Udayavni Special

ಯಶಸ್ವಿ ಅಸ್ಥಿಮಜ್ಜೆ ಕಸಿ ವಿಧಾನ ಶಸ್ತ್ರಚಿಕಿತ್ಸ


Team Udayavani, Jul 19, 2018, 2:30 PM IST

ks-hgde.png

ಉಳ್ಳಾಲ: ರಕ್ತ ಕ್ಯಾನ್ಸರ್‌ (ಮಲ್ಟಿಪಲ್‌ ಮೈಲೋಮಾ) ರೋಗಿಗೆ ಯಶಸ್ವಿ ಅಸ್ಥಿಮಜ್ಜೆ ಕಸಿ ವಿಧಾನವನ್ನು ಪ್ರಥಮ ಬಾರಿಗೆ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಲೀಲಾ ನಾರಾಯಣ ಶೆಟ್ಟಿ ಕ್ಯಾನ್ಸರ್‌ ಕೇಂದ್ರದ ಮೆಡಿಕಲ್‌ ಆಂಕೊಲಾಜಿ ತಜ್ಞ ಡಾ| ವಿಜೀತ್‌ ಶೆಟ್ಟಿ ಹಾಗೂ ಅವರ ನೇತೃತ್ವದ ವೈದ್ಯಕೀಯ ತಂಡ ಅಟೋಲೋಗಸ್‌ ಕಾಂಡಕೋಶ ಕಸಿಯನ್ನು ಯಶಸ್ವಿಯಾಗಿ ನಡೆಸಿತು.

ಬೆಳ್ತಂಗಡಿ ತಾಲೂಕಿನ 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೂರು ವರ್ಷಗಳಿಂದ ತೀವ್ರ ಬೆನ್ನುನೋವು ಮತ್ತು ರಕ್ತಹೀನತೆ ಯಿಂದ ಬಳಲು ತ್ತಿದ್ದು, ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ ಹಲವು ಬಾರಿ ತಪಾಸಣೆ ನಡೆಸಿದಾಗ ಅವರಿಗೆ ರಕ್ತ ಕ್ಯಾನ್ಸರ್‌(ಮಲ್ಟಿಪಲ್‌ ಮೈಲೋಮಾ) ಕಾಯಿಲೆ ಇರುವು ದಾಗಿ ಪತ್ತೆಯಾಯಿತು. ನಿಟ್ಟೆ ವಿವಿ ಸಹ ಕುಲಾಧಿಪತಿ ಪ್ರೊ| ಡಾ| ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಅಟೊಲೋಗಸ್‌ ಎಂಬುದು ಮಲ್ಟಿಪಲ್‌ ಮೈಲೋಮಾ ಕಾಯಿಲೆಗೆ ಸುಧಾರಿತ ಚಿಕಿತ್ಸಾ ಕಾರ್ಯ ವಿಧಾನವಾಗಿದೆ. ಇಂತಹ ಸುಧಾರಿತ ಕಾರ್ಯವಿಧಾನ ಬೆಂಗಳೂರಿನ ಕ್ಯಾನ್ಸರ್‌ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದು, ಈಗ ನಮ್ಮ ಆಸ್ಪತ್ರೆಯಲ್ಲಿಯೂ ಈ ಸುಧಾರಿತ ಚಿಕಿತ್ಸಾ ವಿಧಾನ ಕಂಡುಹಿಡಿದಿರುವುದು ಶ್ಲಾಘನೀಯ ಎಂದರು.

ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಡಾ| ಸತೀಶ್‌ ಕುಮಾರ್‌ ಭಂಡಾರಿ, ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯ ಡೀನ್‌ ಪ್ರೊ| ಡಾ| ಪಿ.ಎಸ್‌. ಪ್ರಕಾಶ್‌, ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್‌ ಡಾ| ಶಿವಕುಮಾರ್‌ ಹಿರೇಮ, ನಿರ್ವಹಣೆ ವೈಸ್‌ಡಿನ್‌ ಡಾ| ಜಯಪ್ರಕಾಶ್‌ ಶೆಟ್ಟಿ, ಕ್ಷೇಮದ ರೇಡಿಯೇಷನ್‌ ಅಂಕೊಲಾಜಿಯ ಮುಖ್ಯಸ್ಥ ಪ್ರೊ| ಡಾ| ಜಯರಾಮ್‌ ಶೆಟ್ಟಿ ಉಪಸ್ಥಿತರಿದ್ದರು.

ಅಟೊಲೋಗಸ್‌ ಕಾರ್ಯವಿಧಾನದಲ್ಲಿ ಮೊದಲ ಹಂತದಲ್ಲಿ ಬಾಹ್ಯ ರಕ್ತದ ಪೆರಿಫೆರಲ್‌ ಕಾಂಡಕೋಶಗಳನ್ನು ಸಂಗ್ರಹಿಸಿ, ಎರಡನೆ ಹಂತದಲ್ಲಿ ರೋಗಿಯಲ್ಲಿನ ಮಾರಣಾಂತಿಕ ಕೋಶಗಳನ್ನು ನಿರ್ಮೂಲನೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಕೀಮೊ ಥೆರಪಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಮೂರನೇ ಹಂತದಲ್ಲಿ ರೋಗಿಯಲ್ಲಿನ ಮಾರ
ಣಾಂತಿಕ ಕೋಶಗಳು ಮತ್ತೆ ಸಾಮಾನ್ಯ ಕೋಶಗಳಾಗಿ ಪರಿವರ್ತಿಸುವಂತೆ ನೋಡಿ ಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ರೋಗಿಗೆ ಸೋಂಕು ತಗುಲದ ಹಾಗೇ ಅತ್ಯಂತ ಸೂಕ್ಷ್ಮ ನಿಗಾ ಘಟಕದಲ್ಲಿ ಇಡಲಾಗುತ್ತದೆ. ಇಂತಹ ಯಶಸ್ವಿ ಚಿಕಿತ್ಸೆಗೆ ನಮ್ಮ ವೈದ್ಯರ ತಂಡದ ಸಹಕಾರದಿಂದ ಸಾಧ್ಯವಾಗಿದೆ.
 ಡಾ| ವಿಜೀತ್‌ ಶೆಟ್ಟಿ , ಕೆ.ಎಸ್‌. ಹೆಗ್ಡೆ  ಆಸ್ಪತ್ರೆಯ  ಆಂಕೊಲಾಜಿ ತಜ್ಞ
 

ಟಾಪ್ ನ್ಯೂಸ್

ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ

ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ

ಯುಎಇ ಉದ್ಯಮಿಗಳಿಂದ ರಾಜ್ಯದಲ್ಲಿ ಭಾರೀ ಹೂಡಿಕೆ: ಅಶ್ವತ್ಥನಾರಾಯಣ

ಯುಎಇ ಉದ್ಯಮಿಗಳಿಂದ ರಾಜ್ಯದಲ್ಲಿ ಭಾರೀ ಹೂಡಿಕೆ: ಅಶ್ವತ್ಥನಾರಾಯಣ

FB name change

ಫೇಸ್ ಬುಕ್ ಕುರಿತು ಪ್ರಮುಖ ನಿರ್ಧಾರ ಪ್ರಕಟಿಸಿದ ಜೂಕರ್‌ಬರ್ಗ್‌..!

bundh

ಆಸ್ಪತ್ರೆ ಹೋರಾಟ ಸಮಿತಿಯಿಂದ 22 ರಂದು ಶೃಂಗೇರಿ ಬಂದ್‌ ಕರೆ

ಕಾಂಗ್ರೆಸ್‌ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಹಾಲಪ್ಪ ಆಚಾರ್

ಕಾಂಗ್ರೆಸ್‌ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಹಾಲಪ್ಪ ಆಚಾರ್

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 456 ಅಂಕ ಕುಸಿತ, 18,266 ಗಡಿ ತಲುಪಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 456 ಅಂಕ ಕುಸಿತ, 18,266 ಗಡಿ ತಲುಪಿದ ನಿಫ್ಟಿ

ಡ್ರಗ್ಸ್ ಪ್ರಕರಣ

ಬಾಲಿವುಡ್ ಮಾದಕ ಜಾಲದ ಜಾತಕ : ಆರ್ಯನ್‌ ಮಾತ್ರವಲ್ಲ..!





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಚೇತರಿಕೆ ಹಾದಿಯಲ್ಲಿ ಕರಾವಳಿ ಜವುಳಿ ಉದ್ಯಮ

ಚೇತರಿಕೆ ಹಾದಿಯಲ್ಲಿ ಕರಾವಳಿ ಜವುಳಿ ಉದ್ಯಮ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

19clk01p

ವೀರಯೋಧರ ಕಾರ್ಯ ಸದಾಸ್ಮರಿಸೋಣ: ಬಸವರೆಡ್ಡಿ

ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ

ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

19-ctd-4

ಮುಂದಿನ ಶರಣ ಸಂಸ್ಕೃತಿ ಉತ್ಸವದ ಗೌರವ ಅಧ್ಯಕ್ಷರಾಗಿ ವನಶ್ರೀ ಮಠದ ಸ್ವಾಮೀಜಿ ಆಯ್ಕೆ

ಯುವಸಮೂಹದ ಮೇಲಿದೆ ದೇಶದ ಜವಾಬ್ದಾರಿ: ನ್ಯಾ| ನಾಗೇಶ್‌

ಯುವಸಮೂಹದ ಮೇಲಿದೆ ದೇಶದ ಜವಾಬ್ದಾರಿ: ನ್ಯಾ| ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.