ದಪ್ಪ ಹುಡುಗಿಯ ಮದುವೆಯ ಕಥೆ!
Team Udayavani, May 9, 2019, 6:00 AM IST
ವಿಭಿನ್ನ ಟೈಟಲ್ನ ಸಿನೆಮಾ ಕುಡ್ಲದಲ್ಲಿ ಸದ್ದಿಲ್ಲದೆ ಶೂಟಿಂಗ್ ಮುಗಿಸಿದೆ. ಗೀತೇಶ್ ಮಾಡೂರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನೆಮಾದ ಹೆಸರು “ಮಂಕು ಭಾಯ್ ಫಾಕ್ಸಿ ರಾಣಿ’. ರೂಪೇಶ್ ಶೆಟ್ಟಿ ಸಿನೆಮಾದಲ್ಲಿ ಮುಖ್ಯ ರೋಲ್ನಲ್ಲಿದ್ದಾರೆ. ವಿಟ್ಲ, ಪುತ್ತೂರು ಭಾಗದಲ್ಲಿ ಸಿನೆಮಾದ ಶೂಟಿಂಗ್ ಆಗಿದೆ. ಈ ಸಿನೆಮಾ ಶೂಟಿಂಗ್ ಸಮಯದಲ್ಲಿಯೇ ಸ್ಯಾಂಡಲ್ವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಖ್ಯಾತ ಕಲಾವಿದ ಪ್ರಕಾಶ್ ತೂಮಿನಾಡ್ ಸಿನೆಮಾದಲ್ಲಿ ಹೊಸ ಗೆಟಪ್ನಲ್ಲಿದ್ದಾರೆ.
“ಬ್ರಹ್ಮ ಗಂಟು’ ಧಾರವಾಹಿಯ ಕಲಾವಿದೆ ಮೂಲತಃ ಕರಾವಳಿಯ ಗೀತಾ ಭಾರತೀ ಭಟ್ ಈ ಸಿನೆಮಾದಲ್ಲಿ ರೂಪೇಶ್ ಅವರ ಜತೆಗಿದ್ದಾರೆ. ಪಂಚಮಿ ರಾವ್, ಅರ್ಜುನ್ ಕಜೆ, ಕೀರ್ತನ್ ಭಂಡಾರಿ, ಯೋಗೀಶ್ ಎಸ್., ಸಂದೇಶ್ ನೀರುಮಾರ್ಗ, ಗುರುಕಿರಣ್ ರೈ, ಅಕ್ಷತ್ ವಿಟ್ಲ, ಗೋಕುಲ್ ಕೃಷ್ಣ ಆಚಾರ್ಯ, ಸವ್ಯರಾಜ್ ಕಲ್ಲಡ್ಕ, ಮೋಕ್ಷಿತ್ ಶೆಟ್ಟಿ, ಉತ್ಸವ್ ಗುರುಪುರ, ಸೂರಜ್ ಶೆಟ್ಟಿ, ನಿಧಿ ರೈ, ವಿನಯ್ ಶೆಟ್ಟಿಗಾರ್ ಇದ್ದಾರೆ. ಎಂ.ಕೆ. ಶಾಜನ್ ಛಾಯಾಗ್ರಹಣ, ವಿನ್ಯಾಸ್ ಅವರ ಸಂಗೀತ ಹಾಗೂ ಸುಶಾಂತ್ ಶೆಟ್ಟಿ ಸಂಕಲನ.ಅಂದಹಾಗೆ, ದಪ್ಪದ ಹುಡುಗಿಯ ಮದುವೆ ಹಾಗೂ ಅದರಿಂದ ಎದುರಾಗುವ ಸಂಗತಿಗಳೇ “ಮಂಕು ಭಾಯ್ ಫಾಕ್ಸಿ ರಾಣಿ’ಯ ಹೈಲೈಟ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ