ಮೀನು ಬೇಟೆಗೆ ಕನಿಷ್ಠ ಗಾತ್ರದ ನಿರ್ಬಂಧ

ಸಣ್ಣ ಗಾತ್ರದ 19 ಜಾತಿಯ ಮೀನುಗಳನ್ನು ಇನ್ನು ಹಿಡಿಯುವಂತಿಲ್ಲ !

Team Udayavani, Jul 30, 2019, 6:00 AM IST

495155092907MLR8-DAKKE

ಮಂಗಳೂರು: ಮಳೆಗಾಲದ 60 ದಿನಗಳ ಸುದೀರ್ಘ‌ ರಜೆ ಮುಗಿದು ಆ. 1ರಿಂದ ಕಡಲಿಗಿಳಿಯಲು ಮೀನುಗಾರಿಕೆ ದೋಣಿಗಳು ಸಿದ್ಧತೆ ನಡೆಸಿವೆ. ಆದರೆ ಮೀನುಗಳ ಸಂರಕ್ಷಣೆ ಮತ್ತು ಭವಿಷ್ಯದ ದೃಷ್ಟಿಯಿಂದ ಈ ಬಾರಿ 19 ಜಾತಿಯ ಮೀನುಗಳಿಗೆ ಮೀನುಗಾರಿಕೆ ನಡೆಸಬಹುದಾದ ಕನಿಷ್ಠ ಗಾತ್ರವನ್ನು ಮೀನುಗಾರಿಕೆ ಇಲಾಖೆ ನಿರ್ದೇಶಿಸಿದೆ. ಕೊಚ್ಚಿಯ ಕಡಲ ಮೀನು ಸಂಶೋಧನ ಸಂಸ್ಥೆ (ಸಿಎಂಎಫ್‌ಆರ್‌ಐ)ಯ ಶಿಫಾರಸಿನಂತೆ ಈ ನಿರ್ದೇಶನ ನೀಡಲಾಗಿದೆ.

ಪ್ರತಿ ಮೀನು ಪ್ರಭೇದಕ್ಕೆ ವಂಶಾಭಿವೃದ್ಧಿ ಅವಕಾಶ ದೊರೆತಾಗ ಮಾತ್ರ ಮೀನುಗಾರಿಕೆ ಸುಸ್ಥಿರ ಮತ್ತು ಸಮೃದ್ಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ಮೀನು ತಳಿಗಳಿಗೆ ಹಿಡಿಯಬಹುದಾದ ಕನಿಷ್ಠ ಗಾತ್ರ ವನ್ನು ನಿರ್ಧರಿಸಿ ಸಿಎಂಎಫ್‌ಆರ್‌ಐ ವಿಜ್ಞಾನಿಗಳು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಬೇರೆ ಬೇರೆ ಮೀನು ಹಿಡಿಯಲು ಬೇರೆ ಬೇರೆ ಗಾತ್ರದ ಕಣ್ಣಿನ ಬಲೆಗಳನ್ನು ಉಪಯೋಗಿಸುತ್ತಾರೆ. ಟ್ರಾಲ್‌ ಬಲೆ 35 ಎಂ.ಎಂ., ಪಸೀìನ್‌ ಬಲೆ 45 ಎಂ.ಎಂ. ಗಾತ್ರದ ಕಣ್ಣುಗಳನ್ನು ಹೊಂದಿರುತ್ತದೆ.

ಈ ಬಗ್ಗೆ ಮೀನುಗಾರ ಮುಖಂಡ ವಾಸುದೇವ ಬೋಳೂರು, ನಿತಿನ್‌ ಕುಮಾರ್‌ “ಉದಯವಾಣಿ’ ಜತೆಗೆ ಮಾತನಾಡಿ, ಮೀನುಗಾರಿಕೆಯ ಭವಿಷ್ಯದ ದೃಷ್ಟಿಯಿಂದ ಕಡಿಮೆ ಗಾತ್ರದ ಮೀನುಗಳನ್ನು ಹಿಡಿಯ ಬಾರದೆಂಬ ಕಾನೂನು ಹಲವು ದೇಶಗಳಲ್ಲಿ ಇದೆ. ನಮ್ಮಲ್ಲೂ ಜಾರಿಯಾಗಬೇಕು. ಆದರೆ ಇದರ ಅನು ಷ್ಠಾನಕ್ಕೆ ಇನ್ನಷ್ಟು ಅವಕಾಶ ನೀಡಬೇಕು ಎಂದಿದ್ದಾರೆ.

61 ದಿನಗಳ ನಿಷೇಧ ಮುಕ್ತಾಯ
ಪಶ್ಚಿಮ ಕರಾವಳಿಯಲ್ಲಿ 2015ಕ್ಕಿಂತ ಹಿಂದೆ 57 ದಿನ (ಜೂ. 15ರಿಂದ ಆ. 10) ಮೀನುಗಾರಿಕೆ ನಿಷೇಧವಿತ್ತು. ಆದರೆ ಮತ್ಸ Âಕ್ಷಾಮ ನೀಗಿಸುವ ಉದ್ದೇಶದಿಂದ 2015ರಲ್ಲಿ ಕೇಂದ್ರ ಸರಕಾರ ಪಶ್ಚಿಮ ಕರಾವಳಿಗೆ ಏಕರೂಪದಲ್ಲಿ 61 ದಿನ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ.

ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳಗಳಲ್ಲಿ ಒಂದೇ ಅವಧಿಯ ಮೀನುಗಾರಿಕೆ ನಿಷೇಧವಿದೆ. ಮೀನುಗಳಲ್ಲಿ ಸಂತಾನೋತ್ಪತ್ತಿ ಅವಧಿ ಮಳೆಗಾಲ. ಈ ವೇಳೆ ಯಾಂತ್ರಿಕ ದೋಣಿಗಳು ನೀರಿಗಿಳಿದರೆ ಅವುಗಳ ಸಂತಾನೋತ್ಪತ್ತಿಗೆ ತೊಂದರೆ, ವಿಪರೀತ ಗಾಳಿ-ಮಳೆಯಿಂದ ಮೀನುಗಾರರಿಗೂ ಸಮಸ್ಯೆ ಎಂಬ ಕಾರಣದಿಂದ ಮೀನುಗಾರಿಕೆ ನಿಷೇಧ ಜಾರಿಯಲ್ಲಿದೆ.

ಈ ಕನಿಷ್ಠ ಗಾತ್ರಕ್ಕಿಂತ ಚಿಕ್ಕ ಮೀನುಗಳನ್ನು ಹಿಡಿಯುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ. ಆದರೂ ಶೇ. 10ರಷ್ಟು ಪ್ರಮಾಣದಲ್ಲಿ ನಿಗದಿತ ಗಾತ್ರಕ್ಕಿಂತ ಚಿಕ್ಕ ಮೀನುಗಳನ್ನು ಹಿಡಿದರೆ ವಿನಾಯಿತಿ ಇದೆ ಎಂದು ರಾಜ್ಯ ಮೀನುಗಾರಿಕಾ ಇಲಾಖೆ ತಿಳಿಸಿದೆ.

2018 ಎಪ್ರಿಲ್‌ನಿಂದ 2019ರ ಮಾರ್ಚ್‌ವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು ಸುಮಾರು 3,166 ಕೋ.ರೂ. ಮೌಲ್ಯದ 2,77,747 ಟನ್‌ ಮೀನು ಹಿಡಿಯಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಉಭಯ ಜಿಲ್ಲೆಗಳಲ್ಲಿ ಮೀನಿನ ಪ್ರಮಾಣ ಮತ್ತು ಮೌಲ್ಯದಲ್ಲಿ ಕುಸಿತವಾಗಿತ್ತು. ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 8,456 ಮೋಟರೀಕೃತ ನಾಡದೋಣಿ, 447 ಯಾಂತ್ರೀಕೃತ ದೋಣಿ ಮತ್ತು 8,999 ನಾಡದೋಣಿ ಕಾರ್ಯಾಚರಿಸುತ್ತಿವೆ.

ತಪ್ಪಿದರೆ ಕಾನೂನು ಕ್ರಮ
ಆ. 1ರಿಂದ ಕರಾವಳಿಯಲ್ಲಿ ಮೀನುಗಾರಿಕೆ ಋತು ಆರಂಭಗೊಳ್ಳಲಿದ್ದು, ಮೀನು ಸಂತತಿಯನ್ನು ಭವಿಷ್ಯದ ದಿನಗಳಿಗೂ ಕಾಪಾ ಡುವ ಉದ್ದೇಶದಿಂದ ಕನಿಷ್ಠ ಗಾತ್ರಕ್ಕಿಂತ ಚಿಕ್ಕದಾದ ಮೀನುಗಳನ್ನು ಹಿಡಿಯುವುದನ್ನು ನಿಯಂತ್ರಿಸಲು ಸರಕಾರ ಉದ್ದೇಶಿಸಿದೆ. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಡಿ. ತಿಪ್ಪೇಸ್ವಾಮಿ, ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು

-  ದಿನೇಶ್‌ ಇರಾ

ಟಾಪ್ ನ್ಯೂಸ್

ರಾಜ್ಯದಲ್ಲಿ 98 ಮಂದಿಗೆ ಕೋವಿಡ್‌ ಸೋಂಕು ದೃಢ

ರಾಜ್ಯದಲ್ಲಿ 98 ಮಂದಿಗೆ ಕೋವಿಡ್‌ ಸೋಂಕು ದೃಢ

1-sadd

ಸಿಎಂ ಭೇಟಿಯಾದ ಬೆಂಗಳೂರು ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ರೈಲ್ವೆ ಟಿಕೆಟ್‌ಗಳಲ್ಲಿ ವೃದ್ಧರಿಗೆ ರಿಯಾಯಿತಿ ರದ್ದು: 1,500 ಕೋಟಿ ಆದಾಯ

ರೈಲ್ವೆ ಟಿಕೆಟ್‌ಗಳಲ್ಲಿ ವೃದ್ಧರಿಗೆ ರಿಯಾಯಿತಿ ರದ್ದು: 1,500 ಕೋಟಿ ಆದಾಯ

1-sssdsad

ಗುಂಡ್ಲುಪೇಟೆ: ಯುವಕನ ಎದೆಗೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ

5 ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಕರಾವಳಿಯಲ್ಲಿ ರೆಡ್‌ ಅಲರ್ಟ್‌

5 ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಕರಾವಳಿಯಲ್ಲಿ ರೆಡ್‌ ಅಲರ್ಟ್‌

ಜಾಲಿರೈಡ್‌ ವೇಳೆ ರಸ್ತೆ ಅಪಘಾತ: ಅಪ್ರಾಪ್ತ ಚಾಲಕ ಸಾವು

ಜಾಲಿರೈಡ್‌ ವೇಳೆ ರಸ್ತೆ ಅಪಘಾತ: ಅಪ್ರಾಪ್ತ ಚಾಲಕ ಸಾವು

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಟ್ಲ : ಭಾರೀ ಮಳೆಯಿಂದ ಕೃತಕ ನೆರೆ : ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ

ವಿಟ್ಲ : ಭಾರೀ ಮಳೆಗೆ ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ, ಜನರ ಆಕ್ರೋಶ

dogs

ಬೀದಿನಾಯಿ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಚಿಕಿತ್ಸೆ

apmc

ಎಪಿಎಂಸಿ ಚುನಾವಣೆಗೆ ಜಿಲ್ಲಾದ್ಯಂತ ಭಾರೀ ಸಿದ್ಧತೆ

distilled-water

ಪಚ್ಚನಾಡಿ ಶುದ್ಧೀಕರಿಸಿದ ತ್ಯಾಜ್ಯ ನೀರು ಹರಿಸಲು ಪ್ರತ್ಯೇಕ ಪೈಪ್‌ಲೈನ್‌

bus

ಉಪಯೋಗಕ್ಕೆ ಇಲ್ಲದ ಬಸ್‌ ತಂಗುದಾಣಗಳು

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

1-sadd

ಸಿಎಂ ಭೇಟಿಯಾದ ಬೆಂಗಳೂರು ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ರಾಜ್ಯದಲ್ಲಿ 98 ಮಂದಿಗೆ ಕೋವಿಡ್‌ ಸೋಂಕು ದೃಢ

ರಾಜ್ಯದಲ್ಲಿ 98 ಮಂದಿಗೆ ಕೋವಿಡ್‌ ಸೋಂಕು ದೃಢ

ರೈಲ್ವೆ ಟಿಕೆಟ್‌ಗಳಲ್ಲಿ ವೃದ್ಧರಿಗೆ ರಿಯಾಯಿತಿ ರದ್ದು: 1,500 ಕೋಟಿ ಆದಾಯ

ರೈಲ್ವೆ ಟಿಕೆಟ್‌ಗಳಲ್ಲಿ ವೃದ್ಧರಿಗೆ ರಿಯಾಯಿತಿ ರದ್ದು: 1,500 ಕೋಟಿ ಆದಾಯ

1-sssdsad

ಗುಂಡ್ಲುಪೇಟೆ: ಯುವಕನ ಎದೆಗೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ

5 ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಕರಾವಳಿಯಲ್ಲಿ ರೆಡ್‌ ಅಲರ್ಟ್‌

5 ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಕರಾವಳಿಯಲ್ಲಿ ರೆಡ್‌ ಅಲರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.