ವೈದ್ಯರ ಮುಷ್ಕರ: ನಾಳೆ ಒಪಿಡಿ ಸೇವೆ ಇಲ್ಲ

Team Udayavani, Jun 16, 2019, 10:36 AM IST

ಮಂಗಳೂರು/ಉಡುಪಿ: ಪ. ಬಂಗಾಲ ದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಕರೆಯಂತೆ ಜೂ. 17ರ ಬೆಳಗ್ಗೆ 6 ಗಂಟೆಯಿಂದ ಜೂ. 18ರ ಬೆಳಗ್ಗೆ 6 ಗಂಟೆಯ ವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಕಾರ್ಯ ನಿರ್ವಹಿಸುವುದಿಲ್ಲ.

ಭಾರತೀಯ ವೈದ್ಯಕೀಯ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ| ಗುರುಮೂರ್ತಿ ಭಟ್‌ ಮತ್ತು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ| ಬಿ. ಸಚ್ಚಿದಾನಂದ ರೈ ಈ ವಿಚಾರ ತಿಳಿಸಿದ್ದಾರೆ.

ಮಂಗಳೂರು ಮತ್ತು ಉಡುಪಿಯ ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಜೂ. 17ರ ಬೆಳಗ್ಗೆ 6ರಿಂದ 18ರ ಬೆಳಗ್ಗೆ 6 ಗಂಟೆಯ ವರೆಗೆ ಬಂದ್‌ ನಡೆಯಲಿದ್ದು, ಒಪಿಡಿ ಸಹಿತ ಯಾವುದೇ ಸೇವೆ ಲಭ್ಯವಿರುವುದಿಲ್ಲ. ಆಸ್ಪತ್ರೆಗಳ ಮೆಡಿಕಲ್‌ ಅಂಗಡಿಗಳಲ್ಲಿಯೂ ಸೇವೆ ಇರದು. ಆದರೆ ತುರ್ತು ಸೇವೆಗಳಿಗೆ ವಿನಾಯಿತಿ ಇದೆ ಎಂದವರು ವಿವರಿಸಿದ್ದಾರೆ.

ಮಣಿಪಾಲ ಆಸ್ಪತ್ರೆ, ಉಡುಪಿ ಮತ್ತು ಕಾರ್ಕಳದ ಡಾ| ಟಿಎಂಎ ಪೈ ಆಸ್ಪತ್ರೆ ಗಳಲ್ಲಿಯೂ ಒಪಿಡಿ ಸೇವೆ ಇರುವುದಿಲ್ಲ. ಆದರೆ ತುರ್ತುಚಿಕಿತ್ಸೆ ಇರಲಿವೆ ಎಂದು ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ. ವೈದ್ಯರ ಮುಷ್ಕರಕ್ಕೆ ಎರಡೂ ಜಿಲ್ಲೆಗಳ ಆಯುಷ್‌ ಫೌಂಡೇಶನ್‌ ಘಟಕಗಳು ಬೆಂಬಲ ವ್ಯಕ್ತಪಡಿಸಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ