Udayavni Special

ಬಂಟ್ವಾಳ ವಿಧಾನಸಭಾ ಕ್ಷೇತ್ರ: ಇಲ್ಲಿ ಜನರದ್ದು ಅಭಿವೃದ್ಧಿಯ ಧ್ಯಾನ

Team Udayavani, May 4, 2018, 8:20 AM IST

Siddakatte-3-5.jpg

ಸಿದ್ಧಕಟ್ಟೆ: ರಾಜಕೀಯ ಪಕ್ಷಗಳು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದರೂ ಜನರು ತಣ್ಣಗಿದ್ದಾರೆ. ಇಲ್ಲಿನವರದ್ದೇನಿದ್ದರೂ ಅಭಿವೃದ್ಧಿ ಧ್ಯಾನ. ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂಬುದು ಎಲ್ಲರ ಭಾವನೆ. ಆದರೆ ನಿರ್ದಿಷ್ಟ ಪಕ್ಷದ ಪರ- ವಿರೋಧ ಯಾವುದೂ ತೋರುತ್ತಿಲ್ಲ. ಅಭಿವೃದ್ಧಿ ಮಾಡಿದರೆ ನಮಗೆ ಯಾರೂ ಆಗಬಹುದು ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತಾರೆ. ಬಂಟ್ವಾಳ ಕ್ಷೇತ್ರದ ಕೆಲವು ಪ್ರದೇಶಗಳಿಗೆ ಸುತ್ತು ಹಾಕಿಬಂದ ಉದಯವಾಣಿಗೆ ಕಂಡು ಬಂದದ್ದು ಹತ್ತು ಹಲವು ಸಂಗತಿ. ಅಮಾrಡಿ, ಅರಳ, ರಾಯಿ, ಕುಕ್ಕಿಪ್ಪಾಡಿ ಹಾಗು ಸಂಗ ಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಮಂದಿ ಮತದಾರರೊಂದಿಗೆ ಸಣ್ಣದೊಂದು ಅನೌಪ ಚಾರಿಕ ಮಾತುಕತೆಯನ್ನೂ ನಡೆಸಲಾಯಿತು.

ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ಬಂಟ್ವಾಳ-ಮೂಡಬಿದಿರೆ ರಸ್ತೆ ಮೇಲ್ದರ್ಜೆಗೇರಬೇಕು ಎಂಬುದು ಪ್ರಮುಖ ಬೇಡಿಕೆ. ಹಲವು ವರ್ಷಗಳಿಂದ ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ಅನುದಾನ ಬಿಡುಗಡೆಯಾಗಿದೆ ಎನ್ನಲಾಗುತ್ತಿದೆ. ಕಾಮಗಾರಿ ಆರಂಭವಾದರೆ ಮಾತ್ರ ಗ್ಯಾರಂಟಿ. ಸೇತುವೆ ಅಭಿವೃದ್ಧಿ ಬಿಟ್ಟರೆ ತಿರುವಿನಿಂದ ಕೂಡಿದ ರಸ್ತೆ ಬದಲಾಗಿಲ್ಲ ಎಂಬ ಕೊರಗು ಮತದಾರರದ್ದು.

ಈ ಭಾಗದ ಪ್ರಮುಖ ಪ್ರದೇಶವಾಗಿರುವ ಸಿದ್ಧಕಟ್ಟೆಯಲ್ಲಿ ಅಭಿವೃದ್ಧಿ ಕೂಗು ಕೇಳಿಬರುತ್ತಿದೆ. ಪೇಟೆಯಲ್ಲಿ ದೊಡ್ಡ ಮಟ್ಟದ ಪ್ರಯಾಣಿಕರ ತಂಗುದಾಣದ ಬೇಡಿಕೆ ಇದೆ. ಸಿದ್ಧಕಟ್ಟೆಯಲ್ಲಿ ಶಾಲೆ-ಕಾಲೇಜು, ಪೊಲೀಸ್‌ ಹೊರಠಾಣೆ, ಪ್ರಮುಖ ಬ್ಯಾಂಕ್‌ಗಳು, ಸಾಕಷ್ಟು ಸಂಖ್ಯೆಯಲ್ಲಿ ಅಂಗಡಿಗಳಿದ್ದು, ಸರಕಾರಿ ಆರೋಗ್ಯ ಕೇಂದ್ರ ಅಗತ್ಯ ಎನ್ನುತ್ತಾರೆ ಮತದಾರರು.

‘ನಮ್ಮಲ್ಲಿ ಎರಡೂ ಪಕ್ಷದಲ್ಲೂ ಗೆಳೆಯರಿದ್ದಾರೆ, ಯಾರು ಗೆದ್ದರೂ ಒಂದೇ. ಅಭಿವೃದ್ಧಿ ಮಾಡುವವರು ಯಾರೇ ಆದರೂ ಪರವಾಗಿಲ್ಲ. ಎಲ್ಲರೊಂದಿಗೆ ಸಮಾನರಾಗಿದ್ದೇವೆ’ ಎನ್ನುತ್ತಾರೆ ಸಿದ್ಧಕಟ್ಟೆಯ ವರ್ತಕರೊಬ್ಬರು.

ಮತದಾನಕ್ಕೆ ಉತ್ತಮ ಸ್ಪಂದನೆ
ಒಂದಿಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇನ್ನಷ್ಟು ಬೇಡಿಕೆಗಳಿವೆ ಎಂದು ಮಾತನ್ನು ಆರಂಭಿಸುವ ರಾಮಚಂದ್ರ ಶೆಟ್ಟಿ ಅಣ್ಣಳಿಕೆ ಅವರು, ರಾಯಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಅಲ್ಲಿಗೆ ಪೂರ್ಣಕಾಲಿಕ ವೈದ್ಯರ ಬೇಡಿಕೆಯೂ ಇದೆ. ಅಣ್ಣಳಿಕೆಯಲ್ಲಿ ಸಾರ್ವಜನಿಕ ಶೌಚಾಲಯವೊಂದರ ನಿಮಾರ್ಣಕ್ಕೆ ನಾನೇ 20,000 ರೂ. ನೀಡಿದ್ದೇನೆ. ನಮ್ಮೂರ ಮಂದಿ ಪ್ರತಿಬಾರಿಯೂ ಉತ್ಸಾಹ ದಿಂದಲೇ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.

ಅಭಿವೃದ್ಧಿಗೆ ಬೆಂಬಲ
ಅಭಿವೃದ್ಧಿಗೆ ಓಟು ಎನ್ನುವ ಧಾಟಿಯಲ್ಲೇ ಮಾತು ಮುಂದುವರಿಸುತ್ತಾರೆ ಅಮಾrಡಿಯ ರಾಜೇಶ್‌ ಶೆಟ್ಟಿ. ‘ರಾಜಕೀಯದ ಕುರಿತು ಆಸಕ್ತಿ ಕಡಿಮೆ ಇದೆ. ಹಳ್ಳಿ ಹಳ್ಳಿಯೂ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಆಶಯ, ಅಭಿವೃದ್ಧಿ ಮಾಡುವವರು ಯಾರು ಗೆದ್ದು ಬಂದರೂ ನಮಗೆ ಸಂತೋಷವೇ. ಒಟ್ಟಿನಲ್ಲಿ ಅಭಿವೃದ್ಧಿ ಮಂತ್ರಕ್ಕೆ ನಮ್ಮ ಬೆಂಬಲ’ ಎನ್ನುತ್ತಾರೆ.

ಮೊದಲ ಬಾರಿ ಮತದಾನ
ನಾನು ಮೊದಲ ಬಾರಿಗೆ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಮ್ಮ ಭಾಗದಲ್ಲಿ ರಸ್ತೆಗಳು ಅಭಿವೃದ್ಧಿಯಾಗಬೇಕಿವೆ. ಕೆಲವು ಕಾಲನಿಗಳಲ್ಲಿ ಜನರ ಮನೆಗಳಿಗೆ ಹೋಗಲು ದಾರಿಗಳೇ ಇಲ್ಲ. ಕುಡಿಯುವ ನೀರಿನ ಸಮಸ್ಯೆಯ ಕುರಿತು ನನಗೆ ತಿಳಿದಿಲ್ಲ. ರಸ್ತೆಗಳು ಸಿಂಗಲ್‌ ಲೈನ್‌ ಆಗಿದ್ದು, ದ್ವಿಪಥ ರಸ್ತೆಗಳಾಗಬೇಕಿವೆ.
– ಹರ್ಷಿತ್‌, ಕೊಯಿಲ

ರಾಜಕೀಯದ ಅರಿವಿಲ್ಲ
ಅಭಿವೃದ್ಧಿ- ರಾಜಕೀಯದ ಬಗ್ಗೆ ನಮಗೆ ಅರಿವಿಲ್ಲ. ಮೊದಲ ಬಾರಿಗೆ ಮತದಾನ ಮಾಡುತ್ತಿದ್ದು, ಸಂತೋಷದಿಂದ ಪಾಲ್ಗೊಳ್ಳುತ್ತಿದ್ದೇನೆ. ನಮ್ಮ ಪ್ರದೇಶದಲ್ಲಿ ಎರಡೂ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಅಲ್ಲಲ್ಲಿ ಸಭೆಗಳು ನಡೆಯುತ್ತಿವೆ. ಅವೆಲ್ಲವನ್ನೂ ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ.
– ಪ್ರಫುಲ್ಲಾ, ಮಾವಿನಕಟ್ಟೆ

— ಕಿರಣ್‌ ಸರಪಾಡಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್

ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

ಭಾರೀ ಮಳೆ: ಸಸಿಹಿತ್ಲು ಭಗವತೀ ದೇವಸ್ಥಾನದ ಅಂಗಣಕ್ಕೆ ನೀರು

ಭಾರೀ ಮಳೆ: ಸಸಿಹಿತ್ಲು ಭಗವತೀ ದೇವಸ್ಥಾನದ ಅಂಗಣಕ್ಕೆ ನೀರು

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮ: 6 ಮಂದಿಗೆ ಗಾಯ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮ: 6 ಮಂದಿಗೆ ಗಾಯ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಬೀದರ್ ನಲ್ಲಿ 77 ಕೋವಿಡ್ ಪಾಸಿಟಿವ್ ಕೇಸ್ ಪತ್ತೆ! ಸೋಂಕಿತರ ಸಂಖ್ಯೆ 5823ಕ್ಕೆ ಏರಿಕೆ

ಬೀದರ್ ನಲ್ಲಿ 77 ಕೋವಿಡ್ ಪಾಸಿಟಿವ್ ಕೇಸ್ ಪತ್ತೆ! ಸೋಂಕಿತರ ಸಂಖ್ಯೆ 5823ಕ್ಕೆ ಏರಿಕೆ

ಕರಿನಂಜನಪುರ ರಸ್ತೆಗೆ ಮಾಜಿ ಶಾಸಕ ಸಿ.ಗುರುಸ್ವಾಮಿ ಹೆಸರಿಡಲು ಗುಂಡ್ಲುಪೇಟೆ ಶಾಸಕ ಸಲಹೆ

ಕರಿನಂಜನಪುರ ರಸ್ತೆಗೆ ಮಾಜಿ ಶಾಸಕ ಸಿ.ಗುರುಸ್ವಾಮಿ ಹೆಸರಿಡಲು ಗುಂಡ್ಲುಪೇಟೆ ಶಾಸಕ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.