ಅಭ್ಯರ್ಥಿಗಳೆಲ್ಲ ಲೆಗ್‌ ವರ್ಕ್‌ನಲ್ಲೇ ಬ್ಯುಸಿ

Team Udayavani, May 4, 2018, 8:05 AM IST

Puttur-Constituency-600.jpg

ಪುತ್ತೂರು: ಈ ಕ್ಷೇತ್ರದಲ್ಲಿ ನಿಜ ಹೇಳಬೇಕೆಂದರೆ ಇನ್ನೂ ಚುನಾವಣೆಯ ಬಿರುಗಾಳಿ ಎದ್ದಿಲ್ಲ. ಹೀಗೆ ಮಾತು ಉದಯವಾಣಿಯ ಪ್ರತಿನಿಧಿ ಮತದಾರರೊಂದಿಗೆ ಆರಂಭಿಸಿದರೆ, ‘ಯಾವ ಬಿರುಗಾಳಿ ಸಾರ್‌? ಎಲ್ಲವನ್ನೂ ಚುನಾವಣಾ ಆಯೋಗ ಹಿಡಿದಿಟ್ಟುಕೊಂಡಿದೆಯಲ್ಲ’ ಎನ್ನುತ್ತಾರೆ ಮತದಾರರೊಬ್ಬರು.

ಆಬ್ಬರದ ಪ್ರಚಾರದ ಗೊಡವೆ ಇಲ್ಲಿಯೂ ಇಲ್ಲ. ಅಭ್ಯರ್ಥಿಗಳು ತಂಡ ಕಟ್ಟಿಕೊಂಡು ಮನೆ ಮನೆ ಪ್ರಚಾರದಲ್ಲಿದ್ದಾರೆ. ಅಂದರೆ ಲೆಗ್‌ ವರ್ಕ್‌ (ಕಾಲಿಗೆ ಕೆಲಸ) ಸ್ವಲ್ಪ ಜಾಸ್ತಿಯಾಗಿದೆ. ‘ಒಳ್ಳೆಯದಾಯಿತು. ಈಗಲಾದರೂ ಮತ ಕೇಳ್ಕೊಂಡು ಮನೆ ಬಾಗಿಲಿಗೆ ಬರ್ತಾರೆ. ಇಲ್ಲದಿದ್ದರೆ ಐದು ವರ್ಷಗಳಲ್ಲಿ ಒಮ್ಮೆಯೂ ಬರ್ತಿರಲಿಲ್ಲ’ ಎಂದರು ಹೆಸರು ಬೇಡ ಎಂದ ಮತದಾರರೊಬ್ಬರು. ನಗರದ ಹೊಟೇಲೊಂದರ ಬಳಿ ಮಾತಿಗೆ ಸಿಕ್ಕವರೊಬ್ಬರು, ‘ಅಭ್ಯರ್ಥಿಗಳ ಬಗ್ಗೆ ಮಾಹಿತಿ ಇದೆ. ಯಾರಾದರೂ ಒಬ್ಬರಿಗೆ ಮತ ಹಾಕಬೇಕು. ಅದು ಮಾಡದೇ ಇರಲಾಗದು’ ಎಂದರಷ್ಟೇ ಹೊರತು ಒಲವು ಬಿಟ್ಟುಕೊಡಲಿಲ್ಲ. ಈ ಬಾರಿ ಕ್ಷೇತ್ರ ಸ್ವಲ್ಪ ಬದಲಾಗಿದೆ. ಬಂಡಾಯದ ಗಾಳಿ ಎನ್ನಲಾರದು. ಆದರೆ ಪ್ರಮುಖ ಪಕ್ಷಗಳಲ್ಲಿ ಸಣ್ಣದೊಂದು ಬೇಸರದ ದನಿ ಇದೆ. ಅಭಿವೃದ್ಧಿ ಕುರಿತ ಚರ್ಚೆ ಸಣ್ಣದಾಗಿ ಸಂಚರಿಸುತ್ತಿದೆ.

ಒಂದಷ್ಟು ಪ್ರಚಾರ ಕಾರ್ಯಗಳು ಕಂಡುಬರುತ್ತಿದ್ದರೂ ದೊಡ್ಡ ಮಟ್ಟಿನ ಸದ್ದು ಕಾಣಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳ ಪ್ರಚಾರ ಮಾತ್ರ ಎಗ್ಗಿಲ್ಲದೇ ನಡೆಯುತ್ತಿದೆ. ಅಭ್ಯರ್ಥಿ ಘೋಷಣೆಗೆ ಮೊದಲಿದ್ದ ಉತ್ಸಾಹ, ರಂಗು ಈಗ ತೋರುತ್ತಿಲ್ಲ ಎಂಬುದು ಕ್ಷೇತ್ರ ಸಂಚಾರ ಮಾಡಿದಾಗ ಅಪವಾದವಲ್ಲ ಎಂದೆನಿಸಿತು. ಎರಡೂ ಪಕ್ಷಗಳಲ್ಲೂ ಬಂಡಾಯ ಆತಂಕ ಇತ್ತು. ಅದೀಗ ತಣ್ಣಗಾಗಿದೆ. ಬಹುಶಃ ಹೈಕಮಾಂಡ್‌ ಕಸರತ್ತು ಮಾಡಿರಬೇಕು ಎನ್ನುತ್ತಾರೆ ದರ್ಬೆಯ ಮತದಾರರೊಬ್ಬರು. ಕಾಂಗ್ರೆಸ್‌ನ ಒಂದು ತಂಡದ ಹೊರತು ಯಾರೂ ಮತ ಕೇಳಲು ಬಂದಿಲ್ಲ. ಪುತ್ತೂರು ನಗರ ಅಭಿವೃದ್ಧಿ ಚರಂಡಿ ಶುಚಿತ್ವ, ಬಲ್ಲೆ ತೆರವು ಇಷ್ಟಕ್ಕೆ ಸೀಮಿತ ಎನ್ನುತ್ತಾರೆ ಶ್ರೀಧರ್‌. ಪೇಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲ ಸಭೆಗಳು ನಡೆದಿವೆ. ಆದರೆ ಇವರ್ಯಾರೂ ವೈಯಕ್ತಿಕ ಭೇಟಿ ಮಾಡಿಲ್ಲ. ಅಭ್ಯರ್ಥಿಗಳ ನಿಲುವು ಏನೆಂದು ತಿಳಿವ ಪ್ರಯತ್ನ ಇದುವರೆಗೆ ಸಾಧ್ಯವಾಗಿಲ್ಲ ಎಂಬುದು ಕಾರ್ತಿಕ್‌ ರ ಅಭಿಪ್ರಾಯ. ಎಲ್ಲ ಮುಖಂಡರು ಗ್ರಾಮಾಂತರದ ಮನೆ ಮನೆ ಭೇಟಿಯಲ್ಲೇ ಇದ್ದಾರೆ. ಅಭ್ಯರ್ಥಿ ಆಯ್ಕೆಗೆ ಮೊದಲು ಇದ್ದ ರಂಗು ಪೇಟೆ ಸುತ್ತಮುತ್ತ ಕಾಣಿಸುತ್ತಿಲ್ಲ ಎನ್ನುತ್ತಾರೆ ಬನ್ನೂರಿನ ಅನಂತ್‌.

ರಿಂಗ್‌ ರೋಡ್‌, ರಸ್ತೆ ಅಗಲೀಕರಣ, ಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ಬನ್ನೂರು ಡಂಪಿಂಗ್‌ ಯಾರ್ಡ್‌ಗೆ ವ್ಯವಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿ ಮೊದಲಾದ ಸಂಗತಿಗೆ ಗಮನ ನೀಡಬೇಕಿತ್ತು.
– ಕಿರಣ್‌, ಬನ್ನೂರು

— ಗಣೇಶ್‌ ಕಲ್ಲರ್ಪೆ

ಟಾಪ್ ನ್ಯೂಸ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದೆಹಲಿ ಬೈಕ್ ಮಾಲೀಕರಿಗೆ ಶುರುವಾದ “ಸೆಕ್ಸ್” ಸಮಸ್ಯೆ

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

bommai

ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುತ್ತೇವೆ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

high court

ಸಿಡಿ ತನಿಖಾ ವರದಿ ಅನುಮೋದಿಸಿದ ಎಸ್‌ಐಟಿ

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

fight

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.