ಜೀವ ಸಂಕುಲ ಉಳಿಸುವ ಸಂಕಲ್ಪ ಮಾಡೋಣ

ಪರಿಸರಣ ಇಂದು ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ

Team Udayavani, May 22, 2019, 6:10 AM IST

ಭೂಮಿ ತನ್ನ ಒಡಲಿನಲ್ಲಿ ಕೋಟ್ಯಂತರ ಜೀವ ವೈವಿಧ್ಯತೆಗಳನ್ನು ಪೋಷಿಸುತ್ತಿದೆ. ಇಲ್ಲಿ ಬದುಕಲು ಎಲ್ಲರಿಗೂ ಸಮಾನ ಅವಕಾಶವಿದೆ. ಆದರೆ ಮಾನವ ಮಾತ್ರ ಎಲ್ಲಡೆ ಹಸ್ತಕ್ಷೇಪ ಮಾಡಿ ಅನೇಕ ಜೀವ ವೈವಿಧ್ಯತೆಯ ನಾಶಕ್ಕೆ ಕಾರಣವಾಗಿದ್ದಾನೆ. ಇದುವರೆಗೆ ಅದೆಷ್ಟೋ ವೈವಿಧ್ಯಮಯ ಜೀವಜಾಲ ಅಳಿದು ಹೋಗಿದ್ದರೆ ಬಹಳಷ್ಟು ಅಳಿವಿನಂಚಿನಲ್ಲಿದೆ. ಇದರ ಉಳಿವಿಗೆ ಗಂಭೀರವಾಗಿ ಆಲೋಚಿಸುವ ಅನಿವಾರ್ಯತೆ ಎದುರಾಗಿದೆ.

ಹಲವು ಜೀವಜಾಲಗಳನ್ನು ಒಳಗೊಂಡಿರುವ ಗ್ರಹ ಭೂಮಿ. ಇಲ್ಲಿ ಕಂಡುಬರುವಷ್ಟು ಜೀವವೈವಿಧ್ಯ ಬೇರೆಡೆ ಕಂಡು ಬರಲು ಸಾಧ್ಯವಿಲ್ಲ. ಹೀಗಾಗಿ ಜೀವ ವೈವಿಧ್ಯವನ್ನು ಇನ್ನಷ್ಟು ಆಳವಾಗಿ ಅಧ್ಯಯನ ನಡೆಸಲು ಮತ್ತು ಮಹತ್ವವನ್ನು ಸಾರುವ ಉದ್ದೇಶದಿಂದ ವಿಶ್ವಸಂಸ್ಥೆ ಮೇ 22ರಂದು ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಒಂದೊಂದು ಧ್ಯೇಯ ಇರಿಸಿಕೊಂಡು ದಿನಾಚರಣೆ ನಡೆಸಲಾಗುತ್ತದೆ.

ಧ್ಯೇಯ
“ನಮ್ಮ ಜೀವ ವೈವಿಧ್ಯ, ನಮ್ಮ ಆಹಾರ, ನಮ್ಮ ಆರೋಗ್ಯ’ ಈ ವರ್ಷದ ಧ್ಯೇಯ. ಜೀವ ವೈವಿಧ್ಯತೆ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆ ಮೇಲೆ ನಮ್ಮ ಆಹಾರ, ಪೌಷ್ಟಿಕಾಂಶ ಮತ್ತು ಆರೋಗ್ಯ ಹೇಗೆ ಅವಲಂಬಿತವಾಗಿದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಈ ಬಾರಿಯ ಧ್ಯೇಯ ಹೊಂದಿದೆ. ಅಲ್ಲದೆ ಮಾನವನ ಅಸ್ತಿತ್ವಕ್ಕೆ ಮತ್ತು ಆತನ ಒಳಿತಿಗೆ ಜೀವ ವೈವಿಧ್ಯ ಹೇಗೆ ಕಾರಣವಾಗಿದೆ ಎನ್ನುವುದರ ಕುರಿತೂ ಮಾಹಿತಿ ನೀಡಲು ಉದ್ದೇಶಿಸಲಾಗಿದೆ.

ಮೇ 22 ಯಾಕೆ ?
ವಿಶ್ವಸಂಸ್ಥೆಯ ಎರಡನೇ ಕಮಿಟಿ 1993ರಿಂದ 2000ರವರೆಗೆ ಡಿಸೆಂಬರ್‌ 29ರಂದು ಜೀವವೈವಿಧ್ಯತೆ ಸಮಾವೇಶ ನಡೆಸುತ್ತಿತ್ತು. ಅನಂತರ ಡಿಸೆಂಬರ್‌ ರಜಾ ಅವ ಧಿಯಾಗಿದ್ದರಿಂದ ದಿನಾಂಕವನ್ನು ಬದಲಾಯಿಸಿ ಮೇ 22ರಂದು ನಡೆ ಸ ಲು ನಿಶ್ಚಯಿಸಲಾಯಿತು.

ಅಪಾಯಕಾರಿ ಬೆಳವಣಿಗೆ
– ಹವಾಮಾನ ಬದಲಾವಣೆಯಿಂದಾಗಿ ಜಗತ್ತಿನಲ್ಲಿ ಗಂಟೆಗೆ ಅಂದಾಜು 3 ಜೀವ ವೈವಿಧ್ಯ ಕಣ್ಮರೆಯಾಗುತ್ತಿದೆ.
– ಪ್ರತಿದಿನ ನಾಶವಾಗುವ ಜೀವ ವೈವಿಧ್ಯದ ಸಂಖ್ಯೆ ಸುಮಾರು 100ರಿಂದ 150.
– ಕಳೆದ 30 ವರ್ಷಗಳಲ್ಲಿ ಕೆನಡಾದಲ್ಲಿರುವ ಹಿಮ ಕರಡಿಗಳ ಸಂಖ್ಯೆ ಶೇ. 22ರಷ್ಟು ಕುಸಿತವಾಗಿದೆ. ಇದಕ್ಕೆ ಕಾರಣ ಹವಾಮಾನದಲ್ಲಾದ ಬದಲಾವಣೆ
– ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈಗಾಗಲೇ ಮಳೆ ಕಾಡುಗಳ ಸುಮಾರು 74 ಜಾತಿಯ ಕಪ್ಪೆಗಳು ನಾಶವಾಗಿವೆ.
– 20 ವರ್ಷದ ಹಿಂದೆ ಆಂಟಾರ್ಟಿಕಾದಲ್ಲಿದ್ದ 320 ಜತೆ ಅಡೆಲಿ ಪೆಂಗ್ವಿನ್‌ ಪೈಕಿ ಈಗ ಉಳಿದಿರುವುದು 54 ಜೋಡಿ ಮಾತ್ರ. ಕಳೆದ 5 ದಶಕದಲ್ಲಿ ಉಷ್ಣತೆ 5.5 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದ್ದೇ ಇದಕ್ಕೆ ಕಾರಣ.

ಇದು ಕೆಲವು ಉದಾಹರಣೆಗಳಷ್ಟೇ. ಮಾನವನ ಅತಿಯಾದ ಚಟುವಟಿಕೆ, ಪ್ರಕೃತಿ ಮೇಲಿನ ನಿರಂತರ ದೌರ್ಜನ್ಯಗಳಿಂದ ಜೀವ ವೈವಿಧ್ಯ ಅಪಾಯದಂಚಿನಲ್ಲಿದೆ. ಈ ಎಲ್ಲ ಕಾರಣಗಳಿಂದ ದಿನಾಚರಣೆ ಮಹತ್ವ ಪಡೆದುಕೊಂಡಿದೆ.

ಏನೆಲ್ಲ ಚಟುವಟಿಕೆಗಳು?
ದಿನಾಚರಣೆ ಪ್ರಯುಕ್ತ ವಿಶ್ವದಾದ್ಯಂತ ಕೈಗೊಳ್ಳುವ ಚಟುವಟಿಕೆಗಳು ಇಂತಿವೆ:
– ಪುಸ್ತಕ, ಅಧ್ಯಯನ ಪೂರಕ ವಿಷಯಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದ.
– ಜೀವ ವೈವಿಧ್ಯತೆಯ ಮಾಹಿತಿಗಳನ್ನು ಶಾಲೆ, ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆ, ಸಮೂಹ ಮಾಧ್ಯಮಗಳಾದ ದಿನ ಪತ್ರಿಕೆ, ರೇಡಿಯೋ, ಚಾನಲ್‌ಗ‌ಳಿಗೆ ಹಂಚಿಕೆ.
– ವಸ್ತು ಪ್ರದರ್ಶನ, ವಿಚಾರಗೋಷ್ಠಿ ಆಯೋಜಿಸಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಸಾರ್ವಜನಿ ಕರಿಗೆ ಮಾಹಿತಿ ಹಂಚಿಕೆ.
– ಅಳಿವಿನಂಚಿನಲ್ಲಿರುವ ಜೀವಜಾಲಗಳ ಬಗ್ಗೆ ಮಾಹಿತಿ.
– ಗಿಡಗಳನ್ನು ನೆಡಲು ಯೋಜನೆಗಳ ತಯಾರಿ.

- ರಮೇಶ್‌ ಬಳ್ಳಮೂಲೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಾರು ಢಿಕ್ಕಿ ಹೊಡೆಸಿ ಕೊಲೆ ಯತ್ನ: ದೂರು ದಾಖಲು ಮೂಲ್ಕಿ: ನಗರದ ಸಂಘ ಪರಿವಾರದ ಪ್ರಮುಖ, ಬಪ್ಪನಾಡು ನಿವಾಸಿ ಶ್ರೀನಿವಾಸ ಅವರ ಮೇಲೆ ಕಾರು ಚಲಾಯಿಸಿ ಕೊಲೆ ಯತ್ನ...

  • ಎಡಪದವು: ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಕುಪ್ಪೆಪದವಿನ ಕಿಲೆಂಜಾರು ಸಮೀಪದ ಅಚಾರಿಜೋರ ನಿವಾಸಿ ಅದ್ದ ಯಾನೆ ಅಬ್ದುಲ್‌ ರಹಿಮಾನ್‌...

  • ಮಂಗಳೂರು: ನಾಲ್ಕನೇ ಶನಿವಾರದ ರಜೆ ಸೌಲಭ್ಯದಿಂದ ಶಿಕ್ಷಕ ರನ್ನು ರಾಜ್ಯ ಸರಕಾರ ಹೊರಗಿಟ್ಟಿರುವು ದಲ್ಲದೆ, ಅವರ ಐದು ಸಾಂದರ್ಭಿಕ ರಜೆಗಳನ್ನೂ ಕಡಿತಗೊಳಿಸಿದೆ. ಕೇಂದ್ರ...

  • ಮೂಲ್ಕಿ: ನಗರ ಪಂಚಾಯತ್‌ ವ್ಯಾಪ್ತಿಯ ಕಾರ್ನಾಡು ಸದಾಶಿವ ನಗರ, ಬಿಜಾಪುರ ಕಾಲನಿ ಹಾಗೂ ಆಶ್ರಯ ಕಾಲನಿಯಲ್ಲಿ ಕಳೆದ ಎರಡು ತಿಂಗಳಿನಿಂದ ಮಲೇರಿಯಾ ಜ್ವರ ಬಾಧಿಸುತ್ತಿದೆ....

  • ಮಂಗಳೂರು: ವಿವಿಧ ರೀತಿಯ ಪಿಂಚಣಿ ಸೌಲಭ್ಯಗಳನ್ನು ಶೀಘ್ರ ಹಾಗೂ ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಪ್ರತೀ ಹೋಬಳಿ ಮಟ್ಟದಲ್ಲಿ ತಿಂಗಳಿಗೊಮ್ಮೆ ಕಂದಾಯ ಅದಾಲತ್‌...

ಹೊಸ ಸೇರ್ಪಡೆ