ಭಾರತೀಯ ಸಂಗೀತಕ್ಕೆ ಅಪಾಯವಿಲ್ಲ: ಡಾ| ಹೆಗ್ಗಡೆ

Team Udayavani, Dec 7, 2019, 5:33 AM IST

ಮಂಗಳೂರು: ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಕದ್ರೀಸ್‌ ಕೀಸ್‌ ಸ್ಟುಡಿಯೋಸ್‌ ಮತ್ತು ದ. ಕ. ಜಿಲ್ಲಾಡಳಿತ ವತಿಯಿಂದ ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್‌ ಹುಟ್ಟುಹಬ್ಬದ ಅಂಗವಾಗಿ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ “ಕದ್ರಿ ಸಂಗೀತ ಸೌರಭ’ ಸಂಗೀತ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೇಲ್ನೋಟಕ್ಕೆ ಭಾರತೀಯ ಸಂಗೀತ ಅಪಾಯದಲ್ಲಿದೆ ಎಂದು ಕಂಡುಬರುತ್ತದೆ. ಆದರೆ ಎಂದಿಗೂ ಹಾಗಿಲ್ಲ. ಕದ್ರಿಯವರು ತನ್ನ ಆದರ್ಶ ಗಳನ್ನು ಮುಂದಿನ ತಲೆಮಾರಿಗೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು.

ಡಾ| ಮೋಹನ ಆಳ್ವ ಮಾತನಾಡಿ, ಸ್ಯಾಕೊÕàಫೋನ್‌ ವಾದನವನ್ನು ಭಾರತೀಯ ಪರಂಪರೆಗೆ ಸೇರಿಸಿದ್ದು ಡಾ| ಕದ್ರಿಯವರ ಹೆಗ್ಗಳಿಕೆ. ಅವರು ಸಂಗೀತ ಚಕ್ರವರ್ತಿ ಎಂದರು.ಶಾಸಕ ವೇದವ್ಯಾಸ ಕಾಮತ್‌, ಕದ್ರಿ ಅವರ ಗುರು ಪದ್ಮಶ್ರೀ ಡಾ| ಟಿ.ವಿ. ಗೋಪಾಲಕೃಷ್ಣನ್‌, ಲಂಡನ್‌ನ ಟ್ರಿನಿಟಿಕಾಲೇಜು ಆಫ್‌ ಮ್ಯೂಸಿಕ್‌ನ ಕ್ಯಾಂಡಿಡಾ ಕಾನೊಲಿ, ಮಂಗಳೂರುಸ್ಮಾರ್ಟ್‌ಸಿಟಿ ಲಿ. ಕಂಪೆನಿಯ ಆಡಳಿತ ನಿರ್ದೇಶಕ ಮೊಹಮ್ಮದ್‌ ನಜೀರ್‌,ಸಿದ್ಧ ಗುರುಪೀಠದ ಗೋಮತಿ ದಾಸ್‌, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್‌, ಅಂಬಿಕಾ ಮೋಹನ್‌, ನಿತ್ಯಾನಂದ ರಾವ್‌ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ