ಕಂಬಳಪದವು: ಮಿನಿ ಅಂಬೇಡ್ಕರ್ ಭವನಕ್ಕೆ ದುಷ್ಕರ್ಮಿಗಳಿಂದ ಕಲ್ಲೆಸೆತ
Team Udayavani, Jul 31, 2017, 8:20 AM IST
ಉಳ್ಳಾಲ: ಪಾವೂರು ಗ್ರಾಮದ ಕಂಬಳ ಪದವು ಸರಕಾರಿ ಪ್ರೌಢಶಾಲೆ ಸಮೀಪದ ಮಿನಿ ಅಂಬೇಡ್ಕರ್ ಭವನಕ್ಕೆ ಕಿಡಿಗೇಡಿಗಳು ಕಲ್ಲೆಸೆದು ಹಾನಿ ಮಾಡಿದ್ದಾರೆ.
ಈ ವ್ಯಾಪ್ತಿಯಲ್ಲಿ ಗಾಂಜಾ ಸೇರಿದಂತೆ ಶಾಂತಿ ಕದಡುವ ಯತ್ನ ಕಿಡಿಗೇಡಿಗಳು ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ತಾತ್ಕಾಲಿಕ ಬಸ್ ತಂಗುದಾಣವನ್ನು ಹಾನಿ ಮಾಡಿದ್ದರು. ಬಿಯರ್ ಬಾಟಲಿಗಳನ್ನು ರಸ್ತೆಯುದ್ದಕ್ಕೂ ಒಡೆದು ಹಾಕಿದ್ದರು. ಬಂಟ್ವಾಳ ಗಲಭೆ ಸಂದರ್ಭದಲ್ಲಿ ಬಸ್‌ಗಳಿಗೆ ಹಾನಿ ಮಾಡಿದ್ದ ಕಿಡಿಗೇಡಿಗಳು ಈವರೆಗೆ ದಾಂಧಲೆ ನಡೆಸಿದ ಆರೋಪಿಗಳು ಪತ್ತೆಯಾಗಿಲ್ಲ. ಇದೀಗ ಅಂಬೇಡ್ಕರ್ ಭವನದ ಗಾಜುಗಳನ್ನು ಪುಡಿಗೈದಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.