ಮಂಗಳೂರು-ಸುಬ್ರಹ್ಯಣ್ಯ, ಪುತ್ತೂರು ರೈಲು ಮರು ಆರಂಭ
Team Udayavani, Dec 3, 2021, 4:16 AM IST
ಮಂಗಳೂರು: ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್- ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ರೈಲು ಮರುಆರಂಭಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದ್ದು ಡಿ. 9ರಿಂದ ಸಂಚರಿಸುವ ಸಾಧ್ಯತೆಗಳಿವೆ.
ಪ್ರಸ್ತುತ ಲಭ್ಯ ವೇಳಾಪಟ್ಟಿಯಂತೆ ನಂ. 06489 ರೈಲು ಬೆಳಗ್ಗೆ 10ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಬಂಟ್ವಾಳಕ್ಕೆ 10.50ಕ್ಕೆ, ನೇರಳಕಟ್ಟಕೆ 11.04 ಕ್ಕೆ, ಕಬಕ ಪುತ್ತೂರಿಗೆ 11.18ಕ್ಕೆ, ನರಿಮೊಗರಿಗೆ 11.31ಕ್ಕೆ, ಕಾಣಿಯೂರಿಗೆ 11.40ಕ್ಕೆ, ಎಡಮಂಗಲಕ್ಕೆ 11.50 ಕ್ಕೆ ಕೋಡಿಂಬಾಳಕ್ಕೆ 11.56ಕ್ಕೆ ಹಾಗೂ ಬಜಕರೆಗೆ 12.01ಕ್ಕೆ ಹಾಗೂ 12.30ಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲಿದೆ.
ನಂ. 06488 ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ರೈಲು 1.30ಕ್ಕೆ ಸುಬ್ರಹ್ಮಣ್ಯ ರೋಡ್ನಿಂದ ಹೊರಡಲಿದ್ದು 1.37ಕ್ಕೆ ಬಜಕೆರೆ,1.41ಕ್ಕೆ ಕೋಡಿಂಬಾಳ, 1.49ಕ್ಕೆ ಎಡಮಂಗಲ, 1.57ಕ್ಕೆ ಕಾಣಿಯೂರು, 2.06ಕ್ಕೆ ನರಿಮೊಗರು, 2.19ಕ್ಕೆ ಕಬಕ ಪುತ್ತೂರು, 2.32ಕ್ಕೆ ನೇರಳಕಟ್ಟೆ, 2.49ಕ್ಕೆ ಬಂಟ್ವಾಳ, 3.35ಕ್ಕೆ ಪಡೀಲ್, 4.10ಕ್ಕೆ ಮಂಗಳೂರು ಸೆಂಟ್ರಲ್ಗೆ ತಲುಪಲಿದೆ.
ಇದನ್ನೂ ಓದಿ:ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ನಡುವೆ ಬೆಳಗ್ಗೆ, ಸಂಜೆ ರೈಲು ಸಂಚಾರ ನಡೆಸಲಿದೆ.
ನಂ. 06487 ರೈಲು ಸಂಜೆ 6ಕ್ಕೆ ಮಂಗಳೂರಿನಿಂದ ಹೊರಟು 6.14ಕ್ಕೆ ಮಂಗಳೂರು ಜಂಕ್ಷನ್, 6.30ಕ್ಕೆ ಪಡಿಲ್, 6.44ಕ್ಕೆ ಬಂಟ್ವಾಳ ಹಾಗೂ 7.25ಕ್ಕೆ ಕಬಕ-ಪುತ್ತೂರು ತಲುಪಲಿದೆ. ನಂ. 06486 ರೈಲು ರಾತ್ರಿ 8.25ಕ್ಕೆ ಕಬಕ ಪುತ್ತೂರಿನಿಂದ ಹೊರಟು 8.54ಕ್ಕೆ ಬಂಟ್ವಾಳ, 9.39ಕ್ಕೆ ಮಂಗಳೂರು ಜಂಕ್ಷನ್ ಹಾಗೂ 10.05ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ನಂ. 06485 ಮಂಗಳೂರು ಸೆಂಟ್ರಲ್-ಕಬಕ-ಪುತ್ತೂರು ರೈಲು ಬೆಳಗ್ಗೆ 5.45ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು 5.57ಕ್ಕೆ ಮಂಗಳೂರು ಜಂಕ್ಷನ್, 6.15ಕ್ಕೆ ಪಡೀಲ್, 6.29ಕ್ಕೆ ಬಂಟ್ವಾಳ, 6.43ಕ್ಕೆ ನೇರಳಕಟ್ಟೆ, 7.15ಕ್ಕೆ ಕಬಕ ಪುತ್ತೂರು ತಲುಪಲಿದೆ.
ನಂ. 06484 ರೈಲು 7.55ಕ್ಕೆ ಪುತ್ತೂರಿನಿಂದ ಹೊರಟು 8.09ಕ್ಕೆ ನೇರಳಕಟ್ಟೆ, 8.27ಕ್ಕೆ ಬಂಟ್ವಾಳ, 8.55ಕ್ಕೆ ಪಡೀಲ್, 8.59ಕ್ಕೆ ಮಂಗಳೂರು ಜಂಕ್ಷನ್ ಹಾಗೂ 9.25ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ
ಯರಡಾಲ ಗ್ರಾಮ; ಇಲ್ಲಿ ಮೂಲ ಸೌಕರ್ಯಗಳದ್ದೇ ಕೊರತೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ