ಮಂಗಳೂರು ಕೆಎಸ್‌ ಆರ್‌ ಟಿಸಿಗೆ 1 ಕೋಟಿ ನಷ್ಟ: ಇಂದಿನಿಂದ ಮಂಗಳೂರು- ಪುಣೆ ಬಸ್‌ ಪುನರಾರಂಭ

Team Udayavani, Aug 13, 2019, 3:17 PM IST

ಸುರತ್ಕಲ್:‌ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಹದ ಕಾರಣದಿಂದ ರದ್ದಾಗಿದ್ದ ಮಂಗಳೂರು- ಪುಣೆ ಕೆಎಸ್‌ ಆರ್‌ ಟಿಸಿ ಬಸ್‌ ಸಂಚಾರ ಮಂಗಳವಾರದಿಂದ ಪುನರಾರಂಭವಾಗಲಿದೆ ಎಂದು ಕೆಎಸ್‌ ಆರ್‌ ಟಿಸಿ ಮಂಗಳೂರು ವಿಭಾಗ ಜಿಲ್ಲಾ ನಿಯಂತ್ರಣಾಧಿಕಾರಿ ಅಶ್ರಫ್‌ ಅವರು ಹೇಳಿದ್ದಾರೆ.

ಮಂಗಳೂರು, ಉಡುಪಿ, ಕುಂದಾಪುರ ವಿಭಾಗದಿಂದ ಮಹಾರಾಷ್ಟ್ರದ ಮುಂಬೈ, ಪುಣೆ, ಕೊಲ್ಲಾಪುರಕ್ಕೆ ಬಸ್‌ ಸಂಚಾರವಿದ್ದು, ಪ್ರವಾಹದ ಕಾರಣದಿಂದ ಇದನ್ನು ಕೆಲ ದಿನಗಳ ಮಟ್ಟಿಗೆ ರದ್ದು ಮಾಡಲಾಗಿತ್ತು. ಆದರೆ ಈಗ ಪುಣೆಗೆ ಸುಗಮ ಸಂಚಾರಕ್ಕೆ ಅನುಮತಿ ದೊರೆತ ಕಾರಣ ಇಂದಿನಿಂದ ಬಸ್‌ ಸಂಚಾರ ಆರಂಭವಾಗಲಿದೆ. ಆದರೆ ಮುಂಬೈ ಮತ್ತು ಕೊಲ್ಲಾಪುರಕ್ಕೆ ಬಸ್‌ ಪುನರಾರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಮಂಗಳೂರು ವಿಭಾಗಕ್ಕೆ ಒಂದು ಕೋಟಿ ನಷ್ಟ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆ ಮತ್ತು ಘಟ್ಟ ಪ್ರದೇಶಗಳ ಗುಡ್ಡ ಕುಸಿತದಿಂದಾಗಿ ಕೆಎಸ್‌ ಆರ್‌ ಟಿಸಿ ಗೆ ಹಲವು ನಷ್ಟವಾಗಿದೆ. ಶಿರಾಡಿ, ಚಾರ್ಮಾಡಿ ಘಾಟಿ ಬಂದ್‌ ಆಗಿದ್ದ ಕಾರಣ ಸುಮಾರು 265 ಶೆಡ್ಯೂಲ್‌ ಗಳನ್ನು ರದ್ದುಗೊಳಸಿಲಾಗಿದೆ. ಇದರಿಂದಾಗಿ ಮಂಗಳೂರು ವಿಭಾಗಕ್ಕೆ ಒಂದು ಕೋಟಿಗೂ ಹೆಚ್ಚಿನ ನಷ್ಟವಾಗಿದೆ ಎಂದು ಜಿಲ್ಲಾ ನಿಯಂತ್ರಣಾಧಿಕಾರಿ ಅಶ್ರಫ್‌ ಅವರು ಮಾಹಿತಿ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ