ಮೂಡಬಿದಿರೆಯಲ್ಲಿ ಬೃಹತ್‌ ಸ್ವಚ್ಚತಾ ಅಭಿಯಾನ 


Team Udayavani, Oct 3, 2017, 12:38 PM IST

3-Mng—-8.jpg

ಮೂಡಬಿದಿರೆ: ಗಾಂಧಿ ಜಯಂತಿ ಅಂಗವಾಗಿ ಮೂಡಬಿದಿರೆಯ ವಿವಿಧೆಡೆಗಳಲ್ಲಿ ಬೃಹತ್‌ ಸ್ವಚ್ಚತಾ ಅಭಿಯಾನ ಏರ್ಪಡಿಸಲಾಗಿತ್ತು. 

ಅಲಂಗಾರ್‌ನಿಂದ ಸೈಂಟ್‌ ಥಾಮಸ್‌ ಶಾಲಾವರಣ, ಶಿರ್ತಾಡಿ ಮಾರ್ಗದಲ್ಲಿ ಮಹಮ್ಮದೀಯ ಪ್ರೌಢಶಾಲೆ, ಜೈನ್‌ ಪ.ಪೂ. ಕಾಲೇಜು, ಧವಲಾ ಕಾಲೇಜು, ಜೈನ ಪ್ರೌಢಶಾಲೆ, ಕಲ್ಲಬೆಟ್ಟು ಕಡೆಯಿಂದ ಎಕ್ಸಲೆಂಟ್‌, ಮಹಾವೀರ ಕಾಲೇಜುಗಳು, ಪ್ರಾಂತ್ಯ ಸರಕಾರಿ ಪ್ರಾ., ಪ್ರೌಢಶಾಲೆ, ಜ್ಯೋತಿನಗರದ ಬಿ. ಆರ್‌.ಪಿ. ಪ್ರೌಢಶಾಲೆ, ರೋಟರಿ ಆಂ.ಮಾ. ಶಾಲೆ, ಪ.ಪೂ.ಕಾಲೇಜು, ಹೋಲಿ ರೋಸರಿ ಪ್ರೌಢಶಾಲೆ, ಪ.ಪೂ. ಕಾಲೇಜು, ವಿದ್ಯಾಗಿರಿಯಿಂದ ಆಳ್ವಾಸ್‌ ನರ್ಸಿಂಗ್‌ ಕಾಲೇಜು ಹೀಗೆ ಹಲವು ದಿಕ್ಕುಗಳಿಂದ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್ನೆಸ್ಸೆಸ್‌, ಸ್ಕೌಟ್ಸ್‌ ಗೈಡ್ಸ್‌ ಮೊದಲಾದ ತಂಡಗಳು, ರೋಟರಿ, ಪುರಸಭೆ ಮತ್ತು ಇತರ ಸಂಘಟನೆಗಳ ಸದಸ್ಯರು ಸುಶ್ರಾವ್ಯ ಶಾಲಾ ಬ್ಯಾಂಡ್‌ ಸೆಟ್‌ ವಾದನದ ಸಂಭ್ರಮದೊಂದಿಗೆ ಅಭಿಯಾನದಲ್ಲಿ ಸಾಗಿ ಬಂದು ಹಳೆಯ ಪೊಲೀಸ್‌ ಠಾಣೆಯ ಬಳಿ ಒಗ್ಗೂಡಿದರು.

ಮೂಡಬಿದಿರೆ ಕೋ – ಆಪರೇಟಿವ್‌ ಬ್ಯಾಂಕ್‌ ಎದುರು ರೋಟರಿ ಜಿಲ್ಲಾ ಸ್ವಚ್ಚತಾ ಅಭಿಯಾನದ ಸಭಾಪತಿ ಡಾ|ಹರೀಶ್‌ ನಾಯಕ್‌, ಪುರಸಭಾ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ ಧ್ವಜ ಬೀಸಿ ಅಭಿಯಾನದ ಮುನ್ನಡೆಗೆ ಚಾಲನೆ ನೀಡಿದರು. ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರಾಜ್ಯ ಮೈದಾನದ ಬಳಿಯ ‘ಕಾಮಧೇನು ಸಭಾಂಗಣ’ದತ್ತ ಅಭಿಯಾನ ಸಾಗಿತು.

ಸಭಾಂಗಣದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಕೆ. ಅಭಯಚಂದ್ರ, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ , ಪರಿಸರ ಅಭಿಯಂತರೆ ಶಿಲ್ಪಾ, ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರಾದ ಶ್ರೀಕಾಂತ ಕಾಮತ್‌, ಬಲರಾಮ್‌ ಕೆ. ಎಸ್‌., ಕುಮಾರ್‌, ರೋಟರಿ ಎ.ಜಿ. ಎ. ಎಂ. ಕುಮಾರ್‌, ಉಮೇಶ್‌ ರಾವ್‌, ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ರೋಟರಿಯ ಪ್ರವೀಣ್‌ ಪಿರೇರಾ, ಅಜಯ್‌ ಗ್ಲೆನ್‌ ಡಿ’ ಸೋಜಾ ಪಾಲ್ಗೊಂಡಿದ್ದರು.

ಅಭಿಯಾನದ ಮುಂಚಿತವಾಗಿ ಒಂದು ಗಂಟೆ ಸ್ವಚ್ಚತಾ ಕಾರ್ಯಕ್ರಮ ನಡೆಸಿದ್ದರು. ಮೂಡಬಿದಿರೆಯ ರೋಟರಿ ಕ್ಲಬ್‌, ರೋಟರಿ ಕ್ಲಬ್‌ ಆಫ್‌ ಮೂಡಬಿದಿರೆ ಟೆಂಪಲ್‌ ಟೌನ್‌, ರೋಟರಿ ಕ್ಲಬ್‌ ಮೂಡಬಿದಿರೆ ಮಿಡ್‌ ಟೌನ್‌ , ಮೂಡಬಿದಿರೆ ಪುರಸಭೆ ವಿದ್ಯಾಸಂಸ್ಥೆಗಳು , ಸಂಘಟನೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರಗಿತು.

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.