ಮೀನುಗಾರರಿಗೆ ಹತ್ತು ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಬೃಹತ್‌ ಹೋರಾಟ: ಖಾದರ್‌

Team Udayavani, Dec 6, 2022, 5:35 AM IST

ಮೀನುಗಾರರಿಗೆ ಹತ್ತು ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಬೃಹತ್‌ ಹೋರಾಟ: ಖಾದರ್‌

ಮಂಗಳೂರು: ನಾಡದೋಣಿ ಮತ್ತು ಗಿಲ್‌ನೆಟ್‌ ಮೀನುಗಾರರಿಗೆ ಕಳೆದ ಹತ್ತು ತಿಂಗಳಿಂದ ಸರಕಾರದಿಂದ ಒಂದೇ ಒಂದು ಲೀಟರ್‌ ಸೀಮೆ ಎಣ್ಣೆ ಬಿಡುಗಡೆಯಾಗಿಲ್ಲ. ಇನ್ನು 10 ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಮೀನುಗಾರರ ಪರವಾಗಿ ಬೃಹತ್‌ ಹೋರಾಟ, ಹಕ್ಕೊತ್ತಾಯ ನಡೆಸುವುದಾಗಿ ಶಾಸಕ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್‌ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಮಂಗಳೂರಿನಿನಲ್ಲಿ ಮೀನುಗಾರ ಮುಖಂಡರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಾಡದೋಣಿ ಮತ್ತು ಗಿಲ್‌ನೆಟ್‌ ಮೀನುಗಾರರಿಗೆ ತಿಂಗಳಿಗೆ ಉಚಿತವಾಗಿ 300 ಲೀ.ಸೀಮೆ ಎಣ್ಣೆ ಉಚಿತವಾಗಿ ವಿತರಿಸಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ಬಂದ ಬಳಿಕ ಮೀನುಗಾರರಿಗೆ ಸೀಮೆ ಎಣ್ಣೆ ವಿತರಿಸುವ ವಿಚಾರವಾಗಿ ನಿರ್ಲಕ್ಷé ವಹಿಸಲಾಗುತ್ತಿದೆ ಎಂದವರು ಆರೋಪಿಸಿದರು.

ಸೀಮೆ ಎಣ್ಣೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೀನುಗಾರ ಮುಖಂಡರು ಇತ್ತೀಚೆಗೆ ಪ್ರತಿಭಟನೆಗೆ ಮುಂದಾದಾಗ ಪ್ರತಿಭಟನೆ ಮಾಡದಂತೆ ತಡೆಯಲಾಗಿತ್ತು. ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದಾಗಲೂ ಬಿಜೆಪಿ ಮುಖಂಡರು ಮೀನುಗಾರರ ಸಮಸ್ಯೆಯನ್ನು ಅವರ ಮುಂದಿಟ್ಟಿಲ್ಲ. ಪ್ರಸ್ತುತ ಸಮುದ್ರದಲ್ಲಿ ಮೀನು ಯಥೇತ್ಛವಾಗಿ ಬಲೆಗೆ ಬೀಳುತ್ತಿದ್ದು, ಸೀಮೆ ಎಣ್ಣೆ ಸಿಗದೆ, ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ಸಣ್ಣ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಒಂದು ದಿನದಲ್ಲಿ ಬಗೆಹರಿಸಬಹುದಾಗ ಸಮಸ್ಯೆಯಾದರೂ, ಸರಕಾರದಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ್‌, ಸಂತೋಷ್‌ ಶೆಟ್ಟಿ, ಮುಹಮ್ಮದ್‌ ಮೋನು, ಶುಭೋದಯ ಆಳ್ವ, ಟ್ರಾಲ್‌ಬೋಟ್‌ ಮೀನುಗಾರರ ಸಂಘಟನೆ ಅಧ್ಯಕ್ಷ ಚೇತನ್‌ ಬೆಂಗ್ರೆ, ಸತೀಶ್‌ ಕೋಟ್ಯಾನ್‌ ಮತ್ತಿತರರು ಇದ್ದರು.

ಮೀನುಗಾರರಿಗೆ ಮನೆ ಕಟ್ಟಲು ನೀಡುವ ಅನುದಾನವನ್ನೂ ಸರಕಾರ ನಿಲ್ಲಿಸಿದೆ. ಇಲ್ಲಿಯ ವರೆಗೆ ಒಂದೇ ಒಂದು ಮನೆಯನ್ನೂ ಕಟ್ಟಿ ಕೊಟ್ಟಿಲ್ಲ. ಇತ್ತೀಚೆಗೆ ಬಿಡುಗಡೆ ಮಾಡಿದ ಮನೆ ಫ‌ಲಾನುಭವಿಗಳ ಪಟ್ಟಿಯಲ್ಲಿ ಸಮುದ್ರವೇ ಇಲ್ಲದ ಸುಳ್ಯಕ್ಕೆ 60, ಬಂಟ್ವಾಳಕ್ಕೆ 50, ಮಂಗಳೂರು ದಕ್ಷಿಣಕ್ಕೆ 25 ಮನೆ ಹಂಚಿಕೆ ಮಾಡಲಾಗಿದೆ. ಆದರೆ ಮೀನುಗಾರರು ಹೆಚ್ಚಿರುವ ಉಳ್ಳಾಲ ಕ್ಷೇತ್ರಕ್ಕೆ ಕೇವಲ 10 ಮನೆ ಹಂಚಿಕೆ ಮಾಡಲಾಗಿದೆ.
-ಯು.ಟಿ.ಖಾದರ್‌
ಶಾಸಕ

ಟಾಪ್ ನ್ಯೂಸ್

ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ

ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

TDY-1

ಚೀನಾದ ಗೂಢಚಾರಿಕೆ ಬಲೂನ್‌ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

baby 2

ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್‌!

1 SUNDAY

ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್‌ವೇ ಕಾಮಗಾರಿ

ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್‌ವೇ ಕಾಮಗಾರಿ

ಉಳ್ಳಾಲ: ಆರೋಗ್ಯ ಕೇಂದ್ರ ಹರೇಕಳ ಗ್ರಾ. ಪಂ.ಗೆ ಹಸ್ತಾಂತರ

ಉಳ್ಳಾಲ: ಆರೋಗ್ಯ ಕೇಂದ್ರ ಹರೇಕಳ ಗ್ರಾ. ಪಂ.ಗೆ ಹಸ್ತಾಂತರ

ಜೋಕಟ್ಟೆ, ಪಡೀಲ್‌ ಕಾಮಗಾರಿ : ಹಲವು ರೈಲು ಸೇವೆ ತಾತ್ಕಾಲಿಕ ರದ್ದು

ಜೋಕಟ್ಟೆ, ಪಡೀಲ್‌ ಕಾಮಗಾರಿ : ಹಲವು ರೈಲು ಸೇವೆ ತಾತ್ಕಾಲಿಕ ರದ್ದು

“ಸಾಮಾಜಿಕ ಜಾಲತಾಣ ನಿಗಾ ಘಟಕ’ ಬಲವರ್ಧನೆ : ಎಸ್‌ಪಿ ಡಾ| ವಿಕ್ರಂ ಅಮಟೆ

“ಸಾಮಾಜಿಕ ಜಾಲತಾಣ ನಿಗಾ ಘಟಕ’ ಬಲವರ್ಧನೆ : ಎಸ್‌ಪಿ ಡಾ| ವಿಕ್ರಂ ಅಮಟೆ

MUST WATCH

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಹೊಸ ಸೇರ್ಪಡೆ

ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ

ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

TDY-1

ಚೀನಾದ ಗೂಢಚಾರಿಕೆ ಬಲೂನ್‌ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

baby 2

ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.