ಸಾಧನೆಯ ಜೀವನವೇ ಬದುಕು…


Team Udayavani, Oct 21, 2018, 10:47 AM IST

life.jpg

ಮಾನವ ಜೀವನವೇ ದೊಡ್ಡದು. ಇಲ್ಲಿ ಬದುಕಿ ಬಾಳಿ ಸಾಧಿಸುವ ಅವಕಾಶ ಎಲ್ಲರಿಗೂ ಇದೆ. ಗುಣಾತ್ಮಕ ಚಿಂತನೆಯೊಂದಿದ್ದರೆ ಸಾಕು; ಸಾಧನೆಗೆ ಆಕಾಶವೂ ಮಿತಿಯಾಗದು. ಅಂತಹ ಚಿಂತನೆಯನ್ನು ಬೆಳೆಸಿಕೊಂಡರೆ 
ಬದುಕು ಎಷ್ಟೊಂದು ಸುಂದರ…

ಸವಾಲನ್ನೇ ಪಾಸಿಟಿವ್‌ ಆಗಿ ಪ್ರೀತಿಸಿ!
ಸವಾಲು ಎಂದರೆ ಏನು? ಅದು, ಒಂದು ಗುರಿಯನ್ನು ಯಶಸ್ವಿಯಾಗಿ ತಲುಪಿ ನಗುವುದಕ್ಕೆ ಇರುವ ಅವಕಾಶ ತಾನೆ? ಹದಿವಯಸ್ಕರು ಮಾತ್ರ ಅಲ್ಲ; ಐನ್‌ಸ್ಟೈನ್‌, ನ್ಯೂಟನ್‌ಗೂ ಅರುವತ್ತು ವರ್ಷ ವಯಸ್ಸಿನಲ್ಲಿ ಸವಾಲುಗಳಿದ್ದವು. ಎಪ್ಪತ್ತು ವರ್ಷಗಳ ಹಿರಿ ವಯಸ್ಸಿನಲ್ಲಿಯೂ ಗಾಂಧೀಜಿ ಸವಾಲುಗಳನ್ನು ಎದುರಿಸಿದ್ದರು. ಸವಾಲುಗಳು ಹುಟ್ಟಿದ ಕ್ಷಣದಿಂದಲೇ ಆರಂಭವಾಗುತ್ತವೆ. ನವಜಾತ ಕೂಸು ಉಸಿರಾಟವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಬದುಕುವ ಸವಾಲನ್ನು ಸ್ವೀಕರಿಸುತ್ತದೆ!  

ಆಕಾಶ ಎಷ್ಟು ವಿಶಾಲ!
ಸತ್ತ ಮೇಲೆ ನೀವು ಏನೂ ಮಾಡುವುದಕ್ಕಾಗುವುದಿಲ್ಲ; ಏನಾದರೂ ಸಾಧಿಸುವುದಿದ್ದರೆ ಅದು ಬದುಕಿದ್ದಾಗ ಮಾತ್ರ – ಇದು ಅತ್ಯುತ್ಕೃಷ್ಟ ಧನಾತ್ಮಕ ಮನೋಭಾವ. ಹಾರಿಸುವುದಕ್ಕೆ ನಿಮ್ಮ ಬಳಿ ತುಂಬಾ ಗಾಳಿಪಟಗಳು ಇಲ್ಲದಿದ್ದರೆ ಆಕಾಶ ಎಷ್ಟು ವಿಶಾಲವಾಗಿದೆಯಲ್ಲ ಎಂದು ಅಂದುಕೊಳ್ಳಿ! ಧನಾತ್ಮಕವಾಗಿ ಯೋಚಿಸುವುದೆಂದರೆ ಇದೇ. ನೀವು ಈ ಲೇಖನವನ್ನು ಓದುತ್ತಿದ್ದೀರಿ; ಇದರರ್ಥವೆಂದರೆ ಬಡತನ, ರೋಗರುಜಿನ ಅಥವಾ ಅಕ್ಷರಾಭ್ಯಾಸ ಇಲ್ಲದೆ ಓದಲಾಗದ ನೂರು ಕೋಟಿ ಮಂದಿಯಿಂದ ನೀವು ಉತ್ತಮ ಸ್ಥಿತಿಯಲ್ಲಿದ್ದೀರಿ ಎಂದಲ್ಲವೆ? 

ಮಕ್ಕಳಿಗೂ ಕನಸುಗಳಿವೆ
ಮಕ್ಕಳಿಗೂ ಮಿದುಳಿದೆ, ಅವರೂ ಯೋಚಿಸಬಲ್ಲರು, ಅವರಿಗೂ ವ್ಯಕ್ತಿತ್ವ ಎಂಬುದಿದೆ. ಮಕ್ಕಳಿಗೆ ಅವರದೇ ಆದ ಕನಸುಗಳಿರುತ್ತವೆ. ಅವುಗಳಲ್ಲಿ ಕೆಲವು ಕ್ಷುಲ್ಲಕ, ಕಾರ್ಯಸಾಧ್ಯವಲ್ಲದ್ದು, ಮಕ್ಕಳಾಟಿಕೆಯದ್ದಾಗಿರಬಹುದು. ಮಗು ಮಕ್ಕಳಾಟಿಕೆಯ ಯೋಚನೆ ಮಾಡದೆ ಮತಾöರು ಮಾಡುತ್ತಾರೆ ಹೇಳಿ! ಅದು ಸಹಜ. ಇಲ್ಲಿ ಹೆತ್ತವರು ವಿವೇಚನೆಯಿಂದ ವರ್ತಿಸಬೇಕು, ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. “ಪಿರಾಮಿಡ್‌ ಪೋಷಣೆ’ ಎಂದು ಕರೆಯುವುದು ಇದನ್ನೇ. 

ನಾನೇ ಸಖತ್‌ ಸಕ್ಸಸ್‌!
ಅಜ್ಜ-ಅಜ್ಜಿಯರ ಮುಚ್ಚಟೆಯಲ್ಲಿ ಬೆಳೆದ ಕಾರಣ ಎಳವೆಯಲ್ಲಿ ನಾನೊಬ್ಬ ದಡ್ಡ ಶಿಖಾಮಣಿ ಆಗಿದ್ದೆ. ಐದು ಮತ್ತು ಆರನೆಯ ಕ್ಲಾಸುಗಳಲ್ಲಿ ಫೇಲೂ ಆಗಿದ್ದೆ. ನನ್ನ ಅಜ್ಜ ತೀರಿಕೊಂಡ ಬಳಿಕ ಅಪ್ಪನ ಜತೆಗೆ ಇರಬೇಕಾಯಿತು. ಅನಂತರ ಬದುಕೇ ಬದಲಾಯಿತು. ಏಳನೆಯ ಕ್ಲಾಸಿನಲ್ಲಿ ತರಗತಿಗೆ ಮೊದಲಿಗನಾದೆ. ಆಗ (1970ರ ಕಾಲಘಟ್ಟ) ನಾಲ್ಕು ವರ್ಷಗಳಲ್ಲಿ ಮುಗಿಸಬೇಕಾಗಿದ್ದ ಚಾರ್ಟರ್ಡ್‌ ಅಕೌಂಟೆನ್ಸಿಯನ್ನು ಮೂರೇ ವರ್ಷಗಳಲ್ಲಿ ಮುಗಿಸಿಬಿಟ್ಟೆ. 

ಬಂದದ್ದೆಲ್ಲವೂ ಪಾಸಿಟಿವ್‌
ನೀವು ಖಾಲಿ, ಒಂದು ದೊಡ್ಡ ಸೊನ್ನೆ ಎಂದುಕೊಳ್ಳಿ; ಆಗ ಬರುವುದೆಲ್ಲವೂ ಪಾಸಿಟಿವ್‌ ಆಗಿರುತ್ತದೆ. ಭವಿಷ್ಯ, ಜನರು ಮತ್ತು ಸ್ವಂತದ ಬಗ್ಗೆ ನಕಾರಾತ್ಮಕ ಆಲೋಚನೆಗಳು, ಅತಿಯಾದ ಆತ್ಮವಿಶ್ವಾಸ, ಸ್ವಂತ ಅರಿವಿನ ಕೊರತೆ – ಋಣಾತ್ಮಕ ಆಲೋಚನೆ, ಮನೋಭಾವ ಎಂದರೆ ಇದುವೇ.

ಒಳ್ಳೆಯ ನಾಳೆಗಾಗಿ ಇವತ್ತು ನಗು
ಯಶಸ್ಸು ಅಂದರೆ ಇಂದು ನಗುನಗುತ್ತಾ ಒಳ್ಳೆಯ ನಾಳೆಗಳಿಗಾಗಿ ಕೆಲಸ ಮಾಡುವುದು. ಉತ್ತಮ ಆರೋಗ್ಯ, ಕೀರ್ತಿ, ಸಂಪತ್ತು, ಉತ್ಸಾಹ, ಬುದ್ಧಿಮತ್ತೆ ಮತ್ತು ಪ್ರೀತಿ – ಇವೇ ಒಳ್ಳೆಯ ನಾಳೆಗಳನ್ನು ಉಂಟು ಮಾಡುತ್ತವೆ. ಇವು ಆರು  ಐಶ್ವರ್ಯಗಳು. ನನ್ನ ಸೆಮಿನಾರುಗಳಲ್ಲಿ ನಾನು ಆಗಾಗ “ಸಿಂಗಲ್‌ ಬೆಡ್‌ರೂಮ್‌’ನಿಂದ “ಸ್ವಿಮಿಂಗ್‌ಪೂಲ್‌ ಇರುವ ಬೆಡ್‌ರೂಮ್‌’ ಮನೆ ಹೊಂದುವ ಬಗ್ಗೆ ಚರ್ಚಿಸುತ್ತೇನೆ. ಸಂಪತ್ತು ಒಳ್ಳೆಯ ನಾಳೆಗಳ ಅವಿಭಾಜ್ಯ ಅಂಗ.

ಮುದ್ದು ಬೇರೆ, ಪ್ರೀತಿ ಬೇರೆ
ಮಕ್ಕಳನ್ನು ಪೋಷಿಸುವುದು ಒಂದು ಕಲೆ. ಆದರೆ ಇದನ್ನು ಅಳವಡಿಸಿಕೊಳ್ಳುವುದು ಬದಿಗಿರಲಿ; ಅನೇಕ ಹೆತ್ತವರಿಗೆ ಈ ಸೂಕ್ಷ್ಮತೆಯೇ ಅರ್ಥವಾಗುವುದಿಲ್ಲ. ಮಕ್ಕಳ ಪೋಷಣೆ ಒಂದು ವಿಶಾಲ ವಿಷಯ, ನಾಲ್ಕಾರು ವಾಕ್ಯಗಳಲ್ಲಿ ಅದನ್ನು ವಿವರಿಸಲಾಗದು. ಈ ವಿಚಾರಗಳ ಬಗ್ಗೆ ನನ್ನ “ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ’ ಪುಸ್ತಕದಲ್ಲಿ ವಿವರವಾಗಿ ವಿಶ್ಲೇಷಿಸಿದ್ದೇನೆ. ಮಕ್ಕಳನ್ನು ವಿಪರೀತ ಮುದ್ದು ಮಾಡಿ ತಲೆಯ ಮೇಲೆ ಕುಳ್ಳಿರಿಸಿಕೊಳ್ಳುವುದು ಬೇರೆ, ಪ್ರೀತಿಸುವುದು ಬೇರೆ ಎಂಬುದನ್ನು ಹೆತ್ತವರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಆರೋಗ್ಯಕರವಾದದ್ದನ್ನು ನೀಡುವುದು ಪ್ರೀತಿ; ವಿವೇಚನೆ ಇಲ್ಲದೆ ಕೇಳಿದ್ದೆಲ್ಲವನ್ನೂ ಕೊಡುವುದೆಂದರೆ ಮುದ್ದು ಮಾಡುವುದು ಎಂದರ್ಥ. 

ಒಂದೊಂದು ಮಗುವೂ ಒಂದೊಂದು ರತ್ನ
ಪ್ರತೀ ಮಗುವೂ ಒಂದು ಅಮೂಲ್ಯ ರತ್ನ. ನೀವು ಅದನ್ನು ಹೇಗೆ ಸಾಣೆಗೆ ಹಿಡಿಯುತ್ತೀರಿ ಎನ್ನುವುದನ್ನು ಆಧರಿಸಿ ಅದರ ಹೊಳಪು ವೃದ್ಧಿಸುತ್ತಾ ಹೋಗುತ್ತದೆ. ಮಗುವಿನಿಂದ ಅತೀ ಎಂಬಷ್ಟನ್ನು ನಿರೀಕ್ಷಿಸಬೇಡಿ. ಅತೀ ನಿರೀಕ್ಷೆ ಮಕ್ಕಳಲ್ಲಿ ಕೀಳರಿಮೆಯನ್ನು ಹುಟ್ಟು ಹಾಕಬಹುದು; ಅದುವೇ ಆತ್ಮಹತ್ಯೆಯ ಮನೋಭಾವಕ್ಕೂ ಕಾರಣವಾಗಬಹುದು.

– ಯಂಡಮೂರಿ ವೀರೇಂದ್ರನಾಥ್‌

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.