ಕಸ್ತೂರಿ ರಂಗನ್‌ ವರದಿ:ವಸ್ತುನಿಷ್ಠ ಅಭಿಪ್ರಾಯಕ್ಕೆ ಶಾಸಕ ಪೂಂಜಾ ಆಗ್ರಹ

Team Udayavani, Aug 13, 2018, 11:55 AM IST

kasuri.jpg

ಬೆಳ್ತಂಗಡಿ: ಕಸ್ತೂರಿರಂಗನ್‌ ವರದಿ ಜಾರಿಗೆ ಸಂಬಂಧಿಸಿ ರಾಜ್ಯ ಸರಕಾರವು ದ.ಕ. ಜಿಲ್ಲೆಯಲ್ಲಿ ತೊಂದರೆ ಅನುಭವಿಸುವ 44 ಗ್ರಾಮಗಳಲ್ಲಿ ಮರು ಸರ್ವೇ ನಡೆಸಿ, ಜನವಸತಿ ರಹಿತ ಪ್ರದೇಶವನ್ನು ಬೇರ್ಪಡಿಸಿ ಶೀಘ್ರ ವಸ್ತುನಿಷ್ಠ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಕೇಂದ್ರಕ್ಕೆ ನೀಡಬೇಕಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಆ. 25ರೊಳಗೆ ತನ್ನ ಅಭಿಪ್ರಾಯ ಮಂಡಿಸಬೇಕಾದ ರಾಜ್ಯ ಸರಕಾರ ಗಾಢನಿದ್ದೆಯಲ್ಲಿದೆ. ಕೇರಳ ಸೇರಿದಂತೆ ವಿವಿಧ ಸರಕಾರಗಳು ಈಗಾಗಲೇ ವಸ್ತುನಿಷ್ಠ ವರದಿ ಸಲ್ಲಿಸಿದ್ದರೂ ನಮ್ಮ ಸರಕಾರ ಸುಮ್ಮನಿದೆ ಎಂದರು. ಗ್ರಾಮಗಳಿಗೆ ತೊಂದರೆಯಾಗುವ ಕುರಿತು ವಸ್ತುನಿಷ್ಠ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಈಗಾಗಲೇ ಎಲ್ಲ ಗ್ರಾಮಗಳಲ್ಲೂ ವಿಶೇಷ ಗ್ರಾಮಸಭೆ ನಡೆಸಿ ವರದಿ ವಿರೋಧಿಸಿ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಆದರೆ ಅದನ್ನು ಮುಂದುವರಿಸುವ ಕುರಿತು ಹಿಂದಿನ ಉಸ್ತುವಾರಿ ಸಚಿವರಾಗಲಿ, ಶಾಸಕರಾಗಲಿ ಪ್ರಯತ್ನಿಸಲಿಲ್ಲ. ವರದಿ ಜಾರಿಯಾದರೆ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ 44 ಗ್ರಾಮಗಳ ಜನರು ಮೂಲ ಸೌಕರ್ಯ ವಂಚಿತರಾಗಲಿದ್ದಾರೆ. ಇದಕ್ಕೆ ರಾಜ್ಯ ಸರಕಾರ, ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದರು.ರಕ್ಷಿತಾರಣ್ಯದ ನಿರ್ದಿಷ್ಟ ಸ್ಥಳ (ಝೀರೋ ಪಾಯಿಂಟ್ ) ಗುರುತಿಸಿ ವಸತಿ ರಹಿತ ಪ್ರದೇಶದ ವರೆಗೆಕಸ್ತೂರಿ ವರದಿಗೆ ಸೇರಿಸಿ ಕೊಳ್ಳುವಂತೆ ಸರ್ವೇ ನಡೆಸಬೇಕಿದೆೆ ಎಂದರು.

ಹೋರಾಟಕ್ಕೆ ಸಿದ್ಧತೆ?
ಈ ಕುರಿತು ಸರಕಾರ, ಜಿಲ್ಲಾಡಳಿತ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ಹೋರಾಟ ರೂಪಿಸುವ ಕುರಿತು 44 ಗ್ರಾಮಗಳ ಪ್ರತಿನಿಧಿಗಳನ್ನು ಸೇರಿಸಿ ಆ. 17ರಂದು ಬೆಳ್ತಂಗಡಿಯಲ್ಲಿ ಸಮಾಲೋಚನಾ ಸಭೆ ನಡೆಸಲಿದ್ದೇವೆ. ಸಭೆಗೆ ಶಾಸಕರು, ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರನ್ನೂ ಆಹ್ವಾನಿಸುತ್ತೇವೆ ಎಂದು ಪೂಂಜಾ ತಿಳಿಸಿದರು.

ಬೈದು ಕಳುಹಿಸಿದ್ದರು!
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ ಮಾತನಾಡಿ, ವರದಿಯಿಂದ ತೊಂದರೆ ಯಾಗುವ ಕುರಿತು ಹಿಂದಿನ ಅರಣ್ಯ ಸಚಿವರ ಬಳಿ ಹೋದಾಗ ಇದರಿಂದ ಏನೂ ತೊಂದರೆ ಆಗುವುದಿಲ್ಲ, ನಿಮಗೇನೂ ಗೊತ್ತಿಲ್ಲ ಎಂದು ನಮ್ಮನ್ನು ಬೈದು ಕಳುಹಿಸಿದ್ದರು. ಮುಂದೆ ವರದಿ ಜಾರಿಯಾದರೆ ನಾವು ಅರಣ್ಯ ಅಧಿಕಾರಿಗಳನ್ನು ಕಾರ್ಯಪ್ರವೃತ್ತರಾಗಲು ಬಿಡೆವು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಪ್ಪ ಬೇಂಗಾಲ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

crime (2)

ಕಲಬುರಗಿ: ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

ರಾಮ ಮಂದಿರ ಅಡಿಪಾಯ ಆಗಸ್ಟ್‌ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ

1aa

ಜಮ್ಮು& ಕಾಶ್ಮೀರದ ಕುರಿತು ಪಾಕ್‌ ನಿಲುವಳಿಗೆ ಭಾರತ ತಿರಸ್ಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಕಲಿ ದಾಖಲೆ ಮೂಲಕ ಹಕ್ಕುಪತ್ರ ಪಡೆದ ಪ್ರಕರಣ : ಹಕ್ಕುಪತ್ರ ರದ್ದುಪಡಿಸಿ ತಹಶೀಲ್ದಾರ್‌ ಆದೇಶ

ನಕಲಿ ದಾಖಲೆ ಮೂಲಕ ಹಕ್ಕುಪತ್ರ ಪಡೆದ ಪ್ರಕರಣ : ಹಕ್ಕುಪತ್ರ ರದ್ದುಪಡಿಸಿ ತಹಶೀಲ್ದಾರ್‌ ಆದೇಶ

ಕಬಕ: ರೈಲು ಢಿಕ್ಕಿ ಹೊಡೆದು ಯುವಕ ಸಾವು

ಕಬಕ: ರೈಲು ಢಿಕ್ಕಿ ಹೊಡೆದು ಯುವಕ ಸಾವು

ಬಂಟ್ವಾಳ: ಬೈಕ್‌ ಕಳವು ಪ್ರಕರಣ: ಮೂವರ ಬಂಧನ

ಬಂಟ್ವಾಳ: ಬೈಕ್‌ ಕಳವು ಪ್ರಕರಣ: ಮೂವರ ಬಂಧನ

ವಿಟ್ಲ: ಮಾರಣಾಂತಿಕ ಹಲ್ಲೆ; ಆರೋಪಿಗಳ ಬಂಧನ

ವಿಟ್ಲ: ಮಾರಣಾಂತಿಕ ಹಲ್ಲೆ; ಆರೋಪಿಗಳ ಬಂಧನ

ರಾಜ್ಯದ 3,100 ವಿಶೇಷ ಚೇತನರಿಗೆ ಉಚಿತ ಸಲಕರಣೆ ವಿತರಣೆ

ರಾಜ್ಯದ 3,100 ವಿಶೇಷ ಚೇತನರಿಗೆ ಉಚಿತ ಸಲಕರಣೆ ವಿತರಣೆ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಹೊಸ ಸೇರ್ಪಡೆ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

crime (2)

ಕಲಬುರಗಿ: ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.