ನಿಫಾ ಆತಂಕ: ಮರದಡಿ ರಾಶಿ ಹಣ್ಣುಗಳಿದ್ದರೂ ಯಾರಿಗೂ ಬೇಡ!


Team Udayavani, May 27, 2018, 12:16 PM IST

27-may-8.jpg

ಪುತ್ತೂರು: ನೆರೆಯ ಕೇರಳ ರಾಜ್ಯದಲ್ಲಿ ಬಾವಲಿ ಜ್ವರದ (ನಿಫಾ ವೈರಸ್‌) ತೀವ್ರತೆ ನಮ್ಮ ರಾಜ್ಯದಲ್ಲೂ ಭಯ ಹುಟ್ಟಿಸಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಜಾಗೃತಿ ಸಂದೇಶಗಳನ್ನು ನೋಡಿರುವ ಜನತೆ, ಬಾವಲಿ ತಿನ್ನಬಹುದಾದ ಹಣ್ಣುಗಳಿಂದಲೂ ದೂರ ಸರಿಯುತ್ತಿದ್ದಾರೆ.

ಒಂದೆಡೆ ಮಾವು, ಹಲಸು, ಚಿಕ್ಕು, ಬಾಳೆ ಹಣ್ಣು, ಗೇರುಹಣ್ಣುಗಳ ಫಲ ನೀಡುವ ಸಮಯವಾದರೆ ಮತ್ತೂಂದೆಡೆ ಶಾಲಾ – ಕಾಲೇಜು ಮಕ್ಕಳಿಗೆ ರಜೆಯ ಅವಧಿ. ಬೇಸಿಗೆ ರಜೆಯ ಅವಧಿಯಲ್ಲಿ ಮನೆಯಲ್ಲಿ ಉಳಿದಿರುವ ಮಕ್ಕಳು ಪ್ರಕೃತಿಯಲ್ಲಿ ಸಿಗುವ ಹಣ್ಣುಗಳನ್ನು ತಿನ್ನುತ್ತಾ ದಿನ ಕಳೆಯುವುದು ಮಾಮೂಲು. ಆದರೆ ಈ ಬಾರಿ ಆ ಖುಷಿ ಸಾಧ್ಯವಾಗುತ್ತಿಲ್ಲ. ಪೋಷಕರು ಮಕ್ಕಳಿಗೆ ಹಣ್ಣುಗಳನ್ನು ತಿನ್ನದಂತೆ ಕಡಿವಾಣ ಹಾಕಿದ್ದಾರೆ.

ಮರದ ಕೆಳಗೆ ರಾಶಿ
ಮೇ, ಜೂನ್‌ ತಿಂಗಳಲ್ಲಿ ಸಾಮಾನ್ಯವಾಗಿ ಮುಂಜಾನೆಯ ಹೊತ್ತು ಮಾವಿನ ಮರದ ಕೆಳಗೆ ಗಾಳಿಗೆ ಬಿದ್ದ ಮಾವುಗಳನ್ನು ಹೆಕ್ಕಲು ಜನರಲ್ಲಿ ಸ್ಪರ್ಧೆ ಇರುತ್ತಿತ್ತು. ಆದರೆ ಈ ಬಾರಿ ಮಾವಿನ ಮರದ ಕೆಳಗೆ ಹಣ್ಣುಗಳ ರಾಶಿಯೇ ಇದ್ದರೂ ಯಾರಿಗೂ ಬೇಡ. ಗಾಳಿಗಿಂತಲೂ ಬಾವಲಿ ಹಣ್ಣನ್ನು ಬೀಳಿಸಿದ್ದರೆ ಎಂಬ ಭಯ ಇದಕ್ಕೆ ಪ್ರಮುಖ ಕಾರಣ. ಹಲಸಿನ ಹಣ್ಣು, ಚಿಕ್ಕು, ಬಾಳೆಹಣ್ಣುಗಳ ಸ್ಥಿತಿಯೂ ಇದೇ ಆಗಿದೆ.

ಕೋಳಿಗೆ ವೈರಸ್‌ ಬಂದಿಲ್ಲ ಬಾವಲಿ ಮೂಲಕ ವೈರಸ್‌ ಹರಡಿ ಸಾವು ನೋವಿನ ಜ್ವರ ಬರುತ್ತಿದೆ ಎನ್ನುವ ಸಂದೇಶಗಳು ಒಂದು ಹಂತಕ್ಕೆ ಹರಡಿ ತಣ್ಣಗಾಗುತ್ತಿದ್ದಂತೆ ಫಾರಂ ಕೋಳಿಗಳ ಮೂಲಕವೂ ಜ್ವರ ಹರಡುತ್ತದೆ ಎನ್ನುವ ಸಾಮಾಜಿಕ ಜಾಲತಾಣದ ಸಂದೇಶ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕವನ್ನು ಮೂಡಿಸಿದೆ. ಆದರೆ ಇಂತಹ ಯಾವುದೇ ಸಾಧ್ಯತೆಗಳು ಸಂಶೋಧನೆಯ ಸಂದರ್ಭದಲ್ಲಿ ಕಂಡುಬಂದಿಲ್ಲ ಎನ್ನುತ್ತಾರೆ ತಜ್ಞರು.

‘ಬಾವೊಲಿ ಈ ಆವೊಲಿ..!’
ತನ್ನ ಪಾಡಿಗೆ ತಾನಿದ್ದ ಹಾರುವ ಸಸ್ತನಿ ಬಾವಲಿ ಕುರಿತಾಗಿ ಕೆಲವೇ ದಿನಗಳ ಅವಧಿಯಲ್ಲಿ ಜನರ ದೃಷ್ಟಿಕೋನವೇ ಬದಲಾಗಿದೆ. ಬಾವಲಿಯ  ಕುರಿತು ಸಿಟ್ಟಿನ, ಸ್ವಾರಸ್ಯದ ಬರಹಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ‘ಬಾವೊಲಿ ಈ ಆವೊಲಿ..!’, ‘ತಲೆ ಕೆಳಗೆ ನೇತಾಡುವ ಬಾವಲಿ ಕೂಡ ಎಲ್ಲರನ್ನೂ ಒಮ್ಮೆ ಮೇಲೆ ಕೆಳಗೆ ಮಾಡಬಲ್ಲದು’ ಎನ್ನುವಂತಹ ಬರಹಗಳು ಮನರಂಜನೆಯ ಜತೆಗೆ ಜಾಗೃತಿಯನ್ನೂ ಮೂಡಿಸುತ್ತವೆ.

ಕೊಯ್ದು ಹಣ್ಣು ಮಾಡಿ ತಿನ್ನಬಹುದು
ನಿಫಾ ವೈರಸ್‌ ಜ್ವರ ಕೇರಳ ರಾಜ್ಯದ ಒಂದು ಪ್ರದೇಶಕ್ಕೆ ಸಂಬಂಧಪಟ್ಟಂತೆ ಮಾತ್ರ ಬಾಧಿಸಿದೆ. ಈ ಕುರಿತು ಹೆಚ್ಚು ಭಯ ಬೇಡ. ಇದು ನಿಫಾ ವೈರಸ್‌ ಅಥವಾ ಬಾವಲಿಯಿಂದ ಬರುವುದು ಅಲ್ಲ ಎನ್ನುವ ಸಂಶೋಧನ ಹೇಳಿಕೆಗಳೂ ಬರುತ್ತಿವೆ. ಆದರೆ ಮಕ್ಕಳು ಬಿದ್ದ ಹಣ್ಣುಗಳನ್ನು ತಿನ್ನದೇ ಇರುವುದು ಉತ್ತಮ. ಮರದಿಂದ ಕೊಯ್ದು ಹಣ್ಣು ಮಾಡಿ ತಿನ್ನಬಹುದು ಅಥವಾ ಅಂಗಡಿಯಿಂದ ಪಡೆದುಕೊಳ್ಳಬಹುದು. ಮಳೆ ಬಂದಾಗ ಹಣ್ಣುಗಳಲ್ಲಿ ಬೇರೆ ರೀತಿಯ ಕ್ರಿಮಿಗಳೂ ಇರುವ ಸಾಧ್ಯತೆ ಇರುವುದರಿಂದ ಮರದಿಂದ ಬಿದ್ದ ಹಣ್ಣುಗಳನ್ನು ತಿನ್ನುವುದುಬೇಡ.
– ಡಾ| ಶ್ರೀಕಾಂತ್‌ ರಾವ್‌,
ಮಕ್ಕಳ ತಜ್ಞರು, ಪುತ್ತೂರು

 ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.