ಪುಟಾಣಿಗಳಿಂದ ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪಾರ್ಚಣೆ
Team Udayavani, Jul 26, 2018, 9:26 PM IST
ನಗರ: ಇಲ್ಲಿನ ಅಂಬಿಕಾ ಬಾಲವಿದ್ಯಾಲಯದಲ್ಲಿ ಗುರುವಾರ ಕಾರ್ಗಿಲ್ ವಿಜಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಮಾಜಿ ಸೈನಿಕ ಪ್ರದೀಪ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಿಕ ಕೆಲಸ, ಸಾಹಸಗಳ ಕುರಿತ ಸ್ಥಬ್ದ ಚಿತ್ರವನ್ನು ವೀಡಿಯೋ ಮೂಲಕ ಮಕ್ಕಳಿಗೆ ತೋರಿಸಿ ವಿವರಣೆ ನೀಡಲಾಯಿತು.
ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ
ಇದೇ ಸಂದರ್ಭದಲ್ಲಿ ವಿದ್ಯಾಲಯವು ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭರವಸೆ ನೀಡಿದಂತೆ ಅಂಬಿಕಾ ಬಾಲ ವಿದ್ಯಾಲಯದಲ್ಲಿನ ಇಬ್ಬರು ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಘೋಷಿಸಲಾಯಿತು. ಅನಂತರ ಮಿನಿ ವಿಧಾನಸೌಧದ ಎದುರುಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿಯ ಬಳಿ ತೆರಳಿ ಸೈನಿಕರ ಸ್ಮಾರಕಕ್ಕೆ ಬಾಲ ವಿದ್ಯಾಲಯದ ಪುಟಾಣಿಗಳು ಪುಷ್ಪಾರ್ಚಣೆ ಮಾಡಿದರು. ಮಾಜಿ ಸೈನಿಕ ಪ್ರದೀಪ್ ಅವರ ನೇತೃತ್ವದಲ್ಲಿ ಗೌರವ ಸಲ್ಲಿಸಲಾಯಿತು. ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ಸೇರಿದಂತೆ ಹಲವು ಮಂದಿ ಪಾಲ್ಗೊಂಡರು.