ದೊರೆಸ್ವಾಮಿಯವರ ವಿರುದ್ಧ ಮಾತನಾಡುವವರು ನಿಜವಾದ ದೇಶದ್ರೋಹಿಗಳು: ಯು.ಟಿ. ಖಾದರ್
Team Udayavani, Feb 27, 2020, 12:33 PM IST
ಮಂಗಳೂರು: ದೇಶದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ ಹೋರಾಟ ಮಾಡಿದಕ್ಕೆ ಸ್ವಾತಂತ್ರ‍್ಯ ಸಿಕ್ಕಿದೆ. ದೊರೆಸ್ವಾಮಿಯ ಅವರ ವಿರುದ್ಧ ಮಾತನಾಡುವವರು ನಿಜವಾದ ದೇಶದ್ರೋಹಿಗಳು. ಬಿಜೆಪಿ ಸರಕಾರದ ಮನೋಭಾವನೆಯನ್ನು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದರು.
ಸ್ವಾತಂತ್ರ‍್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿದ ಹೇಳಿಕೆಯ ಕುರಿತು ಅವರು ಮಂಗಳೂರಿನಲ್ಲಿ ಪ್ರತಿಕ್ರಿಯಿಸುತ್ತಾ ಇದು ಸ್ವಾತಂತ್ರ‍್ಯ ಹೋರಾಟಗಾರರಿಗೆ ಮಾಡಿದ ಅವಮಾನ ಇದಾಗಿದೆ ಎಂದರು.
ದೆಹಲಿಯಲ್ಲಿನ ಅಶಾಂತಿ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು ಜನರು ಸಾವಿಗೀಡಾಗಿರುವುದು ಬೇಸರದ ಸಂಗತಿ. ವಿಶ್ವ ಮಟ್ಟದಲ್ಲಿ ಇದು ಭಾರತಕ್ಕೆ ಕಪ್ಪುಚುಕ್ಕೆಯಾಗಿದೆ. ಕೇಂದ್ರ ಸರಕಾರ ಗಲಾಟೆ ಬಗೆಹರಿಸಲು ವಿಫಲವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ದೆಹಲಿಯ ಘಟನೆಗೆ ಕಾಂಗ್ರೆಸ್ ಕಾರಣ ಅಂತಾರೆ. ಇದು ನಗುವಿನ ಸಂಗತಿಯಾಗಿದೆ. ನಳಿನ್ ಕುಮಾರ್ ಅಲಂಕಾರಕ್ಕೆ ಸ್ಥಾನ ಪಡೆದವರು ಅವರಿಗೆ ಯಾವುದೇ ಅಧಿಕಾರವಿಲ್ಲ. ಅವರಿಗೆ ಪಕ್ಷ ನೀಡಿರುವ ಕೆಲಸ ಕಾಂಗ್ರೆಸ್ ಅನ್ನು ದೂರುವುದಾಗಿದೆ ಎಂದು ಆರೋಪಿಸಿದರು.