Udayavni Special

ನಾಯಿ, ಮಂಗಗಳ ಪಾಲಾದ ಮಂಜುಗಡ್ಡೆ

ಆಡಳಿತ ವ್ಯವಸ್ಥೆ, ಅಂಗಡಿಯವರ ನಿರ್ಲಕ್ಷ್ಯ: ಸಾರ್ವಜನಿಕ ಆಕ್ರೋಶ

Team Udayavani, Feb 15, 2020, 7:29 AM IST

1402RJH7

ನಗರ: ಉಪ್ಪಿನಂಗಡಿ-ಪುತ್ತೂರು ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಕಬ್ಬಿನ ಹಾಲಿನ ಅಂಗಡಿ ಬಳಿ ಜ್ಯೂಸ್‌ಗೆ ಬಳಕೆ ಮಾಡುವ ಐಸ್‌ ಕ್ಯೂಬ್‌ ಅನ್ನು ನಾಯಿ, ಮಂಗಗಳು ನೆಕ್ಕುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ಸಂಬಂಧಿತ ಆಡಳಿತ ವ್ಯವಸ್ಥೆ, ಅಂಗಡಿಯವರ ನಿರ್ಲಕ್ಷ್ಯದ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.

ಪ್ರಸ್ತುತ ವಿಶ್ವಾದ್ಯಂತ ವಿವಿಧ ರೀತಿಯ ಮಾರಣಾಂತಿಕ ಕಾಯಿಲೆಗಳು ಹರಡುತ್ತಿವೆ. ಇವುಗಳಿಗೆ ಮುಖ್ಯವಾಗಿ ಪ್ರಾಣಿಗಳು ಕಾರಣವಾಗುತ್ತಿವೆ. ಇದನ್ನು ಎದುರಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಬೀದಿ ಬದಿ ನಡೆಯುವ ವ್ಯಾಪಾರಗಳಲ್ಲಿ ಸ್ವತ್ಛತೆ ಸೇರಿದಂತೆ ನಿರ್ಲಕ್ಷ್ಯ ವಹಿಸಲಾಗುತ್ತಿರುವುದನ್ನು ಕಂಡೂ ಆರೋಗ್ಯ ಇಲಾಖೆ, ಆಹಾರ ಇಲಾಖೆ, ರಸ್ತೆಗೆ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸುತ್ತಿವೆ.

ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯ ಜ್ಯೂಸ್‌ ಮಾರಾಟದ ಅಂಗಡಿಯೊಂದರಲ್ಲಿ ನಾಯಿ ಹಾಗೂ ಮಂಗಗಳು ಮಂಜುಗಡ್ಡೆಯನ್ನೂ ನೆಕ್ಕುತ್ತಿರುವ ಈ ವಿಡಿಯೋ ವೈರಲ್‌ ಆಗಿದೆ. ಇದು ತಳ್ಳುಗಾಡಿ ಶೈಲಿಯ ಕಬ್ಬಿನ ಹಾಲು ಮಾರಾಟದ ಅಂಗಡಿಯಾಗಿದ್ದು, ಇದಕ್ಕೆ ಸ್ಥಳೀಯಾಡಳಿತದ ಪರವಾನಿಗೆ ಇದೆಯೇ ಎನ್ನುವುದು ಖಚಿತಗೊಂಡಿಲ್ಲ.

ಅಂಗಡಿಯಲ್ಲಿನ ಮಂಜುಗಡ್ಡೆ ನೀಲಿ ಬಣ್ಣದ ಟಾರ್ಪಾಲ್‌ನಲ್ಲಿ ಮಡಚಿ ನೆಲದಲ್ಲಿಯೇ ಇಡಲಾಗಿದೆ. ಆ ಟಾರ್ಪಾಲ್‌ ಅನ್ನು ಬಿಡಿಸಿ ನಾಯಿ ಹಾಗೂ ಮಂಗಗಳು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ನೆಕ್ಕುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಇದೇ ಮಂಜುಗಡ್ಡೆಯನ್ನು ಕಬ್ಬಿನ ಹಾಲು ತಯಾರಿಸಲು ಬಳಸಲಾಗುತ್ತಿದೆ ಎಂಬ ಗುರುತರ ಆರೋಪವನ್ನು ಸ್ಥಳೀಯ ನಿವಾಸಿಗಳು ಮಾಡುತ್ತಿದ್ದಾರೆ. ಮಂಜುಗಡ್ಡೆಯನ್ನು ಜಾಗರೂಕತೆಯಿಂದ ಸಂರಕ್ಷಿಸಬೇಕಾದ ಸ್ಟಾಲ್‌ನ ಮಾಲಕರ ಬೇಜವಾಬ್ದಾರಿ ಇಲ್ಲಿ ಪ್ರಮುಖವಾಗಿ ಕಾಣಿಸುತ್ತಿದೆ.

ಈ ಪರಿಸರದಲ್ಲಿ ಮಂಗಗಳ ಹಾವಳಿ ಅತಿಯಾಗಿದ್ದು, ಪರಿಸರದಲ್ಲಿರುವ ಜ್ಯೂಸ್‌, ತರಕಾರಿ ಹಾಗೂ ಹಣ್ಣುಹಂಪಲು ಮಾರಾಟದ ಅಂಗಡಿಗಳಿಗೆ ಮಂಗಗಳು ದಾಳಿ ಮಾಡುತ್ತಿರುವುದು ಮಾಮೂಲಾಗಿದೆ. ಈ ಮಧ್ಯೆಯೂ ಅಂಗಡಿಯವರ ನಿರ್ಲಕ್ಷ್ಯ ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಈ ನಿರ್ಲಕ್ಷ್ಯದ ಕುರಿತು ಸಾರ್ವಜನಿಕರ ಮೂಲಕ ಸ್ಥಳೀಯಾಡಳಿತ ಗ್ರಾ.ಪಂ. ಆಡಳಿತ, ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಸಂಬಂಧಪಟ್ಟ ಉಳಿದ ಇಲಾಖೆಯೂ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎನ್ನುವುದು ಸಾರ್ವಜನಿಕ ಆಗ್ರಹ.

ಅಧಿಕಾರಿಗಳು ಗಮನಹರಿಸಲಿ
ವಿವಿಧ ಮಾರಣಾಂತಿಕ ರೋಗಗಳ ಕಾರಣಕ್ಕೆ ಜನರು ಭೀತರಾಗಿದ್ದಾರೆ. ಆದರೆ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದವರು ನಿರ್ಲಕ್ಷ್ಯ ಹಾಗೂ ನಿರ್ಭೀತಿಯ ವ್ಯಾಪಾರ ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.
– ದಿನಕರ ಬಂಗೇರ, ಸ್ಥಳೀಯ ನಿವಾಸಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ಯಾಂಕ್ ದಾಖಲೆ ಕೇಳಿ ಹಣ ಗುಳುಂ ಮಾಡುವ ದಂಧೆ…ಎಚ್ಚರ.!

ಬ್ಯಾಂಕ್ ದಾಖಲೆ ಕೇಳಿ ಹಣ ಗುಳುಂ ಮಾಡುವ ದಂಧೆ…ಎಚ್ಚರ.!

ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ

ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ

ಒಟಿಪಿ ಇಲ್ಲದೆ ಪಡಿತರ ವಿತರಿಸಿ: ಕೋಟ ಮರುಆದೇಶ

ಒಟಿಪಿ ಇಲ್ಲದೆ ಪಡಿತರ ವಿತರಿಸಿ: ಕೋಟ ಮರುಆದೇಶ

ಮೊಬೈಲ್‌ ಕರೆನ್ಸಿ ಖಾಲಿ: ಬಳಕೆದಾರರ ಫ‌ಜೀತಿ!

ಮೊಬೈಲ್‌ ಕರೆನ್ಸಿ ಖಾಲಿ: ಬಳಕೆದಾರರ ಫ‌ಜೀತಿ!

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

07-April-26

ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸಿ

07-April-25

ಹಾಲು ವಿತರಣೆಗಾಗಿ ಅಧಿಕಾರಿಗಳು-ಸದಸ್ಯರ ತಿಕ್ಕಾಟ

07-April-24

ಗ್ರಾಮಲೆಕ್ಕಾಧಿಕಾರಿಗಳ ಲೊಕೇಶನ್‌ ಪಡೆಯಿರಿ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ

07-April-23

ಕಲ್ಲಂಗಡಿ-ಪಪ್ಪಾಯಿ ಬೆಳೆಗಾರರ ಪರದಾಟ