Udayavni Special

ಮೂಡಬಿದಿರೆ: ಗೊಂದಲದ ಗೂಡಾಗಿದೆ ಪಾರ್ಕಿಂಗ್‌ ವ್ಯವಸ್ಥೆ 


Team Udayavani, Aug 30, 2018, 10:44 AM IST

30-agust-5.jpg

ಮೂಡಬಿದಿರೆ: ಮೇಲ್ನೋಟಕ್ಕೆ ವಿಶಾಲವಾಗಿ ಕಾಣುವ ಮೂಡಬಿದಿರೆ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೇ ಗೊಂದಲಗಳ ಗೂಡಾಗಿದೆ. ಮಂಗಳೂರು, ಕಾರ್ಕಳ, ಬೆಳ್ತಂಗಡಿಯ ಬಸ್‌ಗಳಿಗೆ ಹೊರತುಪಡಿಸಿ ಉಳಿದ ಬಸ್‌ ಗಳ ನಿಲ್ದಾಣಕ್ಕೆ ಸರಿಯಾದ ಜಾಗವೇ ಇಲ್ಲದಂತಾಗಿದೆ. ಏಕಕಾಲಕ್ಕೆ 30ರಿಂದ 50 ಬಸ್‌ಗಳು ನಿಲ್ಲಬಹುದಾದಷ್ಟು ಸ್ಥಳ ಇಲ್ಲಿದ್ದರೂ ಈಗ ಕೇವಲ 15 ಬಸ್‌ಗಳು ಮಾತ್ರ ನಿಲ್ಲಬಹುದಾದ ಪರಿಸ್ಥಿತಿ ಇದೆ.

ರಸ್ತೆಯಲ್ಲೇ ಪಾರ್ಕಿಂಗ್‌
ಬಸ್‌ನಿಲ್ದಾಣದ ದಕ್ಷಿಣದಲ್ಲಿರುವ ಪುರಸಭಾ ವಾಣಿಜ್ಯ ಸಂಕೀರ್ಣದ 2 ಅಂತಸ್ತು ಮತ್ತು ಪೂರ್ವದಲ್ಲಿರುವ ಖಾಸಗಿ ವಾಣಿಜ್ಯ ಸಂಕೀರ್ಣಗಳಲ್ಲಿ ಈಗಾಗಲೇ 150 ವರ್ತಕರ ಅಂಗಡಿಗಳಿವೆ. ಈ ಎಲ್ಲ ಅಂಗಡಿಗಳ ಮಾಲಕರು, ಕೆಲಸಗಾರರ ವಾಹನಗಳು, ಅಂಗಡಿಗಳಿಗೆ ಬರುವ ಗ್ರಾಹಕರ ವಾಹನಗಳ ನಿಲುಗಡೆಗೆ ಸೂಕ್ತ ಜಾಗಕ್ಕೆ ಅವಕಾಶ ಕಲ್ಪಿಸದೆ ಇರುವುದರಿಂದ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಮನವಿಗೂ ಸ್ಪಂದನೆಯಿಲ್ಲ
ಈ ಬಗ್ಗೆ ಸಾಕಷ್ಟು ಬಾರಿ ವರ್ತಕರಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ನಿಗದಿಪಡಿಸಿ, ಪೇ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಅಳವಡಿಸಿ ಪುರಸಭೆ ಸಮಸ್ಯೆ ನಿವಾರಿಸಲು ಮುಂದಾದರೂ ಅದರ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬಿ.ಸಿ.ರೋಡ್‌, ನಾರಾವಿ, ಮಿತ್ತಬೈಲು, ಶಿರ್ತಾಡಿ ಹೀಗೆ ಗ್ರಾಮಾಂತರ ಪರಿಸರದ ಬಸ್ಸುಗಳ ನಿಲುಗಡೆಯಾಗುವಲ್ಲಿ ಇತರೆ ಖಾಸಗಿ ವಾಹನಗಳು ಸ್ಥಳ ಆಕ್ರಮಿಸಿಕೊಳ್ಳುತ್ತಿವೆ. 

ಪರಿಹಾರ ಹೇಗೆ?
ಮುಖ್ಯರಸ್ತೆಯಿಂದ ಎತ್ತರದಲ್ಲಿ ರುವ ಬಸ್‌ ನಿಲ್ದಾಣವನ್ನು ಸಮತಟ್ಟುಗೊಳಿಸಿ ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌ ಯೋಜನೆ ಜಾರಿಗೊಳಿಸಲು ಸಾಧ್ಯವಾದರೆ ಪುರಸಭೆಗೂ ಆದಾಯ ಹೆಚ್ಚಲಿದೆ. ಹೆಚ್ಚುವರಿ ಸ್ಥಳಾವಕಾಶವೂ ದೊರೆಯಲಿದೆ. ಲಂಬಕೋನದಲ್ಲಿ ಬಸ್‌ ನಿಲ್ದಾಣವನ್ನು ಪ್ರವೇಶಿಸುವ ಅಪಾಯಕಾರಿ ಸನ್ನಿವೇಶವನ್ನು ನಿವಾರಿಸಿ ಪಿಡಬ್ಲ್ಯುಡಿ ಯಿಂದ ಇದೊಂದು ಕಾನೂನುಬದ್ಧ ಬಸ್‌ನಿಲ್ದಾಣವೆಂಬ  ಸಿರುನಿಶಾನೆ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಪುರಸಭೆ ಸಹಿತ ಸಂಬಂಧ ಪಟ್ಟವರೆಲ್ಲ ಯೋಜಿತ ಕ್ರಮ ಕೈಗೊಳ್ಳಲೇಬೇಕಾಗಿದೆ.

ಶೀಘ್ರ ಪರಿಹಾರ
ಕೆಳಗಡೆ ನಿರ್ಮಾಣವಾಗುತ್ತಿರುವ ಮಾರುಕಟ್ಟೆಯ ತಳ ಅಂತಸ್ತುಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಕೆಲವೇ ತಿಂಗಳಲ್ಲಿ ಅಲ್ಲಿ ಪಾರ್ಕಿಂಗ್‌ಗೆ ಅವಕಾಶವಾಗಲಿದೆ. ತನ್ಮೂಲಕ ಬಸ್‌ನಿಲ್ದಾಣ ಮಾತ್ರವಲ್ಲ ಪೇಟೆಯನ್ನು ಕಾಡುತ್ತಿರುವ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಸಿಗಲಿದೆ.
 - ಶೀನಾ ನಾಯ್ಕ ಪುರಸಭಾ ಮುಖ್ಯಾಧಿಕಾರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

river

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

coviid-stater

ಕೋವಿಡ್-19 ಕಳವಳ – ಸೆ.19: 8364 ಹೊಸ ಪ್ರಕರಣ ; 10,815 ಡಿಸ್ಚಾರ್ಜ್; 114 ಸಾವು

chamarajnagar

ಚಾಮರಾಜನಗರ: ಇಂದು 72 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಸುರೇಶ್‌ ರೈನಾ ಶುಭ ಸಂದೇಶ

ಸುರೇಶ್‌ ರೈನಾ ಶುಭ ಸಂದೇಶ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ipl-chennai-mumbai

ಐಪಿಎಲ್ ಕಲರವ ಆರಂಭ: ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

‌ನರೇಗಾ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಮೇಘರಾಜ್‌

‌ನರೇಗಾ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಮೇಘರಾಜ್‌

ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

river

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬಿಲ್‌: ಕ್ರಮಕ್ಕೆ ಮನವಿ

ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬಿಲ್‌: ಕ್ರಮಕ್ಕೆ ಮನವಿ

coviid-stater

ಕೋವಿಡ್-19 ಕಳವಳ – ಸೆ.19: 8364 ಹೊಸ ಪ್ರಕರಣ ; 10,815 ಡಿಸ್ಚಾರ್ಜ್; 114 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.