ಪ್ರವೀಣ್ ಹತ್ಯೆ ಪ್ರಕರಣ : ಬಿ.ಸಿ.ರೋಡು ಕೈಕಂಬದಲ್ಲಿ ಎನ್ಐಎ ದಾಳಿ, SDPI ಪ್ರತಿಭಟನೆ
Team Udayavani, Sep 8, 2022, 9:13 AM IST
ಬಂಟ್ವಾಳ: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ತಂಡ ಕಳೆದ ಕೆಲವು ದಿನಗಳಲ್ಲಿ ತನಿಖೆ ಚುರುಕುಗೊಳಿಸಿ ಸಾಕಷ್ಟು ಕಡೆ ದಾಳಿ ನಡೆಸಿದ್ದು, ಗುರುವಾರ ಬೆಳಗ್ಗೆ ಬಿ.ಸಿ.ರೋಡು ಕೈಕಂಬದಲ್ಲೂ ಮನೆಯೊಂದಕ್ಕೆ ದಾಳಿ ನಡೆಸಿದ್ದಾರೆ.
ಕೈಕಂಬ ಪರ್ಲಿಯಾದಲ್ಲಿರುವ ಎಸ್.ಡಿ.ಪಿ.ಐ.ಮುಖಂಡ ರಿಯಾಜ್ ಫರಂಗಿಪೇಟೆ ಅವರ ಮನೆಗೆ ದಾಳಿ ನಡೆಸಿದೆ. ದಾಳಿಯನ್ನು ಖಂಡಿಸಿ ಸ್ಥಳದಲ್ಲಿ ಜಮಾಯಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿ ಘೋಷಣೆಗಳನ್ನು ಕೂಗಿದ್ದು, ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದ್ದಾರೆ.
ಇದನ್ನೂ ಓದಿ : ಕರಾವಳಿಯ ಕೆಲವೆಡೆ ಮಳೆ: ಮೂರು ದಿನ ಆರೆಂಜ್ ಅಲರ್ಟ್