ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್!
Team Udayavani, Mar 26, 2021, 7:19 AM IST
ಮಂಗಳೂರು: ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳಿಂದಾಗಿ ಕಡಲು ಮಲಿನವಾಗಿ ಜಲಚರಗಳಿಗೆ ಅಪಾಯ ಎದುರಾಗುತ್ತಿದೆ ಎಂಬ ಆತಂಕ ಇರುವಾಗಲೇ ಮಂಗಳೂರಿನಲ್ಲಿ ಬಲೆಗೆ ಸಿಕ್ಕಿದ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದು ಆಶ್ಚರ್ಯ ಮೂಡಿಸಿದೆ!
ಅತ್ತಾವರದ ಮೀನು ಮಾರಾಟದ ಮಳಿಗೆಯ ಸಿಬಂದಿ ಮುರು ಮೀನು (ರೀಫ್ ಕಾಡ್ ಫಿಶ್) ಕತ್ತರಿಸಿ ಶುಚಿಗೊಳಿಸುತ್ತಿದ್ದ ವೇಳೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. “ಜನರು ಪ್ಲಾಸ್ಟಿಕ್‌ಗಳನ್ನು ಸಮುದ್ರ, ನದಿ ಕೆರೆಗಳಿಗೆ ಎಸೆದಲ್ಲಿ ಮೀನಿನ ಸಂತತಿ ಮೇಲೆ ನೇರ ಪರಿಣಾಮ ಬೀರಲಿದೆ’ ಎಂದು ಸಾಮಾಜಿಕ ಜಾಲತಾಣದ ಮೂಲಕ ಅವರು ವಿಡಿಯೋ ಶೇರ್ ಮಾಡಿದ್ದಾರೆ.
ಆತಂಕದ ಮುನ್ಸೂಚನೆ :
ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ| ಸೆಂಥಿಲ್ ವೇಲ್ ಅವರ ಪ್ರಕಾರ “ಪ್ಲಾಸ್ಟಿಕ್‌ಗಳು ನೀರಿನಲ್ಲಿ ಸೇರಿ ಕೆಲವು ಬಾರಿ ಸೂಕ್ಷ್ಮ ಕಣಗಳಾಗಿ ಪರಿವರ್ತನೆಯಾಗುತ್ತವೆ. ಮೀನು ಮರಿಗಳು ಅವುಗಳನ್ನು ತಿಂದು ಸಾಯುತ್ತವೆ. ಜತೆಗೆ ಮೀನುಗಾರಿಕೆ ಸಂದರ್ಭ ಟ್ರಾಲ್ ಬೋಟ್‌ಗಳ ಬಲೆಗಳು ಸಮುದ್ರದ ತಳಭಾಗವನ್ನು ತಲುಪುವಾಗ ಶೇ. 40ರಷ್ಟು ಪ್ಲಾಸ್ಟಿಕ್‌ಗಳು ಕೂಡ ಮೀನಿನ ಜತೆ ಬಲೆ ಸೇರುತ್ತವೆ. ಬಲೆಯನ್ನು ಮೇಲೆತ್ತುವಾಗ ಮೀನುಗಳು ಗಾಬರಿಯಲ್ಲಿ ನೀರಿನ ಜತೆ ಪ್ಲಾಸ್ಟಿಕ್ ನುಂಗುವ ಸಾಧ್ಯತೆ ಅಧಿಕವಿದೆ. ಹೀಗಾಗಿಯೇ ಸಮುದ್ರದಲ್ಲಿ ಬೂತಾಯಿ ಮೀನಿನ ಪ್ರಮಾಣ ಕಡಿಮೆಯಾಗುತ್ತಿದೆ. ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಪ್ಲಾಸ್ಟಿಕ್‌ನಿಂದ ಜಲಚರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಆತಂಕದ ಮುನ್ಸೂಚನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ