ಬಸ್ ಚಾಲಕನ ಕಿಸೆಯಲ್ಲೇ ಸ್ಪೋಟಗೊಂಡ ಮೊಬೈಲ್… !
Team Udayavani, Mar 14, 2017, 11:09 AM IST
ಉಪ್ಪಿನಂಗಡಿ: ಆ ಚಾಲಕನ ಗಮನವೆಲ್ಲಾ ಬಸ್ ಚಲಾಯಿಸುವ ಕಡೆಗೇ ಇತ್ತು. ಹೇಳಿಕೇಳಿ ಅದು ಗ್ರಾಮೀಣ ಭಾಗದ ಕಿರಿದಾದ ರಸ್ತೆ. ಎದುರುಗಡೆಯಿಂದ ಬರುವ ವಾಹನಗಳನ್ನು ಗಮನಿಸುತ್ತಾ, ಬೆಳಗ್ಗಿನ ಸಮಯವಾಗಿದ್ದರಿಂದ ಪ್ರಯಾಣಿಕರಿಂದ ತುಂಬಿದ್ದ ಬಸ್ಸನ್ನು ಜಾಗರೂಕತೆಯಿಂದ ಚಲಾಯಿಸುತ್ತಿದ್ದ ಚಾಲಕನಿಗೆ ಇದ್ದಕ್ಕಿದ್ದಂತೆ ತನ್ನ ಶರ್ಟ್ ಕಿಸೆಯಲ್ಲಿದ್ದ ಮೊಬೈಲ್ ಫೋನ್ ನ್ಪೋಟಗೊಂಡಿದ್ದನ್ನು ಕಂಡು ಗಾಬರಿಯಾಯ್ತು. ಚಾಲಕ ಮಾತ್ರವಲ್ಲದೇ ಅವರ ಪಕ್ಕದಲ್ಲಿದ್ದ ಪ್ರಯಾಣಿಕರೂ ಒಮ್ಮೆ ಕಕ್ಕಾಬಿಕ್ಕಿಯಾದ್ರು. ಏನಾಯ್ತು ಅಂತ ಯೋಚಿಸುವಷ್ಟರಲ್ಲಿ ಈ ಘಟನೆ ನಡೆದು ಹೋಗಿತ್ತು.
ಮಡಂತ್ಯಾರಿನಿಂದ ಉಪ್ಪಿನಂಗಡಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ ಒಂದರಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಇಂಟೆಕ್ಸ್ ಕಂಪೆನಿಗೆ ಸೇರಿದ ಈ ಮೊಬೈಲ್ ನ್ಪೋಟಗೊಂಡಿದ್ದರಿಂದ ಒಂದು ಕ್ಷಣ ಆ ಬಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಚಾಲಕನ ಸಮಯಾವಧಾನತೆಯಿಂದ ಸಂಭಾವ್ಯ ಭಾರೀ ಅಪಾಯವೊಂದು ತಪ್ಪಿದರೂ, ಚಾಲಕ ಸಂದೇಶ್ ಬಂದಾರು ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಮಾತ್ರವಲ್ಲದೆ ಅವರ ಶರ್ಟ್ ಭಾಗಶಃ ಸುಟ್ಟು ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ