ಕಡಬ ಪೇಟೆಯಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌

Team Udayavani, May 15, 2018, 9:15 AM IST

Kadaba-Parking-15-5.jpg

ಕಡಬ: ಈಗಾಗಲೇ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಪಟ್ಟಣ. ಆದರೆ ಇಲ್ಲಿ ಸಮರ್ಪಕ ವಾಹನ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವುದು ಸಾರ್ವಜನಿಕರಿಗೆ ತೊಡಕಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿರುವುದರಿಂದ ಜನರು ಕಿರಿ ಕಿರಿ ಅನುಭವಿಸುವಂತಾಗಿದೆ.

ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯಹೆದ್ದಾರಿ ಕಡಬ ಪೇಟೆಯ ಮೂಲಕವೇ ಹಾದುಹೋಗುತ್ತಿದೆ. ಪೇಟೆಯಲ್ಲಿ ವಾಹನಗಳು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಆಟೋಗಳು, ಬಾಡಿಗೆ ಜೀಪು, ಪಿಕಪ್‌, ಮಿನಿಬಸ್‌ಗಳು, ಟೆಂಪೋ ಟ್ರಾಕ್ಸ್‌ಗಳು ರಸ್ತೆಯ ಪಕ್ಕದಲ್ಲಿಯೇ ನಿಲುಗಡೆಯಾಗುವುದರಿಂದ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ವ್ಯಾಪಾರ ವ್ಯವಹಾರಗಳಿಗಾಗಿ ಪೇಟೆಗೆ ಬರುವ ಜನರಿಗೂ ಇಲ್ಲಿ ವಾಹನ ನಿಲ್ಲಿಸಲು ಸೂಕ್ತ ಜಾಗ ಇಲ್ಲ. ಪಂಚಾಯತ್‌ ನವರು ಪೇಟೆಯಲ್ಲಿ ಪಾರ್ಕಿಂಗ್‌ ಗಾಗಿ ರಸ್ತೆಯ ಪಕ್ಕದ ಗುಡ್ಡ ಅಗೆದು ಮಣ್ಣು ತೆಗೆದರೂ ವ್ಯವಸ್ಥಿತ ಪಾರ್ಕಿಂಗ್‌ ಕಾರ್ಯರೂಪಕ್ಕೆ ಬಂದಿಲ್ಲ. ಪಂಚಾಯತ್‌, ಕಂದಾಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಯೋಜನೆ ರೂಪಿಸಿ ಕಡಬದ ಪಾರ್ಕಿಂಗ್‌ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.

ನನಸಾಗದ ಸುಸಜ್ಜಿತ ಪಾರ್ಕಿಂಗ್‌ ಕನಸು
ಪಂಚಾಯತ್‌ ವತಿಯಿಂದ ಕಡಬದಲ್ಲಿ ಶುಲ್ಕ ಸಹಿತ ಸುಸಜ್ಜಿತ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಮುಂದಾಗಿ ಹಲವು ವರ್ಷಗಳೇ ಕಳೆದವು. ಅದಕ್ಕಾಗಿ ಸೈಂಟ್‌ ಜೋಕಿಮ್ಸ್‌ ಚರ್ಚ್‌ ಮುಂಭಾಗದಲ್ಲಿ ರಸ್ತೆಯ ಪಕ್ಕ 2 ಕಡೆ ಹಾಗೂ ದೈವಗಳ ಮಾಡದ ಬಳಿ ರಸ್ತೆಯ ಪಕ್ಕದ ಮಣ್ಣಿನ ದಿಣ್ಣೆಯನ್ನು  ಲಕ್ಷಾಂತರ ರೂ. ಪಂಚಾಯತ್‌ ಅನುದಾನ ವ್ಯಯಿಸಿ ಸಮತಟ್ಟುಗೊಳಿಸಲಾಗಿತ್ತು. ಸುಸಜ್ಜಿತ ಪಾರ್ಕಿಂಗ್‌, ಶೌಚಾಲಯ, ಕುಡಿಯುವ ನೀರು, ಸಣ್ಣ ಕೈತೋಟ ಹೀಗೆ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಸಂಸದರು, ಶಾಸಕರು, ಜಿ.ಪಂ.ಹಾಗೂ ತಾ.ಪಂ. ಅನುದಾನವನ್ನು ಕ್ರೋಡೀಕರಿಸಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಪಾರ್ಕಿಂಗ್‌ ಸ್ಥಳವನ್ನು ಜಿಲ್ಲಾಧಿಕಾರಿಗಳು ನೋಟಿಫಿಕೇಶನ್‌ ಮಾಡಬೇಕಿರುವುದರಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ಕಡಬ ಆರಕ್ಷಕ ಉಪನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ವರದಿ ಕೂಡ ನೀಡಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಯಾವುದೇ ಕೆಲಸ ಆಗಿಲ್ಲ.

ಶೀಘ್ರ ಕ್ರಮ
ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಗಾಗಿ ಜಾಗ ಗುರುತಿಸಿ ಪಂಚಾಯತ್‌ ವತಿಯಿಂದ ಸಮತಟ್ಟು ಮಾಡಿಸಿದೆ. ಪಾರ್ಕಿಂಗ್‌ ವಲಯ ಎಂದು ನೋಟಿಫಿಕೇಶನ್‌ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ  ಸ್ಥಳ ಪರಿಶೀಲನೆ ಕೂಡ ಆಗಿದೆ. ಆದರೆ ಅಲ್ಲಿಂದ ಅಂತಿಮ ಆದೇಶ ಬಂದಿಲ್ಲ. ಈ ಬಗ್ಗೆ ಮತ್ತೆ ಜಿಲ್ಲಾಧಿಕಾರಿಗಳಿಗೆ ಬರೆದುಕೊಳ್ಳಲಾಗುವುದು. ಶೀಘ್ರ ಆರ್‌ಟಿಒ, ಕಂದಾಯ, ಪೊಲೀಸ್‌, ವಾಹನ ಚಾಲಕ -ಮಾಲಕರು ಹಾಗೂ ವರ್ತಕರ ಸಭೆ ಕರೆದು ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
– ಚೆನ್ನಪ್ಪ ಗೌಡ ಕಜೆಮೂಲೆ, ಪಿಡಿಒ, ಕಡಬ ಗ್ರಾ.ಪಂ.

ಉತ್ತಮ ವ್ಯವಸ್ಥೆ ಬೇಕು
ಕಡಬ ಪೇಟೆಯಲ್ಲಿ ಸೂಕ್ತ ವಾಹನ ಪಾರ್ಕಿಂಗ್‌ ವ್ಯವಸ್ಥೆ ಆಗಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಹಲವಾರು ಬಾರಿ ಈ ಬಗ್ಗೆ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಿಲ್ಲ. ಒಂದು ಪೇಟೆಯಲ್ಲಿ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯಬೇಕಿದ್ದರೆ ಸಮರ್ಪಕವಾದ ವಾಹನ ಪಾರ್ಕಿಂಗ್‌ ವ್ಯವಸ್ಥೆ ಅತ್ಯವಶ್ಯಕ. ಗ್ರಾಹಕರಿಗೆ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಹೋದರೆ ಅದರಿಂದ ವ್ಯಾಪಾರಕ್ಕೂ ಹೊಡೆತ ಇದೆ. ಆದುದರಿಂದ ಪಂಚಾಯತ್‌ ಹಾಗೂ ಸಂಬಂಧಪಟ್ಟ ಇಲಾಖೆಗಳು ಸೇರಿಕೊಂಡು ಕಡಬ ಪೇಟೆಯಲ್ಲಿ ಉತ್ತಮ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು.
– ಸುಜಿತ್‌ ಪಿ.ಕೆ. ಕಾರ್ಯದರ್ಶಿ, ಕಡಬ ವರ್ತಕ ಸಂಘ

ವರದಿ ಸಲ್ಲಿಕೆ
ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಪಂಚಾಯತ್‌ನಿಂದ ವಾಹನ ಪಾರ್ಕಿಂಗ್‌ ಗಾಗಿ ಗುರುತಿಸಲ್ಪಟ್ಟ ಜಾಗಗಳ ಬಗ್ಗೆ ಜಿಲ್ಲಾಧಿಕಾರಿಯವರು ವರದಿ ಕೇಳಿದ್ದ ಹಿನ್ನೆಲೆಯಲ್ಲಿ ಠಾಣೆಯ ವತಿಯಿಂದ ಸ್ಥಳ ಪರಿಶೀಲನೆ ನಡೆಸಿ ಈ ಹಿಂದೇಯೇ ವರದಿ ಸಲ್ಲಿಸಲಾಗಿದೆ. ಆದರೆ ಆ ಬಳಿಕ ಪ್ರಕ್ರಿಯೆ ಯಾವ ಹಂತ ತಲುಪಿದೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ನಮಗೂ ಪಾರ್ಕಿಂಗ್‌ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಉದ್ದೇಶಿತ ಪಾರ್ಕಿಂಗ್‌ ವ್ಯವಸ್ಥೆ  ಶೀಘ್ರ ಅನುಷ್ಠಾನಗೊಂಡರೆ ಒಳ್ಳೆಯದು.
– ಪ್ರಕಾಶ್‌ ದೇವಾಡಿಗ, ಕಡಬ ಆರಕ್ಷಕ ಉಪನಿರೀಕ್ಷಕರು.

— ನಾಗರಾಜ್‌ ಎನ್‌.ಕೆ. ಕಡಬ

ಟಾಪ್ ನ್ಯೂಸ್

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.