ಬಿ.ಸಿ. ರೋಡ್‌: ಸರಗಳ್ಳರಿಬ್ಬರ ಬಂಧನ


Team Udayavani, Jan 14, 2017, 3:05 AM IST

Sarakalla-13-1.jpg

ಬಂಟ್ವಾಳ: ಬಿ.ಸಿ. ರೋಡ್‌ ಕೈಕುಂಜೆಯಲ್ಲಿ ಮಹಿಳೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ಬಂಟ್ವಾಳ ನಗರ ಠಾಣೆ ಅಪರಾಧ ಪತ್ತೆ ವಿಭಾಗದ ಪೊಲೀಸರು ಶುಕ್ರವಾರ ಪಾಣೆಮಂಗಳೂರು ಮಾರ್ನಮಿ ಬೈಲ್‌ನಲ್ಲಿ ದ್ವಿಚಕ್ರ ವಾಹನ ಸಹಿತ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೇರಳ ರಾಜ್ಯ ಕಲ್ಲಿಕೋಟೆ ಜಿಲ್ಲೆ ಪರಂಬರ ತಾಲೂಕು ಚೆಂಬರಾ ನಿವಾಸಿ ಅಹಮ್ಮದ್‌ ಪಿ. ಕೆ. ಪುತ್ರ ಶಕೀರ್‌ ಯಾನೆ ನಿಜಾಮ್‌ (25) ಮತ್ತು ಕಾಸರಗೋಡು ಜಿಲ್ಲೆ  ಮಂಜೇಶ್ವರ ತಾಲೂಕು ಪೈವಳಿಕೆ ಮಂಜಲ್ಪಾಡಿ ನಿವಾಸಿ  ಜನಾರ್ದನ ಅವರ ಪುತ್ರ  ಕಿರಣ್‌( 25) ಆರೋಪಿಗಳು.

ಬಿ. ಮೂಡ ಗ್ರಾಮ ಕೈಕುಂಜೆ ನಿವಾಸಿ ಬಿಎಸ್‌ಎನ್‌ಎಲ್‌ ಉದ್ಯೋಗಿ ಕಮಲಾಕ್ಷಿ ಎಸ್‌.ಮಯ್ಯ ಜ. 5ರಂದು  ಕರ್ತವ್ಯ ಮುಗಿಸಿ ಸಂಜೆ 5. 45ರ ಸುಮಾರಿಗೆ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದಿದ್ದ ಆರೋಪಿಗಳು ಕತ್ತಿನಿಂದ ಸುಮಾರು 1. 40ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದರು. ಬಳಿಕ ನಗರ ಠಾಣೆಗೆ ದೂರು ಸಲ್ಲಿಸಲಾಗಿತ್ತು. ದೂರಿನ ಬಳಿಕ ಬಿ.ಸಿ.ರೋಡ್‌ ಕೈಕುಂಜೆ ದಾರಿಯುದ್ದಕ್ಕೂ ಇದ್ದಂತಹ ಸಿಸಿ ಕೆಮರಾ ಪರಿಶೀಲನೆ ಮಾಡಿದ್ದ ಪೊಲೀಸರು ದ್ವಿಚಕ್ರದ ಹಿಂಬದಿ ಸಂಖ್ಯೆಯನ್ನು ನಮೂದಿಸಿ ತನಿಖೆ ನಡೆಸಿದ್ದರು. ಜ. 13ರಂದು ಅದೇ ದ್ವಿಚಕ್ರದಲ್ಲಿ ಆರೋಪಿಗಳು ಮಾರ್ನಬೈಲಿನಲ್ಲಿ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ ವಾಹನ ತಡೆದಾಗ ಬೈಕ್‌ ತ್ಯಜಿಸಿ ತಪ್ಪಿಸಿ ಓಡಲು ಪ್ರಯತ್ನಿಸಿದ್ದು ಬಂಧನಕ್ಕೆ ಕಾರಣವಾಗಿತ್ತು.

ಮಂಗಳೂರು ನೀರುಮಾರ್ಗದಲ್ಲಿಯೂ ಜ. 5ರಂದು ಇದೇ ಆರೋಪಿಗಳು ಮಹಿಳೆಯೊಬ್ಬರ ಕರಿಮಣಿ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇದಲ್ಲದೆ ಆರೋಪಿಗಳ ಮೇಲೆ ಇನ್ನೂ ಹಲವು ಪ್ರಕರಣಗಳು ಇರುವುದಾಗಿ ಶಂಕಿಸಿದ್ದು ತನಿಖೆಯ ಬಳಿಕ ವಿವರ ಲಭ್ಯವಾಗಬೇಕಷ್ಟೆ ಎಂದಿದ್ದಾರೆ. ಆರೋಪಿಗಳು ಸಂಚರಿಸುತ್ತಿದ್ದ ದ್ವಿಚಕ್ರ ವಶಪಡಿಸಿಕೊಂಡಿದ್ದು ಅದರ ಮೌಲ್ಯ 50 ಸಾವಿರ ರೂ. ಎಂದು ಆಂದಾಜಿಸಿದೆ.

ಎಸ್‌ಪಿ ಭೂಷಣ ಜಿ. ಬೊರಸೆ, ಹೆಚ್ಚುವರಿ ಅಧೀಕ್ಷಕ ಸಿ.ಬಿ. ವೇದಮೂರ್ತಿ ನಿರ್ದೇಶನದಂತೆ, ಬಂಟ್ವಾಳ ಉಪ ವಿಭಾಗ ಪೊಲೀಸ್‌ ಉಪ ಅಧೀಕ್ಷಕ ರವೀಶ್‌ ಸಿ. ಆರ್‌., ಬಂಟ್ಟಾಳ ವೃತ್ತ ನಿರೀಕ್ಷಕ ಬಿ. ಕೆ. ಮಂಜಯ್ಯ ನೇತೃತ್ವದ ತಂಡದ ಎಸ್‌ಐ ನಂದಕುಮಾರ್‌ ಎಂ.ಎಂ., ಅಪರಾಧ ಪತ್ತೆ ವಿಭಾಗದ ಎಸ್‌ಐ ಗಂಗಾಧರಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.   ಎಎಸ್‌ಐ ಸಂಜೀವ ಕೆ.ಎ., ರಘುರಾಮ ಹೆಗ್ಡೆ,  ಎಚ್‌ಸಿಗಳಾದ ಅಬ್ದುಲ್‌ ಕರೀಂ, ರಾಜು, ಸುಜು, ಕೃಷ್ಣ, ಸುರೇಶ, ಗಿರೀಶ, ಪಿಸಿಗಳಾದ ರಾಜೇಶ್‌, ಅದ್ರಾಮ, ಸುಬ್ರಹ್ಮಣ್ಯ, ಗಂಗಾಧರ,  ಸಂಪತ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಂಪ್ಯೂಟರ್‌ ವಿಭಾಗ ಸಿಬಂದಿ ದಿವಾಕರ ಮತ್ತು ಸಂಪತ್‌ ಸಹಕರಿಸಿದ್ದರು.

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.