ಮಂಗಳೂರು: ವಿದ್ಯಾರ್ಥಿನಿಯ ಕೊಲೆ

ಕುತ್ತಿಗೆಗೆ ವೈರ್‌ ಬಿಗಿದು ಕೊಲೆ ಮಾಡಿದ ರೀತಿ ಚಿಕ್ಕಮಗಳೂರು ಯುವತಿಯ ಶವ ಪತ್ತೆ

Team Udayavani, Jun 7, 2019, 11:55 PM IST

ಮಂಗಳೂರು: ಬ್ಯಾಂಕಿಂಗ್‌ ಪರೀಕ್ಷೆ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಕೊಲೆಯಾದ ಘಟನೆ ಶುಕ್ರವಾರ ಸಂಜೆ ನಗರದಲ್ಲಿ ನಡೆದಿದೆ.

ಚಿಕ್ಕಮಗಳೂರಿನ ತರೀಕೆರೆಯ ಮಂಜುನಾಥ ವೈ.ಎನ್‌ ಎಂಬವರ ಪುತ್ರಿ ಅಂಜನಾ ವಸಿಷ್ಠ (22) ಕೊಲೆಯಾದ ವಿದ್ಯಾರ್ಥಿನಿಯಾಗಿದ್ದಾಳೆ.

ಅಂಜನಾ ಉಜಿರೆಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಎಂ.ಎಸ್ಸಿ ಪೂರೈ ಸಿದ್ದು, ಜೂ. 2ರಂದು ಕೋಚಿಂಗ್‌ ಸೆಂಟರ್‌ ಒಂದರಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ತರಬೇತಿಗೆ ಮಂಗಳೂರಿಗೆ ಬಂದಿದ್ದಳು. ಆಕೆಯೊಂದಿಗೆ ಉಜಿರೆಯಲ್ಲಿ ಪರಿಚಿತ ಯುವಕ ನೋರ್ವನೂ ತರಬೇತಿಗೆ ಬಂದಿದ್ದ. ಇಬ್ಬರೂ ತಾವು ದಂಪತಿ ಎಂದು ಸುಳ್ಳು ಹೇಳಿ ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂದಿನ ಮನೆಯ ಪಿಜಿಯಲ್ಲಿ ಇದ್ದರು ಎನ್ನಲಾಗಿದೆ.

2 ದಿನಗಳ ಬಳಿಕ ಆಕೆ ಊರಿಗೆ ಮರಳಿದ್ದು, ಆತ ಫೋನ್‌ ಮೂಲಕ ಆಕೆಯನ್ನು ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿಗೆ ಬಂದಿದ್ದಳು. ಪಿಜಿಗೆ ಬಂದ ಬಳಿಕ ಸಂಜೆ ವೇಳೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.

ವೈರ್‌ ಬಿಗಿದು ಕೊಲೆ?
ಜತೆಗಿದ್ದ ಯುವಕ ಬೆಳಗ್ಗೆ ಆಕೆಯನ್ನು ಬೆಡ್‌ನ‌ಲ್ಲಿ ಟಿವಿ ಕೇಬಲ್‌ ವೈಯರ್‌ ಕತ್ತಿಗೆ ಬಿಗಿದು ಕೊಲೆ ಮಾಡಿ ಹೊರಗಿನಿಂದ ಬಾಗಿಲು ಹಾಕಿ ಪರಾರಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸಂಜೆವರೆಗೆ ಬಾಗಿಲು ತೆರೆಯದ್ದರಿಂದ ಕಸ ಗುಡಿ ಸುವ ಮಹಿಳೆಗೆ ಸಂಶಯ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿ ದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಅಂಜನಾಳಿಗೆ ಇತ್ತೀಚೆಗೆ ಮನೆ ಯವರು ಬೇರೆ ಹುಡುಗ ನೊಂದಿಗೆ ಮದುವೆಗೆ ಮಾತುಕತೆ ನಡೆಸಿ ದ್ದರು. ಇದೇ ಆಕೆಯ ಕೊಲೆಗೆ ಕಾರಣ ವಾಗಿರಬಹುದು ಎಂದು ಶಂಕಿಸಲಾಗಿದೆ.

ತಜ್ಞರು ಆಗಮಿಸಲು ಪಟ್ಟು
ಘಟನೆ ಸುದ್ದಿ ತಿಳಿದು ಅಂಜನಾಳ ಹೆತ್ತವರು ಮಂಗಳೂರಿಗೆ ಧಾವಿಸಿ ಬಂದಿದ್ದು, ಸಂಜೆ ಪಿಜಿಯಿಂದ ಶವ ತೆಗೆಯಲು ನಿರಾಕರಿಸಿದ್ದರು. ಸ್ಥಳಕ್ಕೆ ವಿಧಿ-ವಿಜ್ಞಾನ ತಜ್ಞರು ಬಂದು ಪರಿಶೀಲಿಸಿದ ಬಳಿಕವೇ ಮೃತದೇಹವನ್ನು ಹೊರ ತೆಗೆಯಬೇಕೆಂದು ಪಟ್ಟು ಹಿಡಿದಿದ್ದರು. ಆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಜ್ಞರು ಆಗಮಿಸಿ ಪರಿಶೀಲಿಸಿದ ಬಳಿಕವೇ ಮೃತದೇಹ ಪಿಜಿಯಿಂದ ಹೊರತರಲಾಯಿತು.

ಚಿಕ್ಕಮಗಳೂರಿಂದ ತಂದೆಯೆ ಕಳಿಸಿದ್ದರು
ವಾಪಸ್‌ ಮಂಗಳೂರಿಗೆ ಹೊರ ಟಿದ್ದ ಅಂಜನಾಳನ್ನು ಆಕೆಯ ತಂದೆಯೇ ಚಿಕ್ಕಮಗಳೂರಿನಲ್ಲಿ ಬಸ್‌ ಹತ್ತಿಸಿ ಕಳುಹಿಸಿದ್ದರು. ಜತೆಗೆ ಮಂಗಳೂರಿಗೆ ತಲುಪಿದ ಬಗ್ಗೆಯೂ ಆಕೆ ಮನೆಗೆ ತಿಳಿಸಿದ್ದಳು. ಕೋಚಿಂಗ್‌ಗಾಗಿ ಮಂಗಳೂರಿನಲ್ಲಿ ಪಿಜಿಯಲ್ಲಿರುವುದಾಗಿಯೂ ಆಕೆ ಮನೆಯವರಿಗೆ ತಿಳಿಸಿದ್ದಳು. ಇದೀಗ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.
ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ