ಮಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
Team Udayavani, Jun 30, 2022, 11:25 PM IST
ಮಂಗಳೂರು : ನಗರದ ಪದವಿನಂಗಡಿ ಸಮೀಪ ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ.
ಬಾಂದೊಟ್ಟು ದ್ವಾರದ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 5 ಅಂತಸ್ತಿನ ಕಟ್ಟಡದಲ್ಲಿ 4ನೇ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ (53) ಅವರು ಅಲ್ಲಿಂದ 3ನೇ ಅಂತಸ್ತಿಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜಾರ್ಜ್ ಟಿ.ವಿ. ಅವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಕಂಟ್ರಾಕ್ಟರ್ ಪ್ರಶಾಂತ್ ಅವರ ನೇತೃತ್ವದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ವೇಳೆ ಮಂಗಳವಾರ ಘಟನೆ ನಡೆದಿದೆ. ಸುರಕ್ಷತಾ ದೃಷ್ಟಿಯಿಂದ ಹಲಗೆಯಂತಹ ಕಬ್ಬಿಣದ ಜಾಲಿ ಅಳವಡಿಸಬೇಕಿದ್ದು, ಆದರೆ ಕಂಟ್ರಾಕ್ಟರ್ ಮತ್ತು ಕಟ್ಟಡದ ಮಾಲಕರು ಜಾಲಿ ಅಳವಡಿಸದೆ ಹಾಗೂ ಸೇಫ್ಟಿ ಬೆಲ್ಟ್, ಸೇಫ್ಟಿ ಹೆಲ್ಮೆಟ್ ನೀಡದೆ ನಿರ್ಲಕ್ಷ್ಯ ವಹಿಸಿರುವುದೇ ಅವಘಡಕ್ಕೆ ಕಾರಣ ಎಂದು ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.