ನೇತ್ರಾವತಿ ನದಿ ನೀರು ಪೂರೈಕೆಯೇ ಪರಿಹಾರ

Team Udayavani, Mar 25, 2018, 11:03 AM IST

25-March-4.jpg

ತಲಪಾಡಿ: ಕುಡಿಯುವ ನೀರೇ ಇಲ್ಲಿನ ಪ್ರಮುಖ ಸಮಸ್ಯೆ. ಮಾರ್ಚ್ ತಿಂಗಳು ಬಂತೆಂದರೆ ಎಲ್ಲೆಲ್ಲೂ ನೀರಿಗೆ ತತ್ವಾರ. ಹಲವು ವರ್ಷಗಳ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ.

ತಲಪಾಡಿ ಗ್ರಾಮ ಪಂಚಾಯತ್‌ನ ನಗರ ಪ್ರದೇಶದ ಜನರಿಗೆ ಮಾರ್ಚ್‌ ತಿಂಗಳು ಬಂತೆಂದರೆ ಸಮಸ್ಯೆಗಳ ದಿನಗಳು ಆರಂಭವಾದವು ಎಂದೇ ಅರ್ಥ. ಒಂದೆಡೆ ಬಿರು ಬಿಸಿಲು ಇನ್ನೊಂದೆಡೆ ನೀರಿಗಾಗಿ ಪರದಾಟ. ಇಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ನೇತ್ರಾವತಿ ನದಿ ನೀರೊಂದೇ ಪರಿಹಾರ ಎನ್ನುತ್ತಾರೆ ಸ್ಥಳೀಯರು.

ತಲಪಾಡಿ ಗ್ರಾಮದ ನಗರಕ್ಕೆ ಹೊಂದಿಕೊಂಡಿರುವ ಕೆ.ಸಿ. ನಗರ, ಕೆ.ಸಿ. ರೋಡ್‌, ಪೂಮಣ್ಣು, ಅಲಂಕಾರಗುಡ್ಡೆ, ಮಾದವಪುರ, ಜನತಾಗೃಹ, ನಾರ್ಲ ಪಡೀಲ್‌ ಪ್ರದೇಶಗಳಲ್ಲಿ ಬೇಸಗೆಯ ಆರಂಭದಲ್ಲೇ ನೀರಿನ ಸಮಸ್ಯೆ ಪ್ರಾರಂಭವಾಗುತ್ತದೆ. ಈ ವ್ಯಾಪ್ತಿಯಲ್ಲಿ ಖಾಸಗಿ ಬಾವಿಗಳು ಡಿಸೆಂಬರ್‌ ತಿಂಗಳಿನಿಂದಲೇ ಬತ್ತಲು ಆರಂಭಿಸಿದರೆ, ಪಂಚಾಯತ್‌ನಿಂದ ನೀರು ಪೂರೈಕೆ ಮಾಡುವ ಬಾವಿಗಳು ಮಾರ್ಚ್‌ನಲ್ಲಿ ಬತ್ತುವುದರಿಂದ ಟ್ಯಾಂಕರ್‌ ನೀರೇ ಇಲ್ಲಿನ ಜನರಿಗೆ ಆಧಾರ.

ಒಣಭೂಮಿ ನೀರಿನ ಮೂಲ ಇಲ್ಲ
ಪಂಚಾಯತ್‌ನ 1, 2, 3ನೇ ವಾರ್ಡ್‌ನಲ್ಲಿ ನೀರಿನ ಮೂಲ ಇಲ್ಲದೆ ಬಾವಿ, ಬೋರ್‌ವೆಲ್‌ ನಿರ್ಮಾಣವೇ ಅಸಾಧ್ಯವಾಗಿದೆ. ಕೆಲವೆಡೆ ಸುಮಾರು 600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ದೇವಿನಗರ, ಪಂಜಾಳ, ದೇವಿಪುರ, ತಚ್ಛಾಣಿ, ರಾಮನಗರಗಳಲ್ಲಿ ಎಪ್ರಿಲ್‌ ಬಳಿಕ ನೀರಿನ ಸಮಸ್ಯೆ ಹೆಚ್ಚಾಗಿರುತ್ತದೆ. ಮಾರ್ಚ್‌ ತಿಂಗಳಲ್ಲೇ ದಿನವೊಂದಕ್ಕೆ 10 ಟ್ಯಾಂಕರ್‌ ನೀರುಗಳನ್ನು ಪೂರೈಸಲಾಗುತ್ತಿದ್ದು, ಎಪ್ರಿಲ್‌ ತಿಂಗಳಲ್ಲಿ ಅದರ ಮೂರು ಪಟ್ಟು ಹೆಚ್ಚು ನೀರು ಪೂರೈಸಲಾಗುತ್ತದೆ ಎನ್ನುತ್ತಾರೆ ನೀರು ಸರಬರಾಜು ಮಾಡುವವರು. ಕಳೆದ ಬಾರಿ ಗ್ರಾಮ ಪಂಚಾಯತ್‌ ಟ್ಯಾಂಕರ್‌ ನೀರಿಗಾಗಿ ಎರಡು ಲಕ್ಷ ರೂ. ಖರ್ಚು ಮಾಡಿತ್ತು. ಈ ಬಾರಿ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ನೀರಿಲ್ಲದ ಓವರ್‌ ಹೆಡ್‌ ಟ್ಯಾಂಕ್‌ಗಳು
ಕಳೆದ ಹತ್ತು ವರ್ಷದ ಹಿಂದೆ ತಲಪಾಡಿ ಗ್ರಾಮ ಪಂಚಾಯತ್‌ ಬಳಿ ಲಕ್ಷಾಂತರ ರೂ. ವೆಚ್ಚ ಮಾಡಿ ಓವರ್‌ಹೆಡ್‌ ಟ್ಯಾಂಕ್‌ ರಚಿಸಿದ್ದು, ನೀರು ಸರಬರಾಜು ಆಗದೆ ನಾದುರಸ್ಥಿಯಲ್ಲಿದ್ದು ಕುಸಿಯುವ ಹಂತದಲ್ಲಿದೆ. ಇನ್ನೊಂದು ಟ್ಯಾಂಕ್‌ ಅಲಂಕಾರಗುಡ್ಡೆಯಲ್ಲಿದ್ದು, ಈವರೆಗೂ ಆ ಟ್ಯಾಂಕ್‌ ಉಪಯೋಗಕ್ಕೆ ಸಿಕ್ಕಿಲ್ಲ. ಕಳೆದ ಜಿಲ್ಲಾ ಪಂಚಾಯತ್‌ ವತಿಯಿಂದ ಉಪಾಧ್ಯಕ್ಷರಾಗಿದ್ದ ಸತೀಶ್‌ ಕುಂಪಲ ಅವಧಿಯಲ್ಲಿ ಬೋರ್‌ವೆಲ್‌ ರಚನೆ ಸಹಿತ ಕುಡಿಯುವ ನೀರಿಗೆ ಅನುದಾನ ಸಿಕ್ಕಿತ್ತು ಎನ್ನುತ್ತಾರೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಸುರೇಶ್‌ ಆಳ್ವ.

ಅಣೆಕಟ್ಟು ಬೇಡಿಕೆ ಈಡೇರಿಲ್ಲ
ತಲಪಾಡಿ ಗ್ರಾಮದಲ್ಲಿ 13,000 ಜನಸಂಖ್ಯೆ ಹೊಂದಿದ್ದು, ಸುಮಾರು 2,600 ಮನೆಗಳಿವೆ. ಶೇ. 50 ಪ್ರದೇಶಕ್ಕೆ ಗ್ರಾಮ ಪಂಚಾಯತ್‌ನ ನೀರಿನ ವ್ಯವಸ್ಥೆಯಿದ್ದು, 14 ಬೋರ್‌ವೆಲ್‌, 10 ಬಾವಿಯಿಂದ ನೀರನ್ನು ಪೂರೈಸಲಾಗುತ್ತದೆ. ತಲಪಾಡಿ ಬಳಿ ಹೊಳೆಗೆ ಅಣೆಕಟ್ಟು ಕಟ್ಟುವಂತೆ ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಈವರೆಗೂ ಬೇಡಿಕೆ ಈಡೇರಿಲ್ಲ. ಸುಮಾರು 20 ಲಕ್ಷ ರೂ. ಅಣೆಕಟ್ಟಿಗೆ ಅಗತ್ಯವಿದ್ದು, ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿದರೆ ಸ್ಥಳೀಯವಾಗಿ ಶೇ. 25 ಭೂಮಿಯಲ್ಲಿ ನೀರು ಇಂಗಿ ಬಾವಿಗಳಲ್ಲಿ ನೀರಿನ ಮೂಲ ಉಳಿಯಬಹುದು ಎನ್ನುತ್ತಾರೆ ಸುರೇಶ್‌ ಆಳ್ವ.

ಶಾಶ್ವತ ಪರಿಹಾರ ಬೇಕಿದೆ
ಹಲವು ವರ್ಷಗಳ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಬಡ ಕುಟುಂಬಗಳೇ ಹೆಚ್ಚಾಗಿರುವುದರಿಂದ ನೀರಿಗಾಗಿ ಟ್ಯಾಂಕರ್‌ಗಳನ್ನೇ ಅವಲಂಬಿಸುವ ಸ್ಥಿತಿ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸದೆ ಇಲ್ಲಿ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕಿದೆ.
– ಇಸ್ಮಾಯಿಲ್‌ ಪೂಮಣ್ಣು,
ಸಾಮಾಜಿಕ ಕಾರ್ಯಕರ್ತರು

ಟ್ಯಾಂಕರ್‌ ನೀರು ಸರಬರಾಜು
ತಲಪಾಡಿಯಲ್ಲಿ ನೀರಿನ ಮೂಲದ ಕೊರತೆ ನೀರಿನ ಸಮಸ್ಯೆ ಹೆಚ್ಚಲು ಕಾರಣ. ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ತಲಪಾಡಿ ಗ್ರಾಮ ಪಂಚಾಯತ್‌ ಸೇರಿಸುವಂತೆ ಒತ್ತಡ ಹಾಕಿದ್ದು, ಸೇರಿಸುವ ಭರವಸೆ ಸಿಕ್ಕಿದೆ. ಈ ಗ್ರಾಮದ ಸಮಸ್ಯೆಗೆ ನೇತ್ರಾವತಿ ನದಿ ನೀರೆ ಪರಿಹಾರ. ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಟ್ಯಾಂಕರ್‌ ನೀರು ಸರಬರಾಜು ಕಾರ್ಯ ಆರಂಭಿಸಲಾಗಿದೆ.
-ಸುರೇಶ್‌ ಆಳ್ವ ಸಾಂತ್ಯಗುತು,
ಅಧ್ಯಕ್ಷ, ಗ್ರಾ.ಪಂ., ತಲಪಾಡಿ

ವಸಂತ್‌ ಎನ್‌. ಕೊಣಾಜೆ

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.