ಪಯಸ್ವಿನಿ ನದಿ ಹರಿವು ವೃದ್ಧಿ

Team Udayavani, Jun 17, 2019, 5:13 AM IST

ಸುಳ್ಯ : ಬಿಸಿಲ ಬೇಗೆಗೆ ಬತ್ತಿದ್ದ ಪಯಸ್ವಿನಿ ನದಿಗೆ ಜೀವಕಳೆ ಬಂದಿದೆ. ಪಯಸ್ವಿನಿ ಒಡಲಲ್ಲಿ ನೀರಿನ ಮಟ್ಟ ಹೆಚ್ಚಿದೆ. ಹರಿವಿನ ಪ್ರಮಾಣ ವೃದ್ಧಿಸಿದೆ. ಕೆಂಬಣ್ಣದ ನೀರು ಹರಿಯುತ್ತಿದೆ.

ಪಯಸ್ವಿನಿ ಉಗಮ ಸ್ಥಳದಲ್ಲಿ ಅಧಿಕ ಮಳೆ ಸುರಿಯುತ್ತಿರುವುದು ಪಯಸ್ವಿನಿ ಹರಿವು ಹೆಚ್ಚಳಕ್ಕೆ ಕಾರಣವಾಗಿತ್ತು.

ಮರಳು ಕಟ್ಟದಿಂದ ಉಕ್ಕಿದ ನೀರು

ನಗರದ ಕುಡಿಯುವ ನೀರಿಗಾಗಿ ನಾಗಪಟ್ಟಣದ ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ನೆಲೆಯಲ್ಲಿ ನಿರ್ಮಿಸಿದ ಮರಳು ಕಟ್ಟದಿಂದ ಹೆಚ್ಚುವರಿ ನೀರು ಕೆಳಭಾಗಕ್ಕೆ ಹರಿದಿದೆ. ಮೇ ತಿಂಗಳಲ್ಲಿ ನಗರಕ್ಕೆ ನೀರಿನ ಅಭಾವ ಕಾಡಿತ್ತು. 2 ದಿನ ಗಳಿಗೊಮ್ಮೆ ನೀರು ಪೂರೈಸಲು ನಗರಾಡಳಿತ ಆದೇಶ ಹೊರಡಿಸಿತ್ತು. ಅಷ್ಟರಲ್ಲೇ ಮಳೆ ಸುರಿದು ಆತಂಕ ದೂರ ಮಾಡಿದೆ.

ಕೆಂಬಣ್ಣದ ನೀರು ಪೂರೈಕೆ!

ಪಯಸ್ವಿನಿಯಲ್ಲಿ ನೀರು ಹರಿದರೂ ನಗರದ ಜನರಿಗೆ ಇನ್ನೊಂದು ಸಮಸ್ಯೆ ಎದುರಾಗಿದೆ. ನದಿಯಿಂದ ನೀರೆತ್ತಿ ಶುದ್ಧೀಕರಣಗೊಂಡು ಪೂರೈಕೆ ಆಗಬೇಕು. ಆದರೆ, ಕಲ್ಲುಮುಟ್ಲು ಶುದ್ಧೀಕರಣ ಘಟಕ ಸಮರ್ಪಕ ಸಾಮರ್ಥ್ಯ ಹೊಂದಿಲ್ಲದ ಕಾರಣ ಕೆಂಬಣ್ಣದ ನೀರು ಮನೆ-ಮನೆಗೆ ಹರಿಯುತ್ತಿದೆ. ಹೀಗಾಗಿ ಜನರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.

ಶುದ್ಧೀಕರಣ ಘಟಕ ನವೀಕರಣಕ್ಕೆ ಪ್ರಸ್ತಾವನೆ

ನ.ಪಂ.ನ ಕುಡಿಯುವ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕ ನವೀಕರಣಕ್ಕೆ 1.25 ಕೋಟಿ ರೂ. ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಲ್ಲಿಸುವ ಉದ್ದೇಶ ನ.ಪಂ. ಮುಂದಿದೆ. ಹಳೆಯ ಜಾಕ್‌ವೆಲ್ ಮತ್ತು ಪೈಪ್‌ಲೈನ್‌ ಬದಲಾವಣೆಗೆ 1.75 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ ಅನುದಾನವನ್ನು ಬಳಸುವ ಉದ್ದೇಶ ಹೊಂದಲಾಗಿದೆ. ಉದ್ದೇಶಿತ ಎಲ್ಲ ಯೋಜನೆಗಳು ಪ್ರಸ್ತಾವನೆ ಹಂತದಲ್ಲಿದ್ದು, ಈ ಮಳೆಗಾಲದಲ್ಲಿ ಈ ಕಾಮಗಾರಿ ಅನುಷ್ಠಾನಗೊಳ್ಳುವುದು ಅನುಮಾನವೆನಿಸಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕಡೂರು: ತಾಲೂಕಿಗೆ ಕೃಷ್ಣಾ ಕೊಳ್ಳದಿಂದ ಮಂಜೂರಾಗಿರುವ 1.45 ಟಿಎಂಸಿ ನೀರಿನ ಸದುಪಯೋಗ ಸಂಪೂರ್ಣವಾಗಿ ತಾಲೂಕಿಗೆ ಲಭಿಸಲಿ ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಹೇಳಿದರು. ಸುದ್ದಿಗೋಷ್ಠಿಯಲ್ಲಿ...

  • ಚಿತ್ರದುರ್ಗ: ಕಳೆದೊಂದು ವಾರದಿಂದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಕಡೆಗೂ ಸೆರೆ ಹಿಡಿಯಲಾಗಿದೆ. ದಸರಾ ಆನೆ ಅಭಿಮನ್ಯು ನೇತೃತ್ವದ...

  • ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಮಾವಿನ ತೋಟವೊಂದರಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಅಕ್ರಮ ರೇವ್‌ ಪಾರ್ಟಿಯ ಮೇಲೆ ಗ್ರಾಮಾಂತರ...

  • ತಿರುವನಂತಪುರಂ:  ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕೇರಳದ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌, ತಿರುವನಂತಪುರಂಗೆ ಭಾರತ ತಂಡದೊಂದಿಗೆ...

  • ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು...