ಗಾಣಿಗರ ‘ಆಟಿಡ್‌ ಕೆಸರ್ಡೊಂಜಿ ದಿನ’ದ ಗಮ್ಮತ್ತು

Team Udayavani, Aug 6, 2018, 12:52 PM IST

6-agust-9.jpg

ಮೂಡಬಿದಿರೆ : ಕರಿಂಜೆಯ ಗುರುಬೆಟ್ಟು ರವಿ ಅವರ ಕೆಸರಿನ ಗದ್ದೆಯಲ್ಲಿ ರವಿವಾರ ಮೂಡಬಿದಿರೆಯ ಸಪಲಿಗರ ಯಾನೆ ಗಾಣಿಗರ ಸಂಘ, ಗಾಣಿಗರ ಯುವ ವೇದಿಕೆ ಮತ್ತು ಮಹಿಳಾ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ 8ನೇ ವರ್ಷದ ‘ಆಟಿಡ್‌ ಕೆಸರ್ಡೊಂಜಿ  ದಿನ’ದ ಗಮ್ಮತ್ತು ನಡೆಯಿತು.

ಪುಟಾಣಿಗಳಿಂದ ತೊಡಗಿ ಯುವ ಜನರು, ಪುರುಷರು, ಮಹಿಳೆಯರೆನ್ನದೆ ವಿವಿಧ ವಯೋಮಾನದವರು ತಮ್ಮ ವಯಸ್ಸಿನ ಮಿತಿಗಳನ್ನು ಮರೆತು ಖುಷಿಯಿಂದ ಕೆಸರಿನ ಗದ್ದೆಯಲ್ಲಿ ವಿವಿಧ ಅಟೋಟಗಳಲ್ಲಿ ಪಾಲ್ಗೊಂಡು ಕೆಸರಲ್ಲಿ ಮಿಂದೆದ್ದು ಕುಣಿದಾಡಿದರು. ಮುಂಜಾನೆ ತುಳು ಸಂಸ್ಕೃತಿ ಸಂಬಂಧಿತ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಪ್ರತಾಪ್‌ ಬೆಟ್ಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂಡಬಿದಿರೆ ಪೊಲೀಸ್‌ ಉಪನಿರೀಕ್ಷಕ (ಕ್ರೈಂ ವಿಭಾಗ) ಶಂಕರ ನಾೖರಿ ಉದ್ಘಾಟಿಸಿದರು. ಗಾಣಿಗರ ಯುವ ಒಕ್ಕೂಟದ ಅಧ್ಯಕ್ಷ ಪ್ರಶಾಂತ್‌ ಬಾರಾಡಿ ಓಟದ ಕೋಣ ಓಡಿಸುವ ಮೂಲಕ ಕೆಸರಿನ ಗದ್ದೆಯ ಕ್ರೀಡಾಕೂಟಗಳಿಗೆ ಚಾಲನೆ ನೀಡಿದರು.

ವಲಯ ರೈತ ಸಂಘದ ಅಧ್ಯಕ್ಷ ಹಂಡೇಲುಗುತ್ತು ಎಚ್‌. ಧನಕೀರ್ತಿ ಅವರು ತುಳು ನಾಡಿನ ಪರಂಪರೆ, ಸಂಪ್ರದಾಯಗಳು, ಆಟಿ ತಿಂಗಳ ಕಷ್ಟ, ಅಳಿಯ ಕಟ್ಟು ಮೊದಲಾದ ವಿಚಾರಗಳಲ್ಲಿ ಸವಿವರ ಮಾಹಿತಿ ನೀಡಿದರು. ಉದ್ಯಮಿ ನವೀನ್‌ ಸುವರ್ಣ, ಕರಿಂಜೆ ಕುಕ್ಕಟ್ಟೆಗುತ್ತು ಯಶವಂತ ಶೆಟ್ಟಿ ಶುಭಾಶಂಸನೆಗೈದರು.

ಸಂಘದ ಗೌರವಾಧ್ಯಕ್ಷ ಸದಾಶಿವ ಬಂಗೇರ, ಕೇಶವ ಪೊಳಲಿ, ಕಾರ್ಯದರ್ಶಿ ರಾಜೇಶ್‌ ಬಂಗೇರ, ಕ್ರೀಡಾ ಕಾರ್ಯದರ್ಶಿ ಲತೀಶ್‌ ಕರ್ಕೇರಾ, ಮಹಿಳಾ ವೇದಿಕೆಯ ಅಧ್ಯಕ್ಷೆ ಸಂಧ್ಯಾ ಸಂದೀಪ್‌, ಪ್ರಾಯೋಜಕರಾದ ಮುರಳೀ ದಾಸ್‌ ಕಾವೂರು, ಗಾಣಿಗೆರ್ನ ಜವನೆರ್‌ ಬಾರಾಡಿಯ ಸದಸ್ಯರು ಉಪಸ್ಥಿತರಿದ್ದರು. ಆಟಿಯ ತಿನಿಸುಗಳ ವೈವಿಧ್ಯದೊಂದಿಗೆ ಊಟೋಪಚಾರ ನಡೆಯಿತು.

ಸಂಜೆ ನಡೆದ ಸಮಾರೋಪದಲ್ಲಿ ಜೀವನ್‌ ಬಂಗೇರ, ರವೀಂದ್ರ ಕೈಕಂಬ, ಸೇಸಪ್ಪ ಸಾಲ್ಯಾನ್‌ ಮಂಜೇಶ್ವರ ಬಹುಮಾನ ವಿತರಿಸಿದರು. ತಿನಿಸುಗಳನ್ನು ತಯಾರಿಸಿಕೊಂಡು ಪಾಲ್ಗೊಂಡವರಿಗೆ ಸ್ಮರಣಿಕೆ ನೀಡಲಾಯಿತು. ಉಪಾಧ್ಯಕ್ಷ ಜಗನ್ನಾಥ ಸಪಲಿಗ, ಸಹಕಾರ್ಯದರ್ಶಿ ಕೇಶವ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಗಳು
ಕೆಸರುಗದ್ದೆಯ ಅಂಕಣದಲ್ಲೇ ವಾಲಿಬಾಲ್‌, ತ್ರೋಬಾಲ್‌, ನಿಧಿ ಶೋಧ, ಹಗ್ಗ ಜಗ್ಗಾಟ, ಮಕ್ಕಳಿಗೆ ರಿಲೇ ಮತ್ತು ಇತರ ಓಟ, ಆಟಗಳು ನಡೆಯಿತು. ವಿಶೇಷ ಆಕರ್ಷಣೆಯಾಗಿ ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಅಡಿಕೆ ಹಾಳೆಯಲ್ಲಿ ಕೆಸರಲ್ಲೇ ಎಳೆದುಕೊಂಡು ಗುರಿ ತಲುಪಲು ಹರಸಾಹಸಪಟ್ಟರು. 

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.