ವಿಚಾರವಾದಿ ಪ್ರೊ| ನರೇಂದ್ರ ನಾಯಕ್‌ ಕೊಲೆಗೆ ಸಂಚು?

Team Udayavani, Mar 17, 2017, 11:05 AM IST

NAyak.jpg

ಮಂಗಳೂರು: ವಿಚಾರವಾದಿಗಳ ಸಂಘದ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಪ್ರೊ | ನರೇಂದ್ರ ನಾಯಕ್‌ ಅವರು ತನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ನಗರದ ಉರ್ವ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಪ್ರೊ| ನರೇಂದ್ರ ನಾಯಕ್‌  ಅವರು ಬುಧವಾರ ಬೆಳಗ್ಗೆ  ನಗರದ ಹ್ಯಾಟ್‌ಹಿಲ್‌ನಲ್ಲಿರುವ  (ಲಾಲ್‌ಬಾಗ್‌ ಬಳಿ) ತನ್ನ ಮನೆಯಿಂದ ಕಾರಿನಲ್ಲಿ ಹೊರಟು ಬಂದಾಗ ಬುಲೆಟ್‌ ಬೈಕ್‌ನಲ್ಲಿ ಬಂದ ಇಬ್ಬರು ತಡೆದು ನಿಲ್ಲಿಸಿ “ನಿಮ್ಮ ಕಾರಿನ ಟೈರ್‌ನಲ್ಲಿ  ಗಾಳಿ ಇಲ್ಲ’ ಎಂದು ಹೇಳಿ ಹಲ್ಲೆಗೆ ಯತ್ನಿಸಿದ್ದಾರೆ ಎಂದವರು ದೂರಿನಲ್ಲಿ ವಿವರಿಸಿದ್ದಾರೆ.

“ನಾನು ಕಾರನ್ನು ನಿಲ್ಲಿಸದೆ ಮುಂದುವರಿದು ಸಮೀಪದ ಪೆಟ್ರೋಲ್‌ ಬಂಕ್‌ಗೆ ತೆರಳಿ ಪರಿಶೀ ಲಿಸಿದಾಗ   ಕಾರಿನ ಟೈರ್‌ನಲ್ಲಿ  ಗಾಳಿ ಕಡಿಮೆಯಾಗಿಲ್ಲದಿರುವುದು ಕಂಡು ಬಂದಿದೆ. ಹಾಗಾಗಿ ಬೈಕ್‌ನಲ್ಲಿ ಬಂದವರು ಸುಳ್ಳು  ಹೇಳಿದ್ದಾರೆ. ಅವರು ನನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದು, ನನ್ನ ಮೇಲೆ ದಾಳಿ ನಡೆಸುವುದು ಅವರ ಉದ್ದೇಶವಾಗಿತ್ತೆಂದು ಭಾಸವಾಗುತ್ತಿದೆ. ಒಂದೊಮ್ಮೆ ನಾನು ಕಾರಿನಿಂದ ಇಳಿಯುತ್ತಿದ್ದರೆ ನನ್ನ ಮೇಲೆ ದಾಳಿ ನಡೆಯುತ್ತಿತ್ತು ಎಂಬ ಸಂಶಯವಿದೆ’ ಎಂದವರು ತಿಳಿಸಿದ್ದಾರೆ. 

ವರ್ಷದ ಹಿಂದೆ ಕೊಲೆಯಾದ ಆರ್‌ಟಿಐ ಕಾರ್ಯಕರ್ತ ವಿನಾ ಯಕ ಬಾಳಿಗಾ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ದಿಶೆಯಲ್ಲಿ  ಪ್ರೊ| ನರೇಂದ್ರ ನಾಯಕ್‌ ಹೋರಾಟ ನಡೆಸುತ್ತಿದ್ದಾರೆ. 

ಅವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ  ಕಳೆದ ಐದಾರು ತಿಂಗಳಿಂದ ಗನ್‌ ಮ್ಯಾನ್‌ ಸೌಲಭ್ಯ ಒದಗಿಸಲಾಗಿದೆ. ಬುಧವಾರ ಗನ್‌ ಮ್ಯಾನ್‌ ಬರುವುದಕ್ಕೆ ಮೊದಲೇ ಅವರು ಮನೆಯಿಂದ ಹೊರಟಿದ್ದರು. ಹಾಗಾಗಿ ಗನ್‌ ಮ್ಯಾನ್‌ ಜತೆಗಿರಲಿಲ್ಲ. 

ಪ್ರೊ| ನರೇಂದ್ರ ನಾಯಕ್‌ ಅವರು ಸಲ್ಲಿಸಿರುವ ದೂರನ್ನು ಉರ್ವ ಪೊಲೀಸರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್‌ ದಾಖಲಾಗಬೇಕಿದೆ. 

ತನಿಖೆ ನಡೆಯುತ್ತಿದೆ: 
ಕಮಿಷನರ್‌

ಪ್ರೊ| ನರೇಂದ್ರ ನಾಯಕ್‌ ಅವರು ಬುಧವಾರದ ಘಟನೆಯ ಬಗ್ಗೆ ನೀಡಿರುವ ದೂರಿನ ಬಗ್ಗೆ  ತನಿಖೆ ನಡೆಸುತ್ತಿದ್ದೇವೆ.  ಅವರಿಗೆ ಕಳೆದ ಐದಾರು ತಿಂಗಳಿಂದ ಹಗಲು ಹೊತ್ತು ಗನ್‌ ಮ್ಯಾನ್‌ ಸೌಲಭ್ಯ ನೀಡಲಾಗಿದ್ದು, ಇದೀಗ ಅವರ ಭದ್ರತೆಗಾಗಿ ರಾತ್ರಿ ವೇಳೆಗೆ ಇನ್ನೋರ್ವ ಗನ್‌ ಮ್ಯಾನ್‌ ಸೌಲಭ್ಯ ಒದಗಿಸಲಾಗಿದೆ  ಎಂದು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ತಿಳಿಸಿದ್ದಾರೆ. 
 
ಟಾಪ್ ನ್ಯೂಸ್

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

astro

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯ

ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದು ಅಂತಿಮ ಪಂದ್ಯ

ನಾರ್ವೆ ಮಾಜಿ ಸಚಿವರ ಟ್ವಿಟರ್‌ನಲ್ಲಿ ಮರವಂತೆ ಚಿತ್ರ

ನಾರ್ವೆ ಮಾಜಿ ಸಚಿವರ ಟ್ವಿಟರ್‌ನಲ್ಲಿ ಮರವಂತೆ ಚಿತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!

ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!

ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !

ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !

ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ

ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ

ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್‌ ಸಾಕ್ಷರತೆ: ನಳಿನ್‌ ಕುಮಾರ್‌ ಕಟೀಲು

ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್‌ ಸಾಕ್ಷರತೆ: ನಳಿನ್‌ ಕುಮಾರ್‌ ಕಟೀಲು

ದ.ಕ. ಜಿಲ್ಲೆಯಾದ್ಯಂತ ಉತ್ತಮ ಮಳೆ; ಇಂದು “ಆರೆಂಜ್‌ ಅಲರ್ಟ್‌’

ದ.ಕ. ಜಿಲ್ಲೆಯಾದ್ಯಂತ ಉತ್ತಮ ಮಳೆ; ಇಂದು “ಆರೆಂಜ್‌ ಅಲರ್ಟ್‌’

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

astro

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.