ಬಯಲು ಶೌಚ ಮುಕ್ತ ಪುತ್ತೂರು: ನಗರಸಭೆ ಯೋಜನೆ

Team Udayavani, Oct 5, 2017, 3:25 PM IST

5-Mng—–11.jpg

ನಗರ : ಬಯಲು ಶೌಚ ಮುಕ್ತ ನಗರಸಭೆಯಾಗಿಸುವ ನಿಟ್ಟಿನಲ್ಲಿ ಪುತ್ತೂರಿನ ಎರಡು ಕಡೆಗೆ ಇ-ಶೌಚಾಲಯ ಬರಲಿದೆ. ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ, ಬೊಳುವಾರು ಶೌಚಾಲಯದ ಬಳಿ ನಿರ್ಮಿಸಲು ಟೆಂಡರ್‌
ಪ್ರಕ್ರಿಯೆ ನಡೆದಿದೆ.

ಘನ ತ್ಯಾಜ್ಯದ ಅನಂತರ ಎರಡನೇ ಬಹು ದೊಡ್ಡ ಸವಾಲು ಆಗಿರುವುದು ಶೌಚಾ ಲಯ. ಅದರಲ್ಲೂ ಪುತ್ತೂರಿನ ಪ್ರಮುಖ ಜಂಕ್ಷನ್‌ಗಳಲ್ಲಿ ಶೌಚಾಲಯದ ಕೊರತೆ ಬಹುದೊಡ್ಡ ಸಮಸ್ಯೆಯಾಗಿ  ಕಾಡುತ್ತಿದೆ. ಹೆಚ್ಚೇಕೆ? ವಾಣಿಜ್ಯ ಕಟ್ಟಡ ಗಳಲ್ಲೂ ಶೌಚಾಲಯ ಇಲ್ಲದಿರುವ ಉದಾಹರಣೆಗಳಿವೆ. ಹಾಗಿರುವಾಗ  ಶೌಚಾಲಯವನ್ನು ಅರಸಿ ಹೋಗುವುದಾದರೂ ಎಲ್ಲಿಗೆ? ಇದಕ್ಕೆ ಉತ್ತರ ನೀಡಲು ನಗರಸಭೆ ಸಿದ್ಧವಾಗಿದೆ. ಎರಡು ಇ- ಶೌಚಾಲಯ, ಎರಡು ಸಾಮೂಹಿಕಶೌಚಾಲಯ ನಿರ್ಮಾಣ ಹಾಗೂ ಹಾಲಿ ಇರುವ ಶೌಚಾಲಯಗಳ ನವೀಕರಣಕ್ಕೆ ಮುಂದಾಗಿದೆ.

ಶೌಚಾಲಯದ ಕೊರತೆ ನೀಗಿಸದೇ ಇದ್ದರೆ ಶುಚಿತ್ವದ ಬಗ್ಗೆ ಭಾಷಣ ಬಿಗಿದರೆ, ಜಾಗೃತಿ ಮೂಡಿಸಿದರೆ ಪ್ರಯೋಜನ 
ವೇನು? ನಗರಸಭೆ ವಾಣಿಜ್ಯ ಸಂಕೀರ್ಣದ ಹಿಂಭಾಗ ದುರ್ವಾಸನೆ ರಾಚುತ್ತಿದೆ. ಇದೇ ಪರಿಸ್ಥಿತಿ ಪುತ್ತೂರು ನಗರದ ಹಲವು ಕಡೆಗಳಲ್ಲಿ ಇದೆ. ಇದನ್ನೆಲ್ಲ ಗಮನಿಸಿದ ಪುತ್ತೂರು ನಗರಸಭೆ, ಶೌಚಾಲಯದ ಅನಿವಾರ್ಯವಯನ್ನು ಮನಗಂಡಿದೆ.

ಇ-ಶೌಚಾಲಯ
ಆಧುನಿಕ ವ್ಯವಸ್ಥೆಯ ಇ-ಶೌಚಾಲಯ ಮಹಾನಗರಗಳಲ್ಲಿ ಬಳಕೆಯಾಗುತ್ತಿವೆ. ಆದರೆ ಪುತ್ತೂರಿನ ಮಟ್ಟಿಗೆ ಇದೇ ಪ್ರಥಮ. ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಟೆಂಡರ್‌ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ಮುಂಭಾಗ ಎರಡು ಯೂನಿಟ್‌ ಹಾಗೂ ಬೊಳುವಾರಿನಲ್ಲಿ ಒಂದು ಯೂನಿಟ್‌ ನಿರ್ಮಿಸಲಾಗುವುದು. ಪ್ರತಿ ಯೂನಿಟ್‌ಗೆ
ಸುಮಾರು 6 ಲಕ್ಷ ರೂ. ವೆಚ್ಚವಿದೆ. ಅಂದರೆ ಮೂರು ಯೂನಿಟ್‌ಗೆ 18 ಲಕ್ಷ ರೂ. ವಿನಿಯೋಗವಾಗಲಿದೆ. ಉಳಿದ 5 ಲಕ್ಷ ರೂ.ಗಳಲ್ಲಿ ಸಂಪು, ಗ್ರಾನೈಟ್‌, ರೈಲಿಂಗ್ಸ್‌, ಫುಟ್‌ಪಾತ್‌ ನಿರ್ಮಾಣವಾಗಲಿದೆ.

ಸಾಮೂಹಿಕ ಶೌಚಾಲಯ
ನಗರಸಭೆ ಅಧ್ಯಕ್ಷರ ಮನೆ ಹಿಂಭಾಗದಲ್ಲೇ ಇರುವ ಅರ್ತಿಪದವು ಮಾಯಿಲರ ಕಾಲನಿ ಹಾಗೂ ಸಾಮೆತ್ತಡ್ಕ ಅಂಬೇಡ್ಕರ್‌ ಕಾಲನಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಲು 14ನೇ ಹಣಕಾಸು ನಿಧಿಯಡಿ ಅನುದಾನ ನೀಡಲಾಗಿದೆ.  ಸುಮಾರು 3.94 ಲಕ್ಷ ರೂ. ವೆಚ್ಚದಲ್ಲಿ ಎರಡೂ ಕಡೆಗಳಲ್ಲಿ ಶೌಚಾಲಯ ನಿರ್ಮಾಣವಾಗಲಿದೆ.

ಅರ್ತಿಪದವು ಮಾಯಿಲರ ಕಾಲನಿಯಲ್ಲಿ ಒಟ್ಟು 9 ಮನೆಗಳಿವೆ (ನಗರಸಭೆ ದಾಖಲೆಗಳ ಪ್ರಕಾರ ಎಂಟು). ಈ ಪೈಕಿ 4
ಮನೆಗಳಲ್ಲಿ ಶೌಚಾಲಯವಿದೆ. ಉಳಿದ ನಿವಾಸಿಗಳ ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಸಾಮೂಹಿಕ ಶೌಚಾಲಯವಾದರೂ ನಿರ್ಮಿಸಿಕೊಡುವ ಅನಿವಾರ್ಯವಯನ್ನು ನಗರಸಭೆ ಅರಿತುಕೊಂಡಿದೆ. 

ದರ್ಬೆ ಶೌಚಾಲಯ
ಪುತ್ತೂರಿನ ಎರಡನೇ ದೊಡ್ಡ ಪೇಟೆಯಾಗಿ ದರ್ಬೆ ಬೆಳೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಮಾತ್ರವಲ್ಲ,
ವಾಣಿಜ್ಯಿಕವಾಗಿಯೂ ಅಭಿವೃದ್ಧಿಗೊಳ್ಳುತ್ತಿದೆ. ಇಂತಹ ಪ್ರದೇಶಕ್ಕೆ ಶೌಚಾಲಯದ ಅಗತ್ಯ ಹೆಚ್ಚಿದೆ. ದರ್ಬೆ ವೃತ್ತದ ಬಳಿಯ ಶೌಚಾಲಯ ನಾದುರಸ್ತಿಯಲ್ಲಿದೆ. ನಿರ್ವಹಣೆ ಕೊರತೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ರೂ. ಅನುದಾನ ನೀಡಿ, ಕಾಮಗಾರಿ ನಡೆಸಲು ನಗರಸಭೆ ಮುಂದಾಗಿದೆ.

ಶೌಚ ಮುಕ್ತ ಪ್ರದೇಶವಾಗಿಸುವ ಬಯಕೆ
ಪ್ರತಿಯೊಂದು ಮನೆಯಲ್ಲೂ ಶೌಚಾಲಯ ಇರಬೇಕೆಂಬ ನಿಟ್ಟಿನಲ್ಲಿ ನಗರಸಭೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಜತೆಗೆ ಸಾರ್ವಜನಿಕರ ಬಳಕೆಗೂ ಶೌಚಾಲಯ ಸಿಗಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಪ್ರಥಮ ಬಾರಿಗೆ ಎರಡು ಕಡೆ ಮೂರು ಯೂನಿಟ್‌ ಇ-ಶೌಚಾಲಯ ನಿರ್ಮಿಸಲಾಗುವುದು. ಪುತ್ತೂರು ಹಾಗೂ ಬೊಳುವಾರಿನ ಶೌಚಾಲಯ ನವೀಕರಿಸಲಾಗಿದೆ. ಒಟ್ಟಿನಲ್ಲಿ ಬಯಲು ಶೌಚ ಮುಕ್ತ ಪ್ರದೇಶವಾಗಿ ಪುತ್ತೂರನ್ನು ಬೆಳೆಸುವ ಬಯಕೆ ಇದೆ.
ಜಯಂತಿ ಬಲ್ನಾಡ್, 
ಅಧ್ಯಕ್ಷೆ, ನಗರಸಭೆ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.