ಕಾಣಿಯೂರು: ಬೇಸಗೆ ಮಳೆಗೆ ವಿವಿಧೆಡೆ ಹಾನಿ

Team Udayavani, Apr 8, 2019, 5:03 PM IST

ಕಾಣಿಯೂರು: ಶುಕ್ರವಾರ ರಾತ್ರಿ ಸುರಿದ ಮಳೆಯ ಜತೆ ಬೀಸಿದ ಭಾರಿ ಪ್ರಮಾಣದ ಗಾಳಿಗೆ ಕಾಣಿಯೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಕಾಣಿಯೂರು ಪೇಟೆ ಭಾಗದ ಹಲವು ಕಡೆ ಮರಗಳು ಮುರಿದು ವಿದ್ಯುತ್‌ ಕಂಬಗಳು ತುಂಡಾಗಿದೆ. ಕಾಣಿಯೂರು ಮುಗರಂಜ ತಿಮ್ಮಪ್ಪ ಗೌಡರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ರಸ್ತೆ ಸಂಚಾರ ಬಂದ್‌ ಕಾಣಿಯೂರು ಮಾದೋಡಿ ಕಾನಾವು ಪೆರುವಾಜೆ ಸಂಪರ್ಕ ರಸ್ತೆಗೆ ಮರಗಳು ಮತ್ತು ವಿದ್ಯುತ್‌ ಕಂಬಗಳು ಉರುಳಿ ರಸ್ತೆ ಸಂಚಾರ ಬಂದ್‌ ಆಗಿದೆ. ಮೆಸ್ಕಾಂ ಸಿಬಂದಿ ವಿದ್ಯುತ್‌ ಲೈನ್‌ ಸರಿಪಡಿಸುವ ಕಾರ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೃಷಿಕರಿಗೆ ನಷ್ಟ ಕಾಣಿಯೂರು ರಾಮತೀರ್ಥ ಮಠದ ಬಯಲು ರಂಗ ಮಂದಿರದ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ.
ಪಾಲ್ತಾಡಿಯ ಚೆನ್ನಾವರ ಚೆಕ್ಕಿತ್ತಡಿ ವಸಂತಿ ಗೌಡ ಅವರ ಪಂಪ್‌ ಶೆಡ್‌ಗೆ ಮರ ಬಿದ್ದು ಹಾನಿಯಾಗಿದೆ. ಕೃಷಿಕರ ತೋಟಗಳಲ್ಲಿ ಅಡಿಕೆ ಮರ, ಬಾಳೆ ಗಿಡಗಳು ಮುರಿದು ಅಪಾರ ನಷ್ಟವಾಗಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ