ಉಳ್ಳಾಲ : ಬಿಲ್‌ ಪರಿಶೀಲನೆಗೆ ತೆರಳಿದ ಮೆಸ್ಕಾಂ ಸಿಬಂದಿಗೆ ನಿಂದಿಸಿ ಹಲ್ಲೆ

Team Udayavani, Jan 28, 2020, 11:40 PM IST

ಉಳ್ಳಾಲ: ವಿದ್ಯುತ್‌ ಬಿಲ್‌ ಪಾವತಿಸಿರದ ಮನೆಯೊಂದಕ್ಕೆ ಬಿಲ್‌ ಪರಿಶೀಲನೆಗೆಂದು ತೆರಳಿದ ಮೆಸ್ಕಾಂ ಸಿಬಂದಿಗೆ ಮನೆಯ ಯಜಮಾನ ಕಾಂಗ್ರೆಸ್‌ ಮುಖಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ದೇರಳಕಟ್ಟೆ ಜಲಾಲ ಭಾಗ್‌ ಬಳಿ ಮಂಗಳವಾರ ನಡೆದಿದೆ.

ಕೋಟೆಕಾರು ಲೈನ್‌ಮನ್‌ ಮಧು ನಾಯಕ್‌ ಹಲ್ಲೆಗೊಳಗಾದ ಸಿಬಂದಿ, ಪಾವತಿಸದ ಕಾರಣಕ್ಕೆ ಮೆಸ್ಕಾಂ ಸೂಚನೆಯ ಮೇರೆಗೆ ಲೈನ್‌ಮನ್‌ ಮಧು ಸಹ ಸಿಬಂದಿಯೊಂದಿಗೆ ಮನೆಗೆ ತೆರಳಿ ಮೀಟರ್‌ ಪರಿಶೀಲಿಸಿ ಬಿಲ್‌ ಪಾವತಿಸಲು ಸೂಚಿಸದರು ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಧು ಅವರನ್ನು ತರಾಟೆಗೆ ತೆಗೆದುಕೊಂಡ ಅಮೀರ್‌ ಹುಸೈನ್‌ ತುಂಬೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಆ ಬಗ್ಗೆ ಮಧು ನಾಯಕ್‌ ಅವರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಸೆಕ್ಷನ್‌ 353ರಡಿ ಪ್ರಕರಣ ದಾಖಲಾಗಿದೆ.

ಅಮೀರ್‌ ಹುಸೈನ್‌ ತುಂಬೆ ಕಾಂಗ್ರೆಸ್‌ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷನಾಗಿದ್ದರು. ಘಟನೆ ಖಂಡಿಸಿ ಮೆಸ್ಕಾಂ ಸಿಬಂದಿ ಉಳ್ಳಾಲ ಠಾಣೆಗೆ ಆಗಮಿಸಿ ತಪ್ಪಿತಸ್ಥನ ವಿರುದ್ಧ ಕಠಿನ ಕ್ರಮಕ್ಕೆ ಆಗ್ರಹಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ