ನಗರದ ಪಿಂಕಿಗೆ ಪ್ರಥಮ ಸ್ಥಾನ
Team Udayavani, Aug 30, 2018, 11:08 AM IST
ಮಹಾನಗರ: ಪೇಟಾ ಸಂಸ್ಥೆ ನಡೆಸಿದ ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಸ್ಪರ್ಧೆಯಲ್ಲಿ ನಗರದ ಪಿಂಕಿ ಹೆಸರಿನ ನಾಯಿ ಮರಿ ಗೆಲುವು ಪಡೆದಿದೆ. ಅಂತಿಮ ಸುತ್ತಿಗೆ ದೇಶಾದ್ಯಂತ ಆಯ್ಕೆಯಾಗಿರುವ ಹತ್ತು ಶ್ವಾನಗಳನ್ನು ಸೋಲಿಸಿ ಪಿಂಕಿ ಗೆಲುವು ಸಾಧಿಸಿದೆ.
ರಕ್ಷಿಸಲ್ಪಟ್ಟ ಶ್ವಾನಗಳಿಗಾಗಿ ಏಳು ವರ್ಷಗಳಿಂದ ಪೇಟಾ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸ್ಪರ್ಧೆ ಇದಾಗಿದೆ. ಕಳೆದ ವರ್ಷ ಜುಲೈನಲ್ಲಿ ಮಂಗಳಾ ಸ್ಟೇಡಿಯಂ ಬಳಿ ನಿರ್ಮಾಣ ಹಂತದ ಕಟ್ಟಡದೊಳಗೆ ಸಿಲುಕಿದ್ದ ನಾಯಿ ಮರಿಯನ್ನು ರಕ್ಷಿಸಿದ್ದ ಜೀನ್ ಕ್ರಾಸ್ತಾ ಅವರು, ಆ ಮರಿಯನ್ನು ಪ್ರೀತಿಯಿಂದ ಸಾಕಿ, ಸಲಹಿದ್ದರು. ಅಲ್ಲದೆ ಪೇಟಾ ಸಂಸ್ಥೆಯ ಸ್ಪರ್ಧೆಗೆ ಭಾವಚಿತ್ರ ಕಳುಹಿಸಿಕೊಟ್ಟಿದ್ದರು.
ಓಲಿದ ಅದೃಷ್ಟ
ಪೈಕಿ ತೀರ್ಪುಗಾರರು ಹತ್ತು ಚಿತ್ರಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿ, ಆನ್ ಲೈನ್ ಓಟಿಂಗ್ಗೆ ಆಹ್ವಾನಿಸಿದ್ದರು. ಆ. 29ರಂದು ಪ್ರಕಟವಾದ ಫಲಿತಾಂಶದಲ್ಲಿ ಪಿಂಕಿಗೆ ಪ್ರಥಮ ಸ್ಥಾನ ಒಲಿದಿದೆ.
ಪಿಂಕಿಗೆ ಡಾಗ್ಗೀ ಟೀ ಶರ್ಟ್
ಪ್ರಥಮ ಸ್ಥಾನದ ಪ್ರಮಾಣಪತ್ರ, ‘ಶೇ. 100 ದೇಸೀ ಡಾಗ್’ ಡಾಗ್ಗೀ ಟೀ-ಶರ್ಟ್ ಪಿಂಕಿಗೆ ದೊರೆಯಲಿದೆ. ಆಕೆಯ ಒಡತಿ ಜೀನ್ ಕ್ರಾಸ್ತಾ ಅವರಿಗೆ ‘ಮೈ ಡಾಗ್ ಈಸ್ ಎ ರೆಸ್ಕ್ಯೂ ‘ ಟೀ ಶರ್ಟ್ ಹಾಗೂ ಇನ್ಗ್ರೀಡ್ ಇ. ನ್ಯೂಕಿರ್ಕ್ಸ್ ಅವರ ‘ಲೆಟ್ಸ್ ಹ್ಯಾವ್ ಎ ಡಾಗ್ ಪಾರ್ಟಿ’ ಪುಸ್ತಕ ದೊರೆಯಲಿದೆ.