ಸಿಬಂದಿ ಕೊರತೆಯಿಂದ ಆರೋಗ್ಯ ಇಲಾಖೆ ತತ್ತರ!


Team Udayavani, Apr 1, 2021, 3:50 AM IST

ಸಿಬಂದಿ ಕೊರತೆಯಿಂದ ಆರೋಗ್ಯ ಇಲಾಖೆ ತತ್ತರ!

ಮಹಾನಗರ: ಒಂದೆಡೆ ಕೊರೊನಾ, ಮಲೇರಿಯಾ- ಡೆಂಗ್ಯೂವಿ ನಿಂದಾಗಿ ಜಿಲ್ಲೆಯಲ್ಲಿಯೂ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿದ್ದರೆ, ಇನ್ನೊಂದೆಡೆ ಸಿಬಂದಿ ಕೊರತೆಯಿಂದಾಗಿ ಜಿಲ್ಲಾ ಆರೋಗ್ಯ ಇಲಾಖೆಯೇ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ!

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಒಟ್ಟು 1,631 ಹುದ್ದೆಗಳು ಮಂಜೂರಾಗಿದ್ದರೆ, ಈ ಪೈಕಿ 698 ಹುದ್ದೆಗಳು ಖಾಲಿಯಿವೆ. 641 ಖಾಯಂ, 292 ಮಂದಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿದ್ದಾರೆ. ಸದ್ಯ ಆರೋಗ್ಯ ಸಂಬಂಧಿತ ಕಾರ್ಯಗಳೆ ಜಿಲ್ಲೆಯಲ್ಲಿ ಆದ್ಯತೆಯಿಂದ ನಡೆಯುತ್ತಿರುವುದರಿಂದ ಆರೋಗ್ಯ ಇಲಾಖೆಯಲ್ಲಿನ ಸಿಬಂದಿ ಕೊರತೆ ಬಹುದೊಡ್ಡ ಸಮಸ್ಯೆ ಸೃಷ್ಟಿಸಿದೆ. ಇನ್ನೇನು ಮಳೆಗಾಲ ಎದುರಾಗಲಿರುವ ಕಾರಣದಿಂದ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಂದರ್ಭ ಆರೋಗ್ಯ ಇಲಾಖೆಯ ವಿವಿಧ ಸ್ತರದಲ್ಲಿ ಹುದ್ದೆಗಳು ಖಾಲಿ ಇರುವುದು ಹೊಸ ಸಮಸ್ಯೆ ಸೃಷ್ಟಿಸಲಿದೆ.

ನಿರ್ವಹಣೆಯೇ ಸವಾಲು :

ಡೆಂಗ್ಯೂ, ಮಲೇರಿಯಾ ಸಹಿತ ವಿವಿಧ ರೋಗಗಳ ವಿರುದ್ಧ ಹೋರಾಟ ನಡೆಸುವಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕಾದ ಪುರುಷ ಆರೋಗ್ಯ ಸಹಾಯಕರ ಹುದ್ದೆಯು ಬಹುತೇಕ ಖಾಲಿ ಇರುವುದರಿಂದ ಇಲಾಖೆಗೆ ನಿರ್ಹಣೆಯೇ ಸವಾಲಾಗಿ ಪರಿಣಮಿಸಿದೆ. ಹಿರಿಯ ಆರೋಗ್ಯ ಸಹಾಯಕರ (ಪುರುಷರು)ಹುದ್ದೆ 64 ಮಂಜೂರಾಗಿದ್ದರೆ ಇದರಲ್ಲಿ 52 ಹುದ್ದೆ ಖಾಲಿಯಿದೆ. ಕಿರಿಯ ಆರೋಗ್ಯ ಸಹಾಯಕರ (ಪುರುಷರು)ಹುದ್ದೆ ಜಿಲ್ಲೆಯಲ್ಲಿ 228 ಇದೆ. ಇದರಲ್ಲಿ 39 ಹುದ್ದೆ ಮಾತ್ರ ಭರ್ತಿಯಾಗಿದ್ದು, ಬರೋಬ್ಬರಿ 189 ಹುದ್ದೆ ಖಾಲಿಯಿವೆ. ಇನ್ನು ಕಿರಿಯ ಆರೋಗ್ಯ ಸಹಾಯಕರ (ಮಹಿಳೆಯರು) 480 ಹುದ್ದೆ ಮಂಜೂರಾಗಿದ್ದರೆ ಇದರಲ್ಲಿ 139 ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳು ಖಾಲಿ ಇರುವುದೇ ಆರೋಗ್ಯ ಇಲಾಖೆಯನ್ನು ಕಂಗೆಡಿಸಿದೆ.

ಈ ಮಧ್ಯೆ ಜಿಲ್ಲೆಯಲ್ಲಿ ವಿಶೇಷ ತಜ್ಞರ ಹುದ್ದೆ 15 (ಮಂಜೂರಾತಿ 68), ಲ್ಯಾಬ್‌ ಟೆಕ್ನೀಶಿಯನ್‌ 21 (ಮಂಜೂರಾತಿ 80), ಫಾರ್ಮಾಸಿಸ್ಟ್‌ 53 (ಮಂಜೂರಾತಿ 87), ಪ್ರಥಮ ದರ್ಜೆ ಸಹಾಯಕರು 62 (ಮಂಜೂರಾತಿ 84), ಹಿರಿಯ ದರ್ಜೆ ಸಹಾಯಕರು 25 (ಮಂಜೂರಾತಿ 34), ಗ್ರೂಫ್‌ ಡಿ 112 (ಮಂಜೂರಾತಿ 373), ಡ್ರೈವರ್‌ 20 (ಮಂಜೂರಾತಿ 58) ಹುದ್ದೆಗಳು ಖಾಲಿಯಿವೆ.

ವೆನ್ಲಾಕ್‌ನಲ್ಲಿಯೂ ಖಾಲಿ! :

ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಟ್ಟು 613 ಹುದ್ದೆ ಮಂಜೂರಾಗಿದ್ದು, ಇವುಗಳಲ್ಲಿ 184 ಹುದ್ದೆಗಳು ಖಾಲಿಯಿವೆ. 257 ಪೂರ್ಣಕಾಲಿಕ ಹಾಗೂ 172 ಗುತ್ತಿಗೆ ಆಧಾರದಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರೂಫ್‌ ಸಿ ವಿಭಾಗದಲ್ಲಿ ಇಲ್ಲಿ 286 ಹುದ್ದೆ ಮಂಜೂರಾಗಿದ್ದರೂ 108 ಹುದ್ದೆ ಖಾಲಿ ಇವೆ. ಅದೇ ರೀತಿ ಗ್ರೂಫ್‌ ಡಿ 280 ಹುದ್ದೆಗಳ ಪೈಕಿ 66 ಹುದ್ದೆ ಖಾಲಿಯಿವೆ. ದ.ಕ. ಜಿಲ್ಲೆಗೆ ಒಟ್ಟು 1,381 ಆಶಾ ಕಾರ್ಯಕರ್ತೆಯರ ಹುದ್ದೆ ಮಂಜೂರಾಗಿದ್ದು, ಇದರಲ್ಲಿ 1,372 ಕಾರ್ಯಕರ್ತೆಯರು ಕರ್ತವ್ಯದಲ್ಲಿದ್ದಾರೆ. 9 ಹುದ್ದೆ ಖಾಲಿ ಇದೆ.

ಎರಡೇ ತಿಂಗಳಲ್ಲಿ 184 ಮಲೇರಿಯಾ ಕೇಸ್‌! :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಫೆಬ್ರವರಿ ಅಂತ್ಯಕ್ಕೆ ಒಟ್ಟು 184 ಮಲೇರಿಯಾ ಹಾಗೂ 21 ಡೆಂಗ್ಯೂ ಪ್ರಕರಣ ವರದಿಯಾಗಿವೆ. ಈ ಪೈಕಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕ ಮಲೇರಿಯಾ (172) ಹಾಗೂ ಸುಳ್ಯ, ಬಂಟ್ವಾಳದಲ್ಲಿ ಅಧಿಕ ಡೆಂಗ್ಯೂ (ತಲಾ 5) ಪ್ರಕರಣಗಳಿವೆ. ಕಳೆದ ವರ್ಷ ಜಿಲ್ಲೆಯಲ್ಲಿ 1,397 ಮಲೇರಿಯಾ (ಮಂಗಳೂರು ಪಾಲಿಕೆ ವ್ಯಾಪ್ತಿ 1,306), 239 ಡೆಂಗ್ಯೂ (ಬಂಟ್ವಾಳ 68) ಕಾಣಿಸಿಕೊಂಡಿತ್ತು.

ದ.ಕ. ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪೂರ್ಣ ವರದಿಯನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.  -ಡಾ| ಕೆ. ಸುಧಾಕರ್‌,  ಆರೋಗ್ಯ ಸಚಿವರು

 

ದಿನೇಶ್‌  ಇರಾ

ಟಾಪ್ ನ್ಯೂಸ್

Untitled-1

ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನ

ಆಫ್ರಿಕಾ: ಮಹಿಳೆಯನ್ನು ಕೊಂದ ಟಗರು, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್

ಆಫ್ರಿಕಾ: ಮಹಿಳೆಯನ್ನು ಕೊಂದ ಟಗರು, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್

sangeetha sringeri spoke about her experience of 777 charlie

ಚಾರ್ಲಿ ಚಾನ್ಸ್‌ ಸಿಕ್ಕಿದ್ದು ಮಿಸ್‌ ಇಂಡಿಯಾ ಗೆದ್ದಂಗಿತ್ತು!: ಸಂಗೀತಾ ಶೃಂಗೇರಿ

ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!

ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!

ಪರಿಷತ್ ಅಭ್ಯರ್ಥಿ ಹೇಮಲತಾ ನಾಯಕ್ ಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ಬಿಜೆಪಿ

ಪರಿಷತ್ ಅಭ್ಯರ್ಥಿ ಹೇಮಲತಾ ನಾಯಕ್ ಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ಬಿಜೆಪಿ

ಚಿಂಚೋಳಿ: ಹೆಸರು ನೋಂದಣಿಗೆ ಮಧ್ಯರಾತ್ರಿಯಿಂದಲೇ ಸರತಿ ಸಾಲಾಗಿ ನಿಂತ ರೈತರು

ಚಿಂಚೋಳಿ: ಹೆಸರು ನೋಂದಣಿಗೆ ಮಧ್ಯರಾತ್ರಿಯಿಂದಲೇ ಸರತಿ ಸಾಲಾಗಿ ನಿಂತ ರೈತರು

ಬದುಕು ಇನ್ನಷ್ಟು ದುಸ್ತರ: ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 420 ರೂಪಾಯಿ!

ಬದುಕು ಇನ್ನಷ್ಟು ದುಸ್ತರ: ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 420 ರೂಪಾಯಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

miyawaki

ಗ್ರೀನ್‌ ಮಂಗಳೂರು ಪರಿಕಲ್ಪನೆಯಡಿ ಮಿಯಾವಾಕಿ ಅರಣ್ಯ: ವೇದವ್ಯಾಸ ಕಾಮತ್‌

jalli

ರಸ್ತೆಗಿಂತ ಎತ್ತರವಾದ ತೋಡು; ಮಳೆ ನೀರು ನುಗ್ಗುವ ಆತಂಕ

toilet

ಕದ್ರಿ ಬಳಿಯ ಶೌಚಾಲಯದಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

tommato

ಅಕಾಲಿಕ ಮಳೆ ಪರಿಣಾಮ: ತರಕಾರಿ ದರ ಭಾರೀ ಏರಿಕೆ

garbage

ಚರಂಡಿಯಲ್ಲಿ ಕಸ, ತ್ಯಾಜ್ಯ: ಕೃತಕ ನೆರೆ ಭೀತಿ

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

18

ಶಾಲೆಯ ಅಂಗಳಕ್ಕೆ ಅಧಿಕಾರಿಗಳು ದೌಡು

Untitled-1

ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನ

17

ಐತಿಹಾಸಿಕ ದೇವಸ್ಥಾನಗಳ ರಕ್ಷ ಣೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ರೌಡಿ ಶೀಟರ್ ರಮೇಶ ಕಾಳೆ ಗಡಿಪಾರು

ಕಲಬುರಗಿ: ರೌಡಿ ಶೀಟರ್ ರಮೇಶ ಕಾಳೆ ಗಡಿಪಾರು

ಆಫ್ರಿಕಾ: ಮಹಿಳೆಯನ್ನು ಕೊಂದ ಟಗರು, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್

ಆಫ್ರಿಕಾ: ಮಹಿಳೆಯನ್ನು ಕೊಂದ ಟಗರು, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.