ಮೂಡುಬಿದಿರೆಗೆ ಪ್ರಮೀಳಾ ಸಾಧ್ವಿಜೀ ಭೇಟಿ
Team Udayavani, Jan 16, 2021, 11:12 PM IST
ಮೂಡುಬಿದಿರೆ: ಶ್ವೇತಾಂಬರ್ ತೇರಾ ಪಂಥಿ ಸಮಾಜದ ಪರಮೋಚ್ಚ ಗುರು ಮಹಾ ಶ್ರಮಣ್‌ಜೀ ಶಿಷ್ಯೆ ಪ್ರಮೀಳಾ ಸಾಧ್ವಿಜೀ ಹಾಗೂ ಸಂಘದವರು ಮಕರ ಸಂಕ್ರಾಂತಿಯಂದು ಮೂಡುಬಿದಿರೆ ಪುರಪ್ರವೇಶ ಮಾಡಿದರು.
ಸಂಘದವರು 18 ಬಸದಿ ಸಂದರ್ಶಿಸಿದ ಬಳಿಕ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸಿದ್ಧಾಂಥ ಶಾಸ್ತ್ರಗಳ ದರ್ಶನ ಮಾಡಿಸಿ ಶಾಸ್ತ್ರದಾನ ಮಾಡಿದರು.
ಸಾಧ್ವಿ ಪ್ರಮೀಳಾ, ಸಾಧ್ವಿ ಆಸ್ತಾ, ಸಾಧ್ವಿ ಧೈರ್ಯ, ಸಾಧ್ವಿ ವಿಗ್ಯ ಮಾತಾಜಿಯವರು ಶ್ರೀಮಠದಲ್ಲಿ ನಡೆದ, 108 ದಿವ್ಯ ಸಾಗರ ಮುನಿಮಹಾರಾಜರ ಇಷ್ಟೋಪದೇಶ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಆಶೀರ್ವಚನವಿತ್ತರು.
“ದೇಹ ಶೃಂಗಾರದಿಂದ ಜೀವನದ ಅನಂತ, ಸುಖ ನೆಮ್ಮದಿ ಅಸಾಧ್ಯ ಆತ್ಮ ಜಾಗೃತಿ ತಪಸ್ಸು ಪೂಜೆ, ಧ್ಯಾನ ಸತ್ಸಂಗದಿಂದ ನಿಜವಾದ ಸಂತೋಷ ಸಿಗುವುದು’ ಎಂದು ದಿವ್ಯಸಾಗರ ಮುನಿಮಹಾರಾಜರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಅಭಯ ಕುಮಾರ್, ಸುಹಾಸ್‌ಅರಿಗಾ, ತೇಜ್‌ಕರಣ್ ಜೈನ್ ಮಂಗಳೂರು ಹಾಗೂ ಚಿಕ್ಕಮಗಳೂರು, ಚೆನ್ನೈ, ತೇರಾ ಪಂಥಿ ಜೈನ ಸಮಾಜ ಬಾಂಧವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆರೋಪಿಗಳ ಐಶಾರಾಮಿ ಕಾರು ಮಾರಾಟ ಪ್ರಕರಣ, ಕಬ್ಬಳ್ ರಾಜ್ ಸೇರಿ ಇಬ್ಬರು ಪೊಲೀಸರು ಅಮಾನತು
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ
ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ : ಜನಪದ ವಿದ್ವಾಂಸ ಅಮೃತ ಸೋಮೇಶ್ವರ
ತುಳು ಸಾಹಿತ್ಯ ಅಕಾಡೆಮಿ: ಪ್ರಶಸ್ತಿ ಪ್ರಕಟ