ಮಂಗಳೂರು ವಿಮಾನ ನಿಲ್ದಾಣ : ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶ

Team Udayavani, Nov 19, 2019, 9:37 PM IST

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕನೋರ್ವ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 18.47 ಲಕ್ಷ ರೂ. ಮೌಲ್ಯದ 483.57 ಗ್ರಾಂ. ಚಿನ್ನವನ್ನು ಕಸ್ಟಮ್ಸ್‌ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದುಬಾೖಯಿಂದ ಮಂಗಳವಾರ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬಂದಿದ್ದ ಪ್ರಯಾಣಿಕರನ್ನು ಕಸ್ಟಮ್ಸ್‌ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಯಾಣಿಕನೋರ್ವ 483.57 ಗ್ರಾಂ. ಚಿನ್ನವನ್ನು ಪೇಸ್ಟ್‌ ರೂಪದಲ್ಲಿ ಮೂರು ಪ್ಯಾಕೇಟ್‌ಗಳಲ್ಲಿ ತುಂಬಿಸಿ ಗುದದ್ವಾರದೊಳಗೆ ಅಡಗಿಸಿಟ್ಟು ಸಾಗಿಸುತ್ತಿರುವುದು ಪತ್ತೆಯಾಯಿತು.

ಕೂಡಲೇ ಆತನಿಂದ ಚಿನ್ನವನ್ನು ಸ್ವಾಧೀನಪಡಿಸಲಾಯಿತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನ.4 ರಂದು ಪ್ರಯಾಣಿಕನೋರ್ವನಿಂದ ಆಟಿಕೆ ಗೊಂಬೆಯೊಳಗೆ ಪ್ಲೇಟ್‌ರೂಪದಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 9.65 ಲಕ್ಷ ರೂ. ಮೌಲ್ಯದ 252.98 ಗ್ರಾಂ. ಚಿನ್ನ ಹಾಗೂ ಅ.12 ರಂದು ಪ್ರಯಾಣಿಕನಿಂದ 19.62 ಲಕ್ಷ ರೂ.ಮೌಲ್ಯದ 524.78 ಗ್ರಾಂ.ಚಿನ್ನವನ್ನು ವಶಪಡಿಸಿಕೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ