“ಮಾತೆಯರು ಗೌರಿ ಸ್ವರೂಪಿಗಳಾಗಲಿ’

Team Udayavani, Aug 27, 2017, 7:45 AM IST

ಪುಂಜಾಲಕಟ್ಟೆ : ಸುಸಂಸ್ಕೃತ ಸಮಾಜ ನಿರ್ಮಾಣದ ಪ್ರೇರಕ ಶಕ್ತಿ ತಾಯಿ. ಮಾತೃಶಕ್ತಿ ಮನಸ್ಸು ಮಾಡಿದರೆ ಇಡೀ ಸಮಾಜವನ್ನೇ ಬದಲಿಸಬಹುದು. ಹಿಂದೂ ಸಮಾಜದ ಎಲ್ಲ  ಮಾತೆಯರು ಗೌರಿ ಸ್ವರೂಪಿಗಳಾಗಬೇಕು ಎಂದು ಸಹನಾ ಕುಂದರ್‌ ಸೂಡ ಹೇಳಿದರು.

ಅವರು ಶುಕ್ರವಾರ ಬಂಟ್ವಾಳ ತಾ| ವಾಮದಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ  ನಡೆಯುತ್ತಿರುವ 34 ನೇ  ವರ್ಷದ ಶ್ರೀ ಗೌರಿ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ  ಧಾರ್ಮಿಕ ಉಪನ್ಯಾಸ ನೀಡಿದರು.

ಮಂಗಳೂರು ಉದ್ಯಮಿ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ರಮೇಶ್‌ ಶೆಟ್ಟಿ ಕೆ., ಪದಾಧಿಕಾರಿಗಳಾದ ಶಂಕರ ಭಂಡಾರಿ, ದಿನೇಶ್‌ ಸಾಲ್ಯಾನ್‌, ಮನೋಜ್‌ ಶೆಟ್ಟಿ, ಉಮೇಶ್‌ ಶೆಟ್ಟಿ  ಮತ್ತಿತರರು ಉಪಸ್ಥಿತರಿದ್ದರು.

ರೇಣುಕಾ ರೈ ಸ್ವಾಗತಿಸಿದರು. ಭಾರತಿ ಶೆಟ್ಟಿ ಬದ್ಯಾರು ವಂದಿಸಿದರು. ಸೇವಂತಿ ಕಾರ್ಯಕ್ರಮ ನಿರೂಪಿಸಿದರು.

ಮಹಿಳೆಗೆ ತುಳುನಾಡ ಸಂಸ್ಕೃತಿ ಉಳಿಸುವ ಜವಾಬ್ದಾರಿ  ತನ್ನ ಮನೆ, ಸಮಾಜ ರಕ್ಷಣೆಯಲ್ಲಿ ತಾಯಿಯ ಪಾತ್ರ ಮಹತ್ತರವಾಗಿರುವ ಕಾರಣ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. 
– ಸಹನಾ ಕುಂದರ್‌


ಈ ವಿಭಾಗದಿಂದ ಇನ್ನಷ್ಟು

  • ಮಹಾನಗರ: ಮಹಾನಗರ ಪಾಲಿಕೆಯು ಉದ್ದಿಮೆ ಪರವಾನಿಗೆ ನವೀಕರಣ ಕುರಿತಂತೆ ಹೊಸ ನಿಯಮ ರೂಪಿಸಿದ್ದು, ಇದರಿಂದಾಗಿ ಈಗ ನಗರದ ಬಹುತೇಕ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಮಂಗಳೂರು: ದೇಶದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದು ಎ. 11ರಂದು ಆರಂಭವಾದ 7 ಹಂತಗಳ ದೀರ್ಘ‌ ಚುನಾವಣಾ ಪ್ರಕ್ರಿಯೆ; ಪೂರ್ಣಗೊಂಡದ್ದು...

  • ಮೂಡುಬಿದಿರೆ: ಯಕ್ಷ ಗಾನ ಜನರಲ್ಲಿ ಜೀವನ ಮೌಲ್ಯಗಳ ಅರಿವಿನೊಂದಿಗೆ ಸಂಸ್ಕಾರ ಮೂಡಿಸುತ್ತ ಬಂದಿದೆ. ಅದರಲ್ಲೂ ಮಕ್ಕಳಿಗೆ ಯಕ್ಷ ಗಾನದ ಬಗ್ಗೆ ಆಸಕ್ತಿ ಮೂಡಿಸಿದಲ್ಲಿ...

ಹೊಸ ಸೇರ್ಪಡೆ