ಮೈಟ್‌: ಶಿಕ್ಷಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

Team Udayavani, May 16, 2019, 6:00 AM IST

ಮಂಗಳೂರು: ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಕ್ಕೆ ಪ್ರವೇಶಿಸುವಾಗ ಕೊಡಲಾಗುವ ವಿಶೇಷ ಪ್ರವೇಶಾತಿ ಕಾರ್ಯಕ್ರಮದ ಬಗ್ಗೆ ಶಿಕ್ಷಕರಿಗೆ ಮೇ 14ರಿಂದ ಮೇ 16ರ ವರೆಗೆ “ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ’ವನ್ನು ಮೂಡಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಮಂಗಳವಾರ ಉದ್ಘಾಟಿಸಲಾಯಿತು.

ದಿಲ್ಲಿಯ ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಶನ್‌ (ಎಐಸಿಟಿಇ) ಪ್ರಾಯೋಜಿಸಿದ ಈ ಕಾರ್ಯಾ ಗಾರವನ್ನು ಎಐಸಿಟಿಇ ಬೆಂಗಳೂರು ದಕ್ಷಿಣ ಪ್ರಾದೇಶಿಕ ಕಚೇರಿ ಸಹಾಯ ನಿರ್ದೇಶಕ ರಮೇಶ್‌ ಎನ್‌. ಉದ್ಘಾಟಿಸಿದರು. ಎಂಜಿನಿಯರಿಂಗ್‌ ಕೋರ್ಸ್‌ನಲ್ಲಿ ಮೂರು ವಾರಗಳ ವಿದ್ಯಾರ್ಥಿ ಪ್ರವೇಶಾತಿ ತರಬೇತಿ ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆ ಅವರು ತಿಳಿಸಿದರು. ವಿದ್ಯಾರ್ಥಿಗಳ ಜೀವನ ಕೌಶಲವನ್ನು ಹೆಚ್ಚಿಸಲು ಮತ್ತು ಅವರ ಮಹತ್ವಾಕಾಂಕ್ಷೆಗೆ ಸಮಗ್ರ ದೃಷ್ಟಿಕೋನವನ್ನು ಪಡೆಯಲು ಈ ಕಾರ್ಯಕ್ರಮ ಸಹಕಾರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಟ್‌ ಅಧ್ಯಕ್ಷ ರಾಜೇಶ್‌ ಚೌಟ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಹೊಸ ಪರಿಸರದ ಪರಿಚಯ, ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆ, ವಿವಿಧ ವೃತ್ತಿಪರ ಶಿಷ್ಟಾಚಾರಗಳ ಮಾಹಿತಿ ಲಭಿಸುತ್ತದೆ ಎಂದರು.

ಎಐಸಿಟಿಇ ರಾಜ್ಯ ಅಕಾಡೆಮಿ ಕೋ- ಆರ್ಡಿನೇಟರ್‌ ವಂದನಾ ಸಿಂಘಾಲ್‌, ವಿಟಿಯು ಕೋ-ಆರ್ಡಿನೇಟರ್‌ ಪ್ರೊ| ಚಿಕಣ್ಣ, ಎಐಸಿಟಿಇ ದಯಾಲ್‌ ಭಾಗವಹಿಸಿದ್ದರು. ಉದ್ಧವ್‌ ಕುಮಾರ್‌ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಮೈಟ್‌ ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಲ್‌. ಈಶ್ವರ ಪ್ರಸಾದ್‌ ಸ್ವಾಗತಿಸಿದರು. ಡಾ| ಆಶಾ ಕ್ರಾಸ್ತಾ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

 • ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ಕರಾವಳಿ ಮಾತ್ರವಲ್ಲ ಇಡೀ ರಾಷ್ಟ್ರ...

 • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌...

 • ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರಂತರ 3ನೇ ಬಾರಿಗೆ ಗೆಲುವು ಸಾಧಿಸಿರುವ ನಳಿನ್‌ ಕುಮಾರ್‌ ಕಟೀಲು ಅವರಿಗೆ ಈ ಬಾರಿಯ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ...

 • ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌...

 • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದರೂ ಯಶಸ್ಸು ಕಾಣದಿರಲು ಕಾರಣಗಳೇನು...

ಹೊಸ ಸೇರ್ಪಡೆ

 • ಬ್ರಾಂಡ್‌ ಮೋದಿ..: ಮೋದಿ ಹೆಸರಲ್ಲಿ ದೇಶದಲ್ಲಿ ಏನು ಬೇಕಾದರೂ ಓಡುತ್ತದೆ ಎಂಬುದಕ್ಕೆ ಈ ಚುನಾವಣೆ ಮತ್ತೊಂದು ಉದಾಹರಣೆ. 2014ಕ್ಕಿಂತಲೂ ಈ ಬಾರಿ ದೇಶದ ಮತದಾರ ಹೆಚ್ಚಿನ...

 • ಭಾರತದ ರಾಜಕೀಯ ರಂಗದಲ್ಲಿ ಹೊಸ ಆಶಾಭಾವ ಮೂಡಿಸುವ ಮೂಲಕ 2013ರಲ್ಲಿ ಅಸ್ತಿತ್ವಕ್ಕೆ ಬಂದ ಆಮ್‌ ಆದ್ಮಿ ಪಕ್ಷ (ಎಎಪಿ), ಈ ಬಾರಿ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. 2013ರಲ್ಲಿ...

 • ಪ್ರಧಾನಿ ನರೇಂದ್ರ ಮೋದಿ ಭಾರತದ ಜನಮೆಚ್ಚಿದ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ವೈಯಕ್ತಿಕ ವರ್ಚಸ್ಸು ಹಾಗೂ ಜನಪ್ರಿಯತೆಯನ್ನು ರಾಜಕೀಯ ಜಯಭೇರಿಯಾಗಿ...

 • ಲೋಕಸಭೆ ಚುನಾವಣೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಕೆಲವು ಕಡೆ ಅನಿರೀಕ್ಷಿತ ಹಾಗೂ ಆಘಾತಕಾರಿ ಫ‌ಲಿತಾಂಶ ನೀಡಿದ್ದು, ರಾಜಕೀಯವಾಗಿ ಎಚ್ಚರಿಕೆ ಸಂದೇಶ ನೀಡಿದೆ....

 • ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು, ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ಗೆ...

 • ಚಾಮರಾಜನಗರ: ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಂಸದ ಆರ್‌.ಧ್ರುವನಾರಾಯಣ ಅವರು ಅಭಿವೃದ್ಧಿ ಕೆಲಸಗಳಲ್ಲಿ ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಂಸದ ಎಂಬ ಹೆಗ್ಗಳಿಕೆ...