ವೃದ್ಧೆ ಮೇಲೆ ಮಗ, ಮೊಮ್ಮಗನ ಅಮಾನುಷ ಹಲ್ಲೆ: ಆರೋಪಿಗಳು ವಶಕ್ಕೆ ; ಸ್ವಯಂಪ್ರೇರಿತ ದೂರು ದಾಖಲು

Team Udayavani, Jul 17, 2020, 9:07 PM IST

ವೃದ್ಧೆ ಮೇಲೆ ಮಗ, ಮೊಮ್ಮಗನ ಅಮಾನುಷ ಹಲ್ಲೆ: ಆರೋಪಿಗಳು ವಶಕ್ಕೆ ; ಸ್ವಯಂಪ್ರೇರಿತ ದೂರು ದಾಖಲು

ಮಗ ಮತ್ತು ಮೊಮ್ಮಗನಿಂದ ಹಲ್ಲೆಗೊಳಗಾದ ಅಜ್ಜಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸ್ಥಳಿಯರು.

ಬೆಳ್ತಂಗಡಿ: ಅನಾರೋಗ್ಯ ಪೀಡಿತ ವಯೋವೃದ್ಧೆ ಮೇಲೆ ಮಗ ಮತ್ತು ಮೊಮ್ಮಗ ಹಿಂಸಾತ್ಮಕವಾಗಿ ಹಲ್ಲೆ ನಡೆಸಿರುವ ವಿಡಿಯೋವೊಂದು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ವಿಚಾರವಾಗಿ ಆರೋಪಿಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.

ಸವಣಾಲು ಗ್ರಾಮದ ಹಲಸಿನಕಟ್ಟೆ 5 ಸೆನ್ಸ್‌ ನಿವಾಸಿ ವಯೋವೃದ್ಧೆ ಅಪ್ಪಿ ಶೆಡ್ತಿ (70) ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಾದ ಮಗ ಶ್ರೀನಿವಾಸ ಶೆಟ್ಟಿ, ಮೊಮ್ಮಗ ಪ್ರದೀಪ ಶೆಟ್ಟಿ ಅವರನ್ನು ಬಂಧಿಸಲಾಗಿದೆ.

ಘಟನೆ ವಿವರ
ಸೂಲಗಿತ್ತಿಯಾಗಿದ್ದ ವಯೋವೃದ್ಧೆ ಅಪ್ಪಿ ಶೆಡ್ತಿ ಸವಣಾಲು ಗ್ರಾಮದಲ್ಲಿ ಚಿರಪರಿಚಿತೆ. ಸುತ್ತಮುತ್ತ ಹಳ್ಳಿಯಲ್ಲಿ ಸೀಮಿತ ಆಸ್ಪತ್ರೆಗಳಿದ್ದ ಕಾಲದಿಂದ ಹೆರಿಗೆಗೆ ಪ್ರಕ್ರಿಯೆ ನಡೆಸುತ್ತಿದ್ದರು. ಸುಮಾರು 500ಕ್ಕೂ ಮಿಕ್ಕಿ ಹೆರಿಗೆ ಮಾಡಿಸಿದ ಈ ಅಜ್ಜಿಗೆ ಕಳೆದ 3 ವರ್ಷಗಳಿಂದ ಮೈ ಹುಷಾರಿಲ್ಲದ ಕಾರಣದಿಂದ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದಾರೆ.

ಮಲಗಿದ್ದ ಅಜ್ಜಿಗೆ ಮಗ ಹಾಗೂ ಮೊಮ್ಮಗ ಮದ್ಯ ಸೇವಿಸಿ ಕಳೆದ ಮೂರು ದಿನಗಳ ಹಿಂದೆ ಹಲ್ಲೆ ನಡೆಸಿದ್ದಲ್ಲದೆ ಎಳೆದೊಯ್ದು ಎತ್ತಿ ನೆಲಕ್ಕೆ ಅಪ್ಪಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಈ ವಿಚಾರವಾಗಿ ಖಂಡನೆಗಳು ಬಂದಿದ್ದು, ಪೊಲೀಸರಿಗೂ ಮಾಹಿತಿ ತಿಳಿದ ತತ್‌ಕ್ಷಣ ಬೆಳ್ತಂಗಡಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ. ಹಾಗೂ ಎಸ್‌.ಐ. ನಂದಕುಮಾರ್‌ ಆರೋಪಿಗಳನ್ನು ಬಂಧಿಸಿ ಕಲಂ: 323, 504 ಐಪಿಸಿ ಮತ್ತು 24 ಕಾಯ್ದೆ 2007ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಅಜ್ಜಿ ಆಸ್ಪತ್ರೆಗೆ
ಮಗ ಮತ್ತು ಮೊಮ್ಮಗನಿಂದ ಹಲ್ಲೆಗೊಳಗಾದ ಅಜ್ಜಿಯನ್ನು ಪೊಲೀಸರ ಸೂಚನೆಯಂತೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಲಾಗಿದೆ.

ಟಾಪ್ ನ್ಯೂಸ್

ಜೈವಿಕ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದರು ; ರಾವತ್‌ ಕೊನೆ ಭಾಷಣ

ಜೈವಿಕ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದರು ; ರಾವತ್‌ ಕೊನೆ ಭಾಷಣ

ಬದುಕಿ ಉಳಿದ ಏಕೈಕ ಅಧಿಕಾರಿ ವರುಣ್‌ ಸಿಂಗ್‌

ಬದುಕಿ ಉಳಿದ ಏಕೈಕ ಅಧಿಕಾರಿ ವರುಣ್‌ ಸಿಂಗ್‌

ಆ ಮೂವತ್ತು ನಿಮಿಷ.. ಸ್ಥಳೀಯರ ಕಣ್ಣೆದುರೇ ಸುಟ್ಟು ಕರಕಲಾದ ಸೇನಾನಿಗಳು

ಆ ಮೂವತ್ತು ನಿಮಿಷ.. ಸ್ಥಳೀಯರ ಕಣ್ಣೆದುರೇ ಸುಟ್ಟು ಕರಕಲಾದ ಸೇನಾನಿಗಳು

ತೆನೆ ಮತದಾರರನ್ನು ಸೆಳೆಯಲು ಡಿಕೆಶಿ ಕಸರತ್ತು

ತೆನೆ ಮತದಾರರನ್ನು ಸೆಳೆಯಲು ಡಿಕೆಶಿ ಕಸರತ್ತು

ಜನವರಿಯಲ್ಲಿ ಯುಎಇಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ?

ಜನವರಿಯಲ್ಲಿ ಯುಎಇಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ?

ಸೇನಾ ಹೆಲಿಕಾಪ್ಟರ್‌ ಅಪಘಾತ: ಸಮರ ಸೇನಾನಿ ಜ| ರಾವತ್‌ ಅಮರ

ಸೇನಾ ಹೆಲಿಕಾಪ್ಟರ್‌ ಅಪಘಾತ: ಸಮರ ಸೇನಾನಿ ಜ| ರಾವತ್‌ ಅಮರ

ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ

ಏಕದಿನ ನಾಯಕತ್ವ , ಟೆಸ್ಟ್‌ ಉಪನಾಯಕತ್ವ ರೋಹಿತ್‌ ಪಾಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಲಕನ ಬದುಕು ಬದಲಿಸಿದ ಹಂದಿ ಸಾಕಣೆ

ಚಾಲಕನ ಬದುಕು ಬದಲಿಸಿದ ಹಂದಿ ಸಾಕಣೆ

ವಿಟ್ಲ ಹೋಬಳಿಯ ಹೊರೆ ಇಳಿದು ಅಭಿವೃದ್ಧಿಯಾಗಲಿ

ವಿಟ್ಲ ಹೋಬಳಿಯ ಹೊರೆ ಇಳಿದು ಅಭಿವೃದ್ಧಿಯಾಗಲಿ

ಕುಕ್ಕೆ: ಇಂದು ಪಂಚಮಿ ರಥೋತ್ಸವ; ತೈಲಾಭ್ಯಂಜನ

ಕುಕ್ಕೆ: ಇಂದು ಪಂಚಮಿ ರಥೋತ್ಸವ; ತೈಲಾಭ್ಯಂಜನ

ಹಣಕಾಸಿನ ಕೊರತೆ: ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬ

ಹಣಕಾಸಿನ ಕೊರತೆ: ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ಜೈವಿಕ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದರು ; ರಾವತ್‌ ಕೊನೆ ಭಾಷಣ

ಜೈವಿಕ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದರು ; ರಾವತ್‌ ಕೊನೆ ಭಾಷಣ

ಬದುಕಿ ಉಳಿದ ಏಕೈಕ ಅಧಿಕಾರಿ ವರುಣ್‌ ಸಿಂಗ್‌

ಬದುಕಿ ಉಳಿದ ಏಕೈಕ ಅಧಿಕಾರಿ ವರುಣ್‌ ಸಿಂಗ್‌

ಆ ಮೂವತ್ತು ನಿಮಿಷ.. ಸ್ಥಳೀಯರ ಕಣ್ಣೆದುರೇ ಸುಟ್ಟು ಕರಕಲಾದ ಸೇನಾನಿಗಳು

ಆ ಮೂವತ್ತು ನಿಮಿಷ.. ಸ್ಥಳೀಯರ ಕಣ್ಣೆದುರೇ ಸುಟ್ಟು ಕರಕಲಾದ ಸೇನಾನಿಗಳು

ತೆನೆ ಮತದಾರರನ್ನು ಸೆಳೆಯಲು ಡಿಕೆಶಿ ಕಸರತ್ತು

ತೆನೆ ಮತದಾರರನ್ನು ಸೆಳೆಯಲು ಡಿಕೆಶಿ ಕಸರತ್ತು

ಜನವರಿಯಲ್ಲಿ ಯುಎಇಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ?

ಜನವರಿಯಲ್ಲಿ ಯುಎಇಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.