ಕಟೀಲು ದೇವಾಲಯದ ಆನೆಯ ಫುಟ್ಬಾಲ್ ಆಟ! ವಿಡಿಯೋ ವೈರಲ್
Team Udayavani, Dec 26, 2022, 4:53 PM IST
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗಿರಿಜಾ ಯಾನೆ ಮಹಾಲಕ್ಷ್ಮೀ ಹೆಸರಿನ 31 ಪ್ರಾಯದ ಆನೆಯ ಫುಟ್ ಬಾಲ್ ಆಟದ ವೀಡಿಯೋ ವೈರಲ್ ಆಗಿದೆ.
ಈ ಆನೆ ಕಟೀಲು ದೇವಸ್ಥಾನಕ್ಕೆ 5 ವರ್ಷ ಪ್ರಾಯ ಇರುವಾಗ ಬಂದಿತ್ತು.
ಆನೆಗೆ ಮಾವುತರಾದ ಫೈರೋಝ್, ಅಲ್ತಾಫ್ ಅವರು ತರಬೇತಿ ನೀಡುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಯಾತ್ರಿಕರಿಗೆ ಆನೆಯ ಆಟ ಉತ್ತಮ ಮನೋರಂಜನೆ ಒದಗಿಸುತ್ತಿದೆ.