ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಶ್ರದ್ಧಾ ಭಕ್ತಿಯ ಮಂಗಳೂರು ದಸರಾ ಸಂಪನ್ನ

Team Udayavani, Oct 16, 2021, 6:30 AM IST

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಮಂಗಳೂರು:ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ ಮಹೋತ್ಸವ’ ಶುಕ್ರವಾರ ಸಂಪನ್ನಗೊಂಡಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ಪುಷ್ಕರಿಣಿಯಲ್ಲಿ ಗಣಪತಿ, ನವದುರ್ಗೆಯರು, ಆದಿಶಕ್ತಿ ಸಹಿತ ಶ್ರೀ ಶಾರದಾ ಮಾತೆಯ ಮೂರ್ತಿಗಳ ವಿಸರ್ಜನೆ ನೆರವೇರಿತು.

ಶುಕ್ರವಾರ ಬೆಳಗ್ಗೆ ವಾಗೀಶ್ವರಿ ದುರ್ಗಾ ಹೋಮ, ಮಧ್ಯಾಹ್ನ ಶಿವಪೂಜೆ, ಪುಷ್ಪಾಲಂಕಾರ ಮಹಾ ಪೂಜೆ ನೆರವೇರಿತು. ರಾತ್ರಿ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಬಳಿಕ ಶ್ರೀ ಶಾರದಾ ಮಾತೆಯ ಮೂರ್ತಿಗಳ ವಿಸರ್ಜನೆ ನಡೆದು ಅವಭೃಥ ಸ್ನಾನ ನಡೆಯಿತು. ಅ. 16ರಂದು ರಾತ್ರಿ 7 ರಿಂದ 8 ಗಂಟೆಯ ವರೆಗೆ ಭಜನೆ, ರಾತ್ರಿ 7.30ಕ್ಕೆ ಗುರುಪೂಜೆ ನಡೆಯಲಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ವರ್ಣರಂಜಿತ ಮೆರವಣಿಗೆ ಇರಲಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲಾಯಿತು.

ಹುಲಿ ವೇಷದ ಆಕರ್ಷಣೆ
ಸಂಜೆ ವಿವಿಧ ತಂಡಗಳಿಂದ ನಡೆದ ಹುಲಿ ವೇಷ ಸೇವೆ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.ಈ ಬಾರಿ ದಸರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ದ್ದರು. ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ, ದೇವಸ್ಥಾನದ ಅಧ್ಯಕ್ಷ ಎಚ್‌.ಎಸ್‌.ಸಾಯಿರಾಮ್‌, ಉಪಾಧ್ಯಕ್ಷೆ ಉರ್ಮಿಳಾ ರಮೇಶ್‌, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್‌ ಆರ್‌., ವಿಧಾನಪರಿಷತ್‌ ಸದಸ್ಯಹರೀಶ್‌ ಕುಮಾರ್‌, ಕಿಯೋನಿಕ್ಸ್‌ ಅಧ್ಯಕ್ಷಹರಿಕೃಷ್ಣ ಬಂಟ್ವಾಳ, ದೇವಸ್ಥಾನದ ಟ್ರಸ್ಟಿಗಳಾದ ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ಎಂ. ಶೇಖರ್‌ ಪೂಜಾರಿ, ಸಂತೋಷ್‌ ಕುಮಾರ್‌, ಜಗದೀಪ್‌ ಡಿ. ಸುವರ್ಣ, ದೇವಸ್ಥಾನದ ಅಭಿವೃದ್ಧಿಮಂಡಳಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ| ಅನಸೂಯ ಬಿ.ಟಿ. ಸಾಲ್ಯಾನ್‌, ಉಪಾಧ್ಯಕ್ಷ ಡಾ| ಬಿ.ಜಿ. ಸುವರ್ಣ, ಸದಸ್ಯರಾದ ವೇದ ಕುಮಾರ್‌, ಜಯ ವಿಕ್ರಮ್‌, ರಾಧಾಕೃಷ್ಣ, ಎಚ್‌.ಎಸ್‌. ಜೈರಾಜ್‌, ಶೈಲೇಂದ್ರ ಸುವರ್ಣ, ರಮಾನಾಥ್‌ ಕರಂದೂರು, ಲೀಲಾಕ್ಷ ಕರ್ಕೇರ, ಸೂರ್ಯಕಾಂತ್‌ ಜೆ. ಸುವರ್ಣ, ಚಂದನ್‌ದಾಸ್‌, ಗೌರವಿ ಪಿ.ಕೆ.,ಕಿಶೋರ್‌ ದಂಡೆಕೇರಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಕೊಲ್ಲೂರು: ರಥೋತ್ಸವ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ. 14ರಂದು ಚಂಡಿಕಾ ಯಾಗ, ಮಕ್ಕಳಿಗೆ ವಿದ್ಯಾರಂಭ, ನವಾನ್ನಪ್ರಾಶನ ಹಾಗೂ ರಾತ್ರಿ ರಥೋತ್ಸವ ಸರಳವಾಗಿ ನಡೆಯಿತು.

ನವರಾತ್ರಿ ರಥೋತ್ಸವದ ಸಂದರ್ಭ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಬಹುತೇಕ ಸ್ಥಳೀಯರು ಮಾತ್ರ ರಥೋತ್ಸವದಲ್ಲಿ ಪಾಲ್ಗೊಂಡರು.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾ ಧಿಕಾರಿ ಮಹೇಶ್‌, ಗ್ರಾ.ಪಂ. ಅಧ್ಯಕ್ಷ ಶಿವರಾಮಕೃಷ್ಣ ಭಟ್‌, ಸಮಿತಿ ಸದಸ್ಯರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಯಾನಂದ ಹೋಬಳಿದಾರ್‌, ಗಣೇಶ‌ ಕಿಣಿ, ಸಂಧ್ಯಾ ರಮೇಶ, ಗೋಪಾಲಕೃಷ್ಣ, ಶೇಖರ ಪೂಜಾರಿ ಉಪಸ್ಥಿತರಿದ್ದರು.

ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅಮ್ಮ ದೇವಿ ನಾರಾಯಣಿ ಎಂಬ ಉದ್ಘೋಷದೊಡನೆ ಭಕ್ತರು ದೇವಿ ಸ್ತ್ರೋತ್ರವನ್ನು ಜಪಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ ಪೂಂಜ ಶ್ರೀದೇವಿಯ ದರ್ಶನ ಪಡೆದರು.

ಶ್ರೀಕೃಷ್ಣ ಮಠದಲ್ಲಿ ವಿಜಯದಶಮೀ ಉತ್ಸವ
ಉಡುಪಿ: ಶ್ರೀಕೃಷ್ಣ ಮಠ ಶುಕ್ರವಾರ ವಿಜಯದಶಮೀ ಮತ್ತು ಮಧ್ವಜಯಂತಿ ಉತ್ಸವವನ್ನು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆಚರಿಸಲಾಯಿತು. ನವರಾತ್ರಿ ಎಲ್ಲ ದಿನಗಳಲ್ಲಿ ಶ್ರೀಕೃಷ್ಣ ದೇವರಿಗೆ ದೇವಿ ಅಲಂಕಾರವನ್ನು ನಡೆಸಿ ಪೂಜಿಸಿದ್ದು ವಿಜಯದಶಮಿಯಂದು ಸಮಾಪನಗೊಂಡಿತು.

ಶ್ರೀಕೃಷ್ಣ ಮಠದಲ್ಲಿ ಕದಿರು ಕಟ್ಟುವ ಹಬ್ಬವನ್ನು ಆಚರಿಸಲಾಯಿತು. ಸೋದೆ ಮಠದಿಂದ ಭತ್ತದ ಕದಿರುಗಳನ್ನು ಮೆರವಣಿಗೆಯಲ್ಲಿ ತಂದು ಶ್ರೀಕೃಷ್ಣ ಮಠದಲ್ಲಿ ಒಂದೇ ದಿನ ತೆರೆಯುವ ಪೂರ್ವದ್ವಾರದ ಮೂಲಕ ಒಳಪ್ರವೇಶಿಸಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ವಿತರಿಸಲಾಯಿತು. ಮಧ್ವಾಚಾರ್ಯರ ಕಾಲದಿಂದ ಬಂದ ಅಕ್ಷಯ ಪಾತ್ರೆಗೆ ಹಿಂದಿನ ವರ್ಷ ತುಂಬಿದ ಕದಿರನ್ನು ತೆಗೆದು ಹೊಸ ಕದಿರುಗಳನ್ನು ತುಂಬಿಸಲಾಯಿತು.

 

ಟಾಪ್ ನ್ಯೂಸ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದೆಹಲಿ ಬೈಕ್ ಮಾಲೀಕರಿಗೆ ಶುರುವಾದ “ಸೆಕ್ಸ್” ಸಮಸ್ಯೆ

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

bommai

ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುತ್ತೇವೆ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

ಅಜ್ಜಿ

ಬಸ್ ನಿಲ್ದಾಣದಲ್ಲಿ ಮನೆ ಮಂದಿ ಬರುವಿಕೆಗಾಗಿ ಕಾಯುತ್ತಿರುವ ವಯೋವೃದ್ದೆ..!

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

high court

ಸಿಡಿ ತನಿಖಾ ವರದಿ ಅನುಮೋದಿಸಿದ ಎಸ್‌ಐಟಿ

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.