Udayavni Special

ಬೆರಳ ತುದಿಯಲ್ಲಿ ಬಸ್‌ ಸಂಚಾರದ ಲೈವ್‌ ಮಾಹಿತಿ


Team Udayavani, Aug 26, 2018, 12:41 PM IST

2508mlr51-ksrtc.jpg

ಮಂಗಳೂರು: ಯಾವ ರೈಲು ಎಲ್ಲಿ ಸಂಚರಿಸು ತ್ತಿದೆ? ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಬರುತ್ತಿದೆ ಎಂಬ ಮಾಹಿತಿ ಈಗ ಲೈವ್‌ ಆಗಿ ಮೊಬೈಲ್‌ನಲ್ಲೇ ಸಿಗುತ್ತದೆ. ಇದೇ ರೀತಿ ಇನ್ನು ಕೆಲವೇ ದಿನಗಳಲ್ಲಿ  ಕೆಎಸ್‌ಆರ್‌ಟಿಸಿ ಬಸ್‌ಗಳ ಮಾಹಿತಿಯೂ ಲಭ್ಯವಾಗಲಿದೆ.

ವಿಟಿಎಂಎಸ್‌ ಅನುಷ್ಠಾನ
ಸರಕಾರಿ ಬಸ್‌ ಸಂಚಾರದ ಬಗ್ಗೆ ನಿಗಾ ವಹಿಸುವ ಜತೆಗೆ ಬಸ್‌ ಸಂಚಾರದ ಬಗ್ಗೆ ಮಾಹಿತಿ ನೀಡುವ   “ವೆಹಿಕಲ್‌ ಟ್ರಾಕಿಂಗ್‌ ಆ್ಯಂಡ್‌ ಮಾನಿಟರಿಂಗ್‌ ಸಿಸ್ಟಮ್‌’ (ವಿಟಿಎಂಎಸ್‌) ಅನುಷ್ಠಾನಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದೆ.  ಈ ಪ್ರಾಯೋಗಿಕ ಯೋಜನೆಯನ್ನು ಮೊದಲ ಹಂತದಲ್ಲಿ ಮಂಗಳೂರು, ಪುತ್ತೂರು, ರಾಮನಗರ (ಹಾರೋಹಳ್ಳಿ) ಮೈಸೂರು ಗ್ರಾಮಾಂತರ ವಿಭಾಗಗಳ ಒಟ್ಟು 1,900 ಬಸ್‌ಗಳಲ್ಲಿ ಜಾರಿಗೊಳಿಸಲಾಗಿದೆ.

ಏನು ಪ್ರಯೋಜನ?
ವಿಟಿಎಂಎಸ್‌ ಮೂಲಕ ಬಸ್‌ ಸಂಚರಿಸು ತ್ತಿರುವ ಪ್ರದೇಶದ ನಿಖರ ಮಾಹಿತಿ ಕೆಎಸ್‌ಆರ್‌ಟಿಸಿ ಬೆಂಗಳೂರಿನ ಕೇಂದ್ರ ಕಚೇರಿಗೆ ಲಭ್ಯವಾಗು ತ್ತಿದೆ. ಈ ಸೇವೆ ಮುಂದೆ ಪ್ರಯಾಣಿಕರಿಗೂ ಸಿಗಲಿದೆ. ಇದರಿಂದ ಬಸ್‌ ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ಬರಲಿದೆ? ಎಷ್ಟು ವೇಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿಗಳು ನಿರ್ದಿಷ್ಟ ಆ್ಯಪ್‌ ಮೂಲಕ ಪ್ರಯಾಣಿಕರಿಗೆ ಮೊಬೈಲ್‌ನಲ್ಲೇ ನೋಡಲು ಸಾಧ್ಯವಾಗಲಿದೆ.  ಜತೆಗೆ ಎಸ್‌ಎಂಎಸ್‌ ಕೂಡ ಬರಲಿದೆ.

356 ಬಸ್‌ಗಳಲ್ಲಿ  ಜಿಪಿಆರ್‌ಎಸ್‌
ಮಂಗಳೂರು ವಿಭಾಗದ 570 ಬಸ್‌ಗಳ ಪೈಕಿ 356 ಬಸ್‌ಗಳಿಗೆ ಜಿಪಿಆರ್‌ಎಸ್‌ ತಂತ್ರಜ್ಞಾನ ಅವಡಿಸಲಾಗಿದೆ. ಬಸ್ಸಿನ ವೇಗ, ತಲುಪುವ ಸಮಯ  ಮಾಹಿತಿಗಳು ಈಗ ಮಂಗಳೂರು ನಿಯಂತ್ರಣ ಕೊಠಡಿಗೆ ಸದ್ಯ ಬರುತ್ತಿದೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿವೆ. ಮುಂದೆ ಮೊಬೈಲ್‌ಗ‌ಳಲ್ಲಿ ಹಾಗೂ ಡಿಸ್‌ಪ್ಲೇ ಬೋರ್ಡ್‌ಗಳಲ್ಲೂ ಮಾಹಿತಿ ದೊರೆಯಲಿದೆ.   ವಿಶೇಷವಾಗಿ ಕೆಎಸ್‌ಆರ್‌ಟಿಸಿ ಬಸ್‌ನ ಟಿಕೆಟಿಂಗ್‌ ಮೆಷಿನ್‌ಗಳಿಗೂ ಸಾಫ್ಟ್ವೇರ್‌ ಅಳವಡಿಸಿ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ನಿರ್ವಾಹಕರೇ ಬುಕ್ಕಿಂಗ್‌ ಮಾಡುವ ಸೌಲಭ್ಯ ದೊರೆಯಲಿದೆ.

ರೆಡಿಯಾಗಲಿದೆ ಆ್ಯಪ್‌
ವಿಟಿಎಂಎಸ್‌ ಪ್ರಾಯೋಗಿಕ ಜಾರಿಗೆ ಪೂರಕವಾಗಿ ಪ್ರಯಾಣಿಕ ರಿಗೆ ಲಭ್ಯವಾಗಲು ಹೊಸ ಆ್ಯಪ್‌ ಕೂಡ ಸಿದ್ಧವಾಗಲಿದೆ. ಸದ್ಯ ಮೈಸೂರಿನಲ್ಲಿ “ಮಿತ್ರ’ ಎಂಬ ಆ್ಯಪ್‌ ಇದ್ದು, ಇದೇ ಮಾದರಿಯಲ್ಲಿ ವಿಭಾಗವಾರು ಆ್ಯಪ್‌ಗ್ಳು ಆರಂಭವಾಗಲಿವೆ. ಆ್ಯಪ್‌ ಲಭ್ಯವಾದರೆ ಯಾವುದೇ ಬಸ್‌ ಸಂಚಾರದ ಸಂಪೂರ್ಣ ಮಾಹಿತಿ ಸಿಗಲಿದೆ.  
 
ಪ್ರಯಾಣಿಕರ ಸುರಕ್ಷತೆ, ಬಸ್‌ ಸಂಚಾರದ ಅವಧಿ, ಸ್ಥಳದ ಬಗ್ಗೆ ಪೂರ್ಣ ಮಾಹಿತಿ ಮೊಬೈಲ್‌ನಲ್ಲಿ ದೊರೆಯು
ವಂತೆ ಮಾಡುವ ವಿಟಿಎಂಎಸ್‌ ಯೋಜನೆ  ಶೀಘ್ರ ಪೂರ್ಣ ಪ್ರಮಾಣ ದಲ್ಲಿ ಜಾರಿಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಇದರ ನಿರ್ವಹಣೆ ನಡೆಯಲಿದೆ.  
 - ದೀಪಕ್‌ ಕುಮಾರ್‌,ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಾಧಿಕಾರಿ
*ದಿನೇಶ್‌ ಇರಾ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

mandya

ಮಂಡ್ಯದಲ್ಲಿ ಕೋವಿಡ್ ಗೆ ಮತ್ತಿಬ್ಬರು ಬಲಿ: 287 ಹೊಸ ಪ್ರಕರಣ; 377 ಮಂದಿ ಗುಣಮುಖ

suresh

ಶಾಲೆಗಳನ್ನು ತೆರೆಯುವ ಧಾವಂತ ಇಲ್ಲ; ಮಕ್ಕಳ ಹಿತವೇ ಮುಖ್ಯ: ಸುರೇಶ್ ಕುಮಾರ್

mumbai-punjab

ಮುಂಬೈ-ಪಂಜಾಬ್ ಸೆಣಸಾಟ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಹುಲ್ ಬಳಗ

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?

ಗೆಲುವಿಗೆ ಟ್ರ್ಯಾಕ್‌ಗೆ ಮರಳಲು ಚೆನ್ನೈ ಕಾತರ

ಗೆಲುವಿಗೆ ಟ್ರ್ಯಾಕ್‌ಗೆ ಮರಳಲು ಚೆನ್ನೈ ಕಾತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳುವಾಯಿ ಗ್ರಾಮ ಪಂಚಾಯತಿಗೆ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

ಬೆಳುವಾಯಿ ಗ್ರಾಮ ಪಂಚಾಯತ್ ಗೆ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ಉದಯವಾಣಿ ಫಾಲೋಅಪ್‌: ಭತ್ತ ಕೃಷಿ: ಗುರಿ ಮೀರಿದ ಸಾಧನೆ, ಉತ್ತಮ ಫಸಲಿನ ನಿರೀಕ್ಷೆ

ಉದಯವಾಣಿ ಫಾಲೋಅಪ್‌: ಭತ್ತ ಕೃಷಿ: ಗುರಿ ಮೀರಿದ ಸಾಧನೆ, ಉತ್ತಮ ಫಸಲಿನ ನಿರೀಕ್ಷೆ

ಜೆಟ್ಟಿ ನಿರ್ಮಾಣ ಯೋಜನೆ ಅನುಷ್ಠಾನದ ಆಶಾವಾದ

ಜೆಟ್ಟಿ ನಿರ್ಮಾಣ ಯೋಜನೆ ಅನುಷ್ಠಾನದ ಆಶಾವಾದ

MLR

ತ್ಯಾಜ್ಯ ವಿಂಗಡಿಸದಿದ್ದರೆ 5,000 ರೂ.ವರೆಗೆ ದಂಡ

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕುಹೊಸ ಸೇರ್ಪಡೆ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

832

ʼಇಂಗ್ಲಿಷ್‌ ಚಾನೆಲ್‌ʼ ಈಜಿದ ಏಷ್ಯಾದ ಮೊದಲ ಮಹಿಳೆ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

ಹಾಜಿಕ್‌ ಕಾಜಿ

ಎಳವೆಯಲ್ಲಿ ಪರಿಸರ ಸರಂಕ್ಷಣೆ ಕುರಿತು ಅರಿವು ಮೂಡಿಸಲು ಹೊರಟ ಚಿನ್ನರು

mandya

ಮಂಡ್ಯದಲ್ಲಿ ಕೋವಿಡ್ ಗೆ ಮತ್ತಿಬ್ಬರು ಬಲಿ: 287 ಹೊಸ ಪ್ರಕರಣ; 377 ಮಂದಿ ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.