ಮೀಸಲಾತಿ ಪರಿಷ್ಕರಣೆಯ ಜತೆಗೆ ವಾರ್ಡ್‌ ವ್ಯಾಪ್ತಿ ಮರು ವಿಂಗಡಣೆ

ಮಹಾನಗರ ಪಾಲಿಕೆ ಚುನಾವಣೆ

Team Udayavani, Nov 5, 2019, 4:24 AM IST

Mlr Muncipalty

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‌ ಗಳ ಮೀಸಲಾತಿಯ ಪರಿಷ್ಕರಣೆಯ ಜತೆಗೆ ವಾರ್ಡ್‌ಗಳ ವ್ಯಾಪ್ತಿಯ ಮರು ವಿಂಗಡಣೆಯನ್ನೂ ಚುನಾವಣ ಆಯೋಗ ಮಾಡಿದೆ. ವಾರ್ಡ್‌ ವ್ಯಾಪ್ತಿ ಮರು ವಿಂಗಡಣೆ ವಿಂಗಡಣೆ ಪರಿಣಾಮ ಕೆಲವು ವಾಡ್‌ ì ಗಳ ಕೆಲವು ಭಾಗಗಳು ಪಕ್ಕದ ವಾರ್ಡ್‌ ಗಳಿಗೆ ಸೇರ್ಪಡೆಯಾಗಿವೆ. ಇದರಿಂದಾಗಿ ಮತದಾರರ ಸಂಖ್ಯೆ ಕೆಲವು ವಾರ್ಡ್‌ಗಳಲ್ಲಿ ಕಳೆದ ಬಾರಿಯ ಚುನಾವಣೆಗಿಂತ ಕಡಿಮೆಯಾಗಿದೆ ಹಾಗೂ ಇನ್ನೂ ಕೆಲವು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ ಜಾಸ್ತಿಯಾಗಿದೆ.

ವಾರ್ಡ್‌ ವ್ಯಾಪ್ತಿ ವಿಸ್ತರಣೆ ಅಥವಾ ಕಡಿತ ಆಗಿರುವುದರಿಂದ ಭೌಗೋಳಿಕವಾಗಿ ವಾರ್ಡ್‌ಗಳ ವಿಸ್ತೀರ್ಣದಲ್ಲಿ ಬದಲಾವಣೆ ಕಂಡು ಬಂದಿದೆ. ಕೆಲವು ಕಡೆ ಅಲ್ಪ ಸ್ವಲ್ಪ ವ್ಯತ್ಯಾಸ ಆಗಿದ್ದರೆ ಇನ್ನೂ ಕೆಲವು ಕಡೆ ದೊಡ್ಡ ಮಟ್ಟದ ಬದಲಾವಣೆ ಆಗಿರುವುದು ವಾರ್ಡ್‌ ವ್ಯಾಪ್ತಿ ಪರಿಷ್ಕರಣೆಯ ವಿಶಿಷ್ಟತೆ.

ಕೆಲವು ಬದಲಾವಣೆಗಳು ಹೀಗಿವೆ
ವಾರ್ಡ್‌- 2 (ಸುರತ್ಕಲ್‌ ಪೂರ್ವ)ಕ್ಕೆ ಪಕ್ಕದ ವಾರ್ಡ್‌ನ ಒಂದು ಬೂತ್‌ ಸೇರ್ಪಡೆಗೊಂಡಿದೆ. ಈ ಬೂತ್‌ನಲ್ಲಿ ಸುಮಾರು 1300 ಮತದಾರರಿದ್ದಾರೆ. ವಾರ್ಡ್‌- 5 (ಕಾಟಿಪಳ್ಳ ಉತ್ತರ)ಕ್ಕೆ 20 ಮನೆಗಳು ಸೇರ್ಪಡೆಯಾಗಿದ್ದರೆ ಇನ್ನೊಂದು ಕಡೆ ಕೆಲವು ಮನೆಗಳು ಈ ವಾರ್ಡ್‌ನಿಂದ 6ನೇ ವಾರ್ಡ್‌(ಇಡ್ಯಾ ಪೂರ್ವ)ಗೆ ಸೇರ್ಪಡೆಯಾಗಿವೆ. ವಾರ್ಡ್‌- 8 (ಹೊಸಬೆಟ್ಟು)ಕ್ಕೆ ಪಕ್ಕದ ವಾರ್ಡ್‌ಸುಮಾರು 400 ಮತದಾರರು ಸೇರ್ಪಡೆ ಗೊಂಡಿದ್ದಾರೆ.

ವಾರ್ಡ್‌ – 9 (ಕುಳಾಯಿ)ರಲ್ಲಿ 1200 ಮತದಾರರು ಕಡಿಮೆಯಾಗಿದ್ದಾರೆ. ವಾರ್ಡ್‌- 10 (ಬೈಕಂಪಾಡಿ)ಕ್ಕೆ ಕುಳಾಯಿ ವಾರ್ಡ್‌ನಿಂದ 1311 ಮತದಾರರು ಸೇರ್ಪಡೆಯಾಗಿದ್ದಾರೆ. ವಾರ್ಡ್‌-40 (ಕೋರ್ಟ್‌) ರಿಂದ ಕೆಲವು ಭಾಗಗಳು ಪಕ್ಕದ ಸೆಂಟ್ರಲ್‌ ಮಾರ್ಕೆಟ್‌ ವಾರ್ಡ್‌ ಗೆ ಸೇರ್ಪಡೆಯಾಗಿವೆ. ವಾರ್ಡ್‌ ವ್ಯಾಪ್ತಿ ಬದಲಾಗಿರುವ ಬಗ್ಗೆ ಹೆಚ್ಚಿನ ವಾರ್ಡ್‌ಗಳಲ್ಲಿ ಮತದಾರರಿಗೆ ಮಾಹಿತಿ ಇಲ್ಲ. ಈಗ ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳು ಮತ ಯಾಚನೆಗೆ ತೆರಳುವ ಸಂದರ್ಭದಲ್ಲಿ ಮಾಹಿತಿ ನೀಡುತ್ತಿದ್ದಾರೆ. ಆದರೆ ಚುನಾವಣ ಕಣದಲ್ಲಿರುವ ಹೊಸ ಅಭ್ಯರ್ಥಿಗಳಿಗೆ ತಮ್ಮ ವಾರ್ಡ್‌ಗಳಲ್ಲಿ ಆಗಿರುವ ಬದಲಾವಣೆಗೆ ಸಂಬಂಧಿಸಿ ಮಾಹಿತಿ ಕಡಿಮೆ. ವಾರ್ಡ್‌ ವ್ಯಾಪ್ತಿ ಮರು ವಿಂಗಡಣೆ ಪರಿಣಾಮವಾಗಿ ಮಹಿಳಾ ಮತದಾರರು ಅಧಿಕ ಇರುವ ವಾರ್ಡ್‌ಗಳನ್ನು ಮಹಿಳಾ ಮೀಸಲು ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ.

ರಾಜಕೀಯ ಚಿತ್ರಣ ಬದಲು
ವಾರ್ಡ್‌ಗಳ ಮರು ವಿಂಗಡನೆಯ ಪರಿಣಾಮವಾಗಿ ವಾರ್ಡ್‌ ಗಳ ಮತದಾರರಿಗೆ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮತದಾರರು ಈ ವಾರ್ಡ್‌ ಮೊದಲು ತಮ್ಮ ವಾರ್ಡ್‌ ವ್ಯಾಪ್ತಿ ಯಾವುದು, ಅಭ್ಯರ್ಥಿಗಳು ಯಾರು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಇಲ್ಲದೆ ಹೋದರೆ, ಮತದಾರರು ಅಂತಿಮ ಕ್ಷಣದಲ್ಲಿ ಗೊಂದಲಕ್ಕೆ ಒಳಗಾಗುವ ಸಾಧ್ಯತೆಯೂ ಎದುರಾಗಬಹುದು. ಇನ್ನೊಂದೆಡೆ, ಎಲ್ಲೆಲ್ಲಿ ವಾರ್ಡ್‌ಗಳ ಮರು ವಿಂಗಡಣೆ ಆಗಿದೆಯೋ ಅಂಥ ಕಡೆಗಳಲ್ಲಿ ಅದು ಈ ಬಾರಿಯ ಪಾಲಿಕೆ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು. ಏಕೆಂದರೆ, ಈ ವಾರ್ಡ್‌ ಮರು ವಿಂಗಡಣೆಯಿಂದ ಅಂಥ ವಾರ್ಡ್‌ಗಳ ರಾಜಕೀಯ ಚಿತ್ರಣ ಬದಲಾದರೂ ಅಚ್ಚರಿಪಡಬೇಕಿಲ್ಲ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತದೆ.

– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.