ಮೂಡುಬಿದಿರೆ: ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ- 12 ಎಕ್ರೆ ಪ್ರದೇಶದಲ್ಲಿ ಕೃಷಿ ಮೇಳ

6 ವೇದಿಕೆಗಳಲ್ಲಿ ಭಾರತೀಯ ಸಾಂಸ್ಕೃತಿಕ ವೈವಿಧ್ಯ ಅನಾವರಣವಾಗಲಿದೆ

Team Udayavani, Dec 9, 2022, 10:20 AM IST

ಮೂಡುಬಿದಿರೆ: ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ- 12 ಎಕ್ರೆ ಪ್ರದೇಶದಲ್ಲಿ ಕೃಷಿ ಮೇಳ

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಡಿ. 21ರಿಂದ 27ರ ವರೆಗೆ ನಡೆಯಲಿರುವ “ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ’ ವೇಳೆ 12 ಎಕ್ರೆ ಜಾಗದಲ್ಲಿ ಕೃಷಿ ಮೇಳ ನಡೆಸಲು ಸಕಲ ಸಿದ್ಧತೆಗಳಾಗುತ್ತಿದೆ ಎಂದು ಜಾಂಬೂರಿ ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಸ್ಕೌಟ್ಸ್‌ ಗೈಡ್ಸ್‌ ಮುಖ್ಯ ಆಯುಕ್ತ ಡಾ| ಎಂ. ಮೋಹನ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಹೆಸರಿನ ಆವರಣದಲ್ಲಿ 4 ಎಕರೆ ಜಾಗದಲ್ಲಿ 100 ಬಗೆಯ ತರಕಾರಿಗಳ ಅತ್ಯಾಕರ್ಷಕ ನೈಜತೋಟ ಮೈತಳೆದಿದೆ. ಉಳಿದಂತೆ ಫಲ ಮತ್ತು ಪುಷ್ಪ ಪ್ರದರ್ಶನ, ವಿವಿಧ ಮಳಿಗೆಗಳು, ಎಜಿ ಕೊಡ್ಗಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕೃಷಿ ಸಂಪತ್ತು
ದೇಶ ವಿದೇಶಗಳ ಬಾಳೆ, ತೆಂಗು, ಧಾನ್ಯ, 530 ವಿಧ ಭತ್ತ, ವಿವಿಧ ಗೆಡ್ಡೆಗೆಣಸುಗಳು, ಆಯುರ್ವೇದ ಮಹತ್ವದ ಹಣ್ಣು ಹಂಪಲುಗಳು, 8 ವಿವಿಧ ಲೆಟ್ಯೂಸ್‌ ಮತ್ತು ಬ್ರುಕೋಲಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

ವಿಜ್ಞಾನ ವಸ್ತು ಪ್ರದರ್ಶನಗಳ ವಿಜ್ಞಾನಮೇಳ, ವಿವಿಧ ಭಾಷೆಗಳ ಪುಸ್ತಕ ಮೇಳ, ಕಲಾಮೇಳ, ಆಹಾರೋತ್ಸವ ಮೇಳಗಳನ್ನು ಏರ್ಪಡಿಸಲಾಗಿದ್ದು 6 ವೇದಿಕೆಗಳಲ್ಲಿ ಭಾರತೀಯ ಸಾಂಸ್ಕೃತಿಕ ವೈವಿಧ್ಯ ಅನಾವರಣವಾಗಲಿದೆ. ಎಲ್ಲ ವಯೋಮಾನದವರಿಗಾಗಿ, ಒಂದೇ ಕಡೆ ಎಲ್ಲ ವಸ್ತುಗಳು ಲಭ್ಯವಿರುವ ಮಾರಾಟ ಮಳಿಗೆಗಳು ತೆರೆದುಕೊಳ್ಳಲಿವೆ ಎಂದರು.

ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಆಸಕ್ತರಿಗೆ ಮುಕ್ತ, ಉಚಿತ ಪ್ರವೇಶ, ಊಟೋಪಚಾರವೂ ಉಚಿತವಾಗಿದೆ. ಕೃಷಿ ಸಿರಿಯಲ್ಲಿ ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದೆ. ಕೇವಲ ಪ್ರದರ್ಶನ ಮಳಿಗೆಗಳಿಗೆ ಯಾವುದೇ ಶುಲ್ಕವಿಲ್ಲ. ಉಳಿದಂತೆ ನಿಗದಿತ, ಸಾಂಕೇತಿಕ ಶುಲ್ಕದೊಂದಿಗೆ 100 ಚದರ ಅಡಿಯ ಮಳಿಗೆಗಳನ್ನು ಪಡೆದುಕೊಳ್ಳಲು ಡಿ. 18ರ ಮುನ್ನ ಆಳ್ವಾಸ್‌ ದಾಖಲಾತಿ ವಿಭಾಗಕ್ಕೆ ಖುದ್ದಾಗಿ ಭೇಟಿ ನೀಡಬಹುದಾಗಿದೆ ಎಂದವರು ವಿವರಿಸಿದರು. ಕೃಷಿ ಮೇಳ ಸಮಿತಿ ಪ್ರಮುಖರಾದ ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಸುಭಾಶ್ಚಂದ್ರ ಚೌಟ, ಉದಯ ದೇವಾಡಿಗ, ಚಂದ್ರಯ್ಯ ಆಚಾರ್ಯ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-dadasdasd

ಕೇಂದ್ರ ಬಜೆಟ್ 2023: ”ಇದು ಚುನಾವಣೆಗಾಗಿ” ಎಂದು ಖರ್ಗೆ ಸೇರಿ ಹಲವು ವಿಪಕ್ಷಗಳ ಟೀಕೆ

wpl 2023

ವನಿತಾ ಪ್ರೀಮಿಯರ್ ಲೀಗ್; ಆಟಗಾರರ ಹರಾಜು ದಿನಾಂಕ ಮುಂದೂಡಿಕೆ

shreyas iyer ruled out of first test against Australia

ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನಿಂದ ಹೊರಬಿದ್ದ ಸ್ಟಾರ್ ಬ್ಯಾಟರ್: ಸೂರ್ಯಗೆ ಅವಕಾಶ ಸಾಧ್ಯತೆ

4-puttur

ಪುತ್ತೂರು: ಸ್ಕೂಟರ್-ಮಾರುತಿ ವ್ಯಾನ್ ಡಿಕ್ಕಿ; ಸವಾರ ಗಂಭೀರ ಗಾಯ

tejaswi

ಈ ಬಜೆಟ್ ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ : ತೇಜಸ್ವಿ ಸೂರ್ಯ

ಕೇಂದ್ರ ಬಜೆಟ್ 2023:ಸಿಹಿ ಸುದ್ದಿ-ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 79ಸಾವಿರ ಕೋಟಿ ಅನುದಾನ

ಕೇಂದ್ರ ಬಜೆಟ್ 2023:ಸಿಹಿ ಸುದ್ದಿ-ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 79ಸಾವಿರ ಕೋಟಿ ಅನುದಾನ

tdy-14

‘ಹೊಂದಿಸಿ ಬರೆಯಿರಿʼ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳಲ್ಲಿ ಮೊಬೈಲ್‌ ಗೀಳು; ಅನಾಹುತಗಳು ತಂದಿಟ್ಟ ಆತಂಕ

ಮಕ್ಕಳಲ್ಲಿ ಮೊಬೈಲ್‌ ಗೀಳು; ಅನಾಹುತಗಳು ತಂದಿಟ್ಟ ಆತಂಕ

ಆಸ್ತಿ ನೋಂದಣಿ ಇನ್ನು ಬಲು ಸುಲಭ: ದಲ್ಲಾಳಿಗಳ ಹಾವಳಿಗೆ ಬ್ರೇಕ್

ಆಸ್ತಿ ನೋಂದಣಿ ಇನ್ನು ಬಲು ಸುಲಭ: ದಲ್ಲಾಳಿಗಳ ಹಾವಳಿಗೆ ಬ್ರೇಕ್

ಯುಯುಸಿಎಂಎಸ್‌ ವಿಫ‌ಲವಾದಲ್ಲಿ ವಿ.ವಿ.ಯೇ ಫಲಿತಾಂಶ ಪ್ರಕಟಿಸಲಿದೆ

ಯುಯುಸಿಎಂಎಸ್‌ ವಿಫ‌ಲವಾದಲ್ಲಿ ವಿ.ವಿ.ಯೇ ಫಲಿತಾಂಶ ಪ್ರಕಟಿಸಲಿದೆ

ಪ್ರಥಮ ಸೆಮಿಸ್ಟರ್‌ ಮರು ಮೌಲ್ಯಮಾಪನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ

ಪ್ರಥಮ ಸೆಮಿಸ್ಟರ್‌ ಮರು ಮೌಲ್ಯಮಾಪನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ

ಅಮಾಟೆ ವಿಕ್ರಮ್‌ ದ.ಕ. ನೂತನ ಎಸ್‌ಪಿ, ಹೃಷಿಕೇಶ್‌ ಭಗವಾನ್‌ ಗುಪ್ತಚರ ಇಲಾಖೆಗೆ ವರ್ಗ

ಅಮಾಟೆ ವಿಕ್ರಮ್‌ ದ.ಕ. ನೂತನ ಎಸ್‌ಪಿ, ಹೃಷಿಕೇಶ್‌ ಭಗವಾನ್‌ ಗುಪ್ತಚರ ಇಲಾಖೆಗೆ ವರ್ಗ

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

tdy-15

ಹೆದ್ದಾರಿ ಸಂಚಾರಕ್ಕೆ ಮುಕ್ತವಾದರೂ ವಾಹನ ದಟ್ಟಣೆ

1-dadasdasd

ಕೇಂದ್ರ ಬಜೆಟ್ 2023: ”ಇದು ಚುನಾವಣೆಗಾಗಿ” ಎಂದು ಖರ್ಗೆ ಸೇರಿ ಹಲವು ವಿಪಕ್ಷಗಳ ಟೀಕೆ

wpl 2023

ವನಿತಾ ಪ್ರೀಮಿಯರ್ ಲೀಗ್; ಆಟಗಾರರ ಹರಾಜು ದಿನಾಂಕ ಮುಂದೂಡಿಕೆ

5–nalin-kateel

ರಾಜ್ಯ, ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್: ನಳಿನ್‍ ಕುಮಾರ್ ಕಟೀಲ್

sakuchi press meet.

ಪ್ರೆಸ್ ಮೀಟ್ ನಲ್ಲಿ ಚಿತ್ರ ನಿರ್ದೇಶಕರ ಮೈಮೇಲೆ ಅಗೋಚರ ಶಕ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.