ಗೌರಿ ಹತ್ಯೆಯ ಕುರಿತು ಸರಿಯಾದ ತನಿಖೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತನಿಖೆ ತಾರ್ಕಿಕ ಅಂತ್ಯ ಕಂಡಿದೆ ಎಂದರು. ಬಿಜೆಪಿಯನ್ನು ಕಮ್ಯುನಿಸ್ಟ್‌ ಪಕ್ಷಕ್ಕೆ ಮಾತ್ರ ಎದುರಿಸಲು ಸಾಧ್ಯ. ಆದರೆ ಕಮ್ಯುನಿಸ್ಟರಿಗೆ ಹೋರಾಟ ಮಾತ್ರ ಗೊತ್ತು ವಿನಾ ರಾಜಕೀಯ ಗೊತ್ತಿಲ್ಲ. ಕಮ್ಯುನಿಸ್ಟರು ಪ್ರಾದೇಶಿಕವಾಗಿ ಇನ್ನಷ್ಟು ಬೆಳೆಯುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಲಿತ ಹೋರಾಟಗಾರ ಮಾವಳ್ಳಿ ಶಂಕರ್‌ ಮಾತನಾಡಿ, ಸಂವಿಧಾನ ವಿರೋಧಿಗಳನ್ನು ನಾವು 2019ರ ಚುನಾವಣೆಯಲ್ಲಿ ಸರಿಯಾಗಿ ಎದುರಿಸಬೇಕು ಎಂದರು. ದಿಲ್ಲಿಯ ಜವಾಹರಲಾಲ್‌ ನೆಹರೂ ವಿವಿಯ ನಿವೃತ್ತ ಪ್ರಾಧ್ಯಾಪಕ, ರಾಜ್ಯಶಾಸ್ತ್ರಜ್ಞ ಪ್ರೊ| ವಲೇರಿಯನ್‌ ರೋಡ್ರಿಗಸ್‌ ಸಮಾರೋಪ ಭಾಷಣ ಮಾಡಿ, ಬಹುತ್ವವನ್ನು ರಕ್ಷಿಸುವುದಕ್ಕಾಗಿ ಗಟ್ಟಿಯಾದ ಪರ್ಯಾಯಗಳನ್ನು ಕಂಡುಕೊಳ್ಳುವ ಅನಿವಾರ್ಯ ಸ್ಥಿತಿಯನ್ನು ದೇಶ ಈಗ ಎದುರಿಸುತ್ತಿದೆ ಎಂದರು. ಕಾರ್ಮಿಕ ಹೋರಾಟಗಾರ್ತಿ ಎಸ್‌. ವರಲಕ್ಷ್ಮೀ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಚೇತರಿಕೆ ಹಾದಿಯಲ್ಲಿ ಕರಾವಳಿ ಜವುಳಿ ಉದ್ಯಮ

ಚೇತರಿಕೆ ಹಾದಿಯಲ್ಲಿ ಕರಾವಳಿ ಜವುಳಿ ಉದ್ಯಮ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ನಮೀಬಿಯಾ ವಿಜಯ ಸಂಭ್ರಮ

ನಮೀಬಿಯಾ ವಿಜಯ ಸಂಭ್ರಮ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.