ಶಿರಾಡಿ ಮೂಲಕ ಕೆಎಸ್ಸಾರ್ಟಿಸಿ ಸಂಚಾರ ಪುನರಾರಂಭ

Team Udayavani, Aug 14, 2019, 6:17 AM IST

ಮಂಗಳೂರು: ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರು – ಬೆಂಗಳೂರು ಹಗಲು ಮತ್ತು ರಾತ್ರಿ ಬಸ್‌ ಸಂಚಾರ ಪುನರಾರಂಭಗೊಂಡಿದೆ. ಈವರೆಗೆ ಮಂಗಳೂರಿನಿಂದ ಬೆಂಗಳೂರಿಗೆ ಶಿರಾಡಿ ಘಾಟಿ ರಸ್ತೆ ಮಾರ್ಗವಾಗಿ ಹಗಲು ಮಾತ್ರ ಬಸ್‌ ಸಂಚಾರವಿತ್ತು. ರಾತ್ರಿ ವೇಳೆ ಸಂಪಾಜೆ ಘಾಟಿ ಮಾರ್ಗವಾಗಿ ಬಸ್‌ ಸಂಚರಿಸುತ್ತಿತ್ತು. ಆದರೆ ಮಂಗಳವಾರ ರಾತ್ರಿಯಿಂದ ಬಸ್‌ಗಳು ಶಿರಾಡಿ ಮಾರ್ಗವಾಗಿ ಸಂಚರಿಸಲಿವೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ಕೆ.ಎಂ. ಆಶ್ರಫ್‌ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಂಗಳೂರು ವಿಭಾಗದಿಂದ ಪುಣೆಗೆ ಬಸ್‌ ಸಂಚಾರ ಆರಂಭಗೊಂಡಿದೆ.

ಮುಂಬಯಿ ಮತ್ತು ಕುಂದಾಪುರ- ಕೊಲ್ಹಾಪುರ ಬಸ್‌ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಪುತ್ತೂರು ವಿಭಾಗದಿಂದ ಹಾಸನ ಕಡೆಗೆ ತೆರಳುವ ಎಲ್ಲ ಬಸ್‌ಗಳು ಮಂಗಳವಾರ ಹಗಲು ಮತ್ತು ರಾತ್ರಿ ವೇಳೆ ಶಿರಾಡಿ ಮೂಲಕ ತೆರಳಿವೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಎಲ್ಲ ಖಾಸಗಿ ಬಸ್‌ಗಳು ಸೋಮವಾರದಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿವೆ.

ರೈಲು ಸಂಚಾರ ವ್ಯತ್ಯಯ
ಎರ್ನಾಕುಳಂನಿಂದ ಓಖಾಗೆ ಹೊರಡುವ (16338) ರೈಲು ಬುಧವಾರ ರದ್ದುಗೊಂಡಿದೆ. ಬುಧವಾರ ಪುಣೆಯಿಂದ ಎರ್ನಾಕುಲಂಗೆ ತೆರಳುವ (22150) ರೈಲು ಪನ್ವೇಲ್‌ನಿಂದ ಎರ್ನಾಕುಳಂವರೆಗೆ ಮಾತ್ರ ಸಂಚರಿಸಲಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ