ಪೊಲೀಸರಿಗಿನ್ನು “ಕೋಟಿ ಚೆನ್ನಯ’ ಅಪಾರ್ಟ್‌ಮೆಂಟ್‌ ವಾಸ

25 ಕೋಟಿ ರೂ. ಮೌಲ್ಯದ ಎರಡು ವಸತಿ ಸಮುಚ್ಚಯ ಹಸ್ತಾಂತರ

Team Udayavani, Dec 10, 2019, 4:59 AM IST

ed-33

ಅತ್ತಾವರ: ಹಂಚಿನ ಮನೆಯಲ್ಲಿ ವಾಸವಾಗಿದ್ದ ಪೊಲೀಸರಿಗೆ ಇನ್ನು ಮುಂದೆ ವಸತಿ ಸಮುಚ್ಚಯದಲ್ಲಿ ವಾಸಿಸುವ ಭಾಗ್ಯ ದೊರಕಿದೆ. ನಗರದ ಪೊಲೀಸ್‌ ಲೇನ್‌ನಲ್ಲಿ ಪೊಲೀಸರಿಗೆಂದೇ 96 ಫ್ಲಾ ಟ್‌ಗಳನ್ನು ಹೊಂದಿರುವ 25 ಕೋಟಿ ರೂ. ಮೌಲ್ಯದ ಎರಡು ವಸತಿ ಸಮುಚ್ಚಯ ನಿರ್ಮಿಸಿ ಹಸ್ತಾಂತರಿಸಲಾಗಿದೆ.

ಪೊಲೀಸರಿಗೆ ವಸತಿ ಸಮುಚ್ಚಯ ನಿರ್ಮಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಪೊಲೀಸರ ಬೇಡಿಕೆಗೆ ಸ್ಪಂದಿಸಿದ್ದ ಸರಕಾರ ಪೊಲೀಸ್‌ ವಸತಿ ಸಮುಚ್ಚಯ ನಿರ್ಮಾಣಕ್ಕೆ ಹಸುರು ನಿಶಾನೆ ತೋರಿತ್ತು. 2016ರಲ್ಲಿ ಪೊಲೀಸ್‌ ವಸತಿ ಸಮುಚ್ಚಯದ ನಿರ್ಮಾಣ ಕೆಲಸ ಆರಂಭಿಸಲಾಗಿತ್ತು. ನಾಲ್ಕು ವರ್ಷದಲ್ಲಿ ಎರಡು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಪೊಲೀಸರ ಕನಸು ನನಸಾದಂತಾಗಿದೆ. ವಸತಿ ಸಮುಚ್ಚಯವನ್ನು ಸೋಮವಾರ ಉದ್ಘಾಟಿಸಲಾಗಿದ್ದು, ಪೊಲೀಸರ ವಾಸಕ್ಕೆ ಹಸ್ತಾಂತರಿಸಲಾಗಿದೆ.

ತಲಾ 48 ಮನೆಗಳು
2 ಫ್ಲ್ಯಾಟ್‌ಗಳಲ್ಲಿ ತಲಾ 48 ಮನೆಗಳೊಂದಿಗೆ ಒಟ್ಟು 96 ಫ್ಲಾ ಟ್‌ಗಳನ್ನು ಈ ವಸತಿ ಸಮುಚ್ಚಯ ಹೊಂದಿದೆ. ಎರಡೂ ವಸತಿ ಸಮುಚ್ಚಯಗಳಲ್ಲಿ ನೆಲ ಮಹಡಿ ಮತ್ತು 5 ಮಹಡಿಗಳಿವೆ. 2 ಬಿಎಚ್‌ಕೆಯ ಕಟ್ಟಡದಲ್ಲಿ ಪ್ರತಿ ಮನೆಗೆ 2 ಬೆಡ್‌ರೂಂ, 1 ಕಿಚನ್‌, 1 ಹಾಲ್‌, ಟಾಯ್ಲೆಟ್‌, ಬಾತ್‌ರೂಂ ವ್ಯವಸ್ಥೆ ಇದೆ. ಎರಡು ಬೆಡ್‌ರೂಂಗಳ ಪೈಕಿ ಒಂದು ರೂಂನಲ್ಲಿ ಅಟ್ಯಾಚ್‌ಡ್‌ ಶೌಚಾಲಯ ವ್ಯವಸ್ಥೆ ಇದೆ. ಮೇಲಿನ ಮಹಡಿಗಳಿಗೆ ತೆರಳಲು ಲಿಫ್ಟ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಎನ್‌.ಆರ್‌. ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯು ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿತ್ತು.

ಕೋಟಿ ಚೆನ್ನಯರ ಹೆಸರು
ಹಲವಾರು ವರ್ಷಗಳಿಂದ ಹಂಚಿನ ಮನೆಗಳಲ್ಲಿ ವಾಸಿಸುತ್ತಿದ್ದ ಪೊಲೀಸರಿಗೆ ಇನ್ನು ಅಪಾರ್ಟ್‌ಮೆಂಟ್‌ ವಾಸದ ಖುಷಿ. ಅಪಾರ್ಟ್‌ಮೆಂಟ್‌ಗೆ ಸತ್ಯ, ಧರ್ಮ, ನ್ಯಾಯಕ್ಕೆ ಹೆಸರಾದ ತುಳುನಾಡಿನ ಅವಳಿ ವೀರಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಇಡಲಾಗಿದೆ.

ಕನಸು ನನಸಾಗಿದೆ
ಪ್ರತಿಯೊಬ್ಬರಿಗೂ ಒಳ್ಳೆಯ ಮನೆಯಲ್ಲಿ ಜೀವಿಸಬೇಕೆಂಬ ಕನಸಿರುತ್ತದೆ. ಜನರಿಗೆ 24×7 ರಕ್ಷಣೆ ಕಲ್ಪಿಸುವ ಪೊಲೀಸರು ಮತ್ತು ಅವರ ಕುಟುಂಬದವರಿಗೂ ಉತ್ತಮ ಸೌಕರ್ಯಗಳು ಸಿಕ್ಕಿದಾಗ ಅವರ ಕೆಲಸದ ಉತ್ಸಾಹವೂ ಹೆಚ್ಚಾಗುತ್ತದೆ. ವಸತಿ ಸಮುಚ್ಚಯವಾಸದ ಬಗ್ಗೆ ಅವರ ಬಹುದಿನಗಳ ಕನಸು ಪ್ರಸ್ತುತ ನನಸಾಗಿದೆ. ಮುಂದೆಯೂ ಪೊಲೀಸರಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಸರಕಾರ ಬದ್ಧವಾಗಿದೆ.
 - ಡಿ. ವೇದವ್ಯಾಸ ಕಾಮತ್‌, ಶಾಸಕರು

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.