ಮಳಲಿ ದರೋಡೆ: ಮೂವರ ಬಂಧನ

Team Udayavani, Jul 19, 2019, 11:04 AM IST

ಬಜಪೆ: ಮೊಗರು ಗ್ರಾಮದ ಮಳಲಿ ಸೈಟ್‌ ಬಳಿ ಜು.14ರಂದು ಬೆೈಕಿನಲ್ಲಿ ಹೋಗುತ್ತಿದ್ದ ಸೆಂಥಿಲ್‌ ಕುಮಾರ್‌ ಅವರನ್ನು ಎರಡು ಬೆೈಕ್‌ನಲ್ಲಿ ಬಂದ ಯುವಕರು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರೂ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸರು ಮೂವರನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‌ನ ಅಬ್ದುಲ್‌ ಅಜೀಜ್‌ ನೌಷಾದ್‌ ಯಾನೆ ಅಕಲ್‌ (19) ಮತ್ತು ಬಡಗುಳಿ ಪಾಡಿ ಗ್ರಾಮದ ನಾರ್ಲಪದವಿನ ಮಹಮ್ಮದ್‌ ಮುಸ್ತಫಾ ಯಾನೆ ಮುಸ್ತಾಫ (23) ಅವರನ್ನು ಕುಕ್ಕುದ ಕಟ್ಟೆಯಿಂದ ಹಾಗೂ ಉಳಾಯಿಬೆಟ್ಟು ಪಟ್ರಕೋಡಿ ಹೌಸ್‌ನ ಆಶ್ಲೇಷ್‌ ಎ. ಕೋಟ್ಯಾನ್‌ ಯಾನೆ ಅಣ್ಣು(20)ನನ್ನು ಉಳಾಯಿಬೆಟ್ಟು ಬಳಿ ಬಂಧಿಸಲಾಗಿದೆ.

ಅವರಿಂದ 21,800 ರೂ., ದರೋಡೆಗೆ ಬಳಸಿದ್ದ ಬಜಾಜ್‌ ಡಿಸ್ಕವರ್‌ ಬೈಕ್‌, ಮೂರು ಮೊಬೈಲ್‌, ತಲವಾರು, ಚೂರಿ ಮುಂತಾದವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಪ್ರಕರಣದ ವಿವರ
ಸೆಂಥಿಲ್‌ ಕುಮಾರ್‌ ಸಣ್ಣ ಫೈನಾನ್ಸ್‌ ವ್ಯವಹಾರ ಮಾಡುತ್ತಿದ್ದು, ಪರಿಚಯದವರಿಗೆ ಸಾಲ ನೀಡುತ್ತಿದ್ದರು. ಪ್ರತಿ ರವಿವಾರ ಕಲೆಕ್ಷನ್‌ಗೆ ಹೋಗುತ್ತಿದ್ದರು. ಜು.14ರಂದು ಬೆಳಗ್ಗೆ ಮನೆಯಿಂದ ಬೈಕಿನಲ್ಲಿ ಹೊರಟು ಬಿ.ಸಿ.ರೋಡ್‌ ಮಾರ್ಗವಾಗಿ ಪೊಳಲಿ ಅಡೂರಿನಿಂದ ಮರಳು ಯಾರ್ಡ್‌ ನಿಂದ ಮಳಲಿ ಸೈಟಿಗೆ ಹೋಗಿ ಮಧ್ಯಾಹ್ನ ಮೊಗರು ಗ್ರಾಮದ ಮಳಲಿ ಸೈಟ್‌ ಸಮೀಪ ದರೋಡೆ ಮಾಡಲಾಗಿತ್ತು. ಅವರ ಬೆೈಕಿನ ಬಾಕ್ಸನ್ನು ಒಡೆದು ಅದರಲ್ಲಿದ್ದ 2,05,000 ರೂ.ಯನ್ನು ದರೋಡೆ ಮಾಡಲಾಗಿದ್ದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದು ಮೂರು ದಿನದೊಳಗೆ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಬಲೆ ಬೀಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ